HBD NTR: ಜೂ.ಎನ್‌ಟಿಆರ್ ಆಸ್ತಿ ಮೌಲ್ಯ ಎಷ್ಟು ನೂರಾರು ಕೋಟಿ ಗೊತ್ತಾ?
Jr NTR assets: ಎನ್ ಟಿಆರ್ ಅಭಿನಯದ ಆರ್ ಆರ್ ಆರ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿದ್ದು ಗೊತ್ತೇ ಇದೆ. ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ RRR ನಾಟು ನಾಟು ಆಸ್ಕರ್ ಪ್ರಶಸ್ತಿಯನ್ನು ಪಡೆದರು. ಆರ್ಆರ್ಆರ್ ನಂತರ, ಎನ್‌ಟಿಆರ್ ಕೊರಟಾಲ ಶಿವ ನಿರ್ದೇಶನದಲ್ಲಿ ತಮ್ಮ 30 ನೇ ಚಿತ್ರವನ್ನು ಮಾಡುತ್ತಿದ್ದಾರೆ. ಇದೇ ವೇಳೆ ಎನ್ ಟಿಆರ್ ಇಂದು ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಆಸ್ತಿ ವಿವರಗಳನ್ನು ನೋಡೋಣ..
Jr NTR assets: ಯಂಗ್ ಟೈಗರ್ ಎನ್ ಟಿಆರ್ ಇತ್ತೀಚೆಗೆ ರಾಜಮೌಳಿ ಅವರ ಆರ್ಆರ್ಆರ್ ಚಿತ್ರದಲ್ಲಿ ನಟಿಸಿ ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಸೂಪರ್ ಕ್ರೇಜ್ ಸೃಷ್ಟಿಸಿದರು. 2022 ಮಾರ್ಚ್ 24 ರಂದು RRR ಬಿಡುಗಡೆಯಾಯಿತು ಮತ್ತು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆಹಾಕಿತು. ಮೇಲಾಗಿ ಆಸ್ಕರ್ ರೇಸ್ ನಲ್ಲಿ ಹಾಲಿವುಡ್ ಸಿನಿಮಾಗಳೊಂದಿಗೆ ಸ್ಪರ್ಧಿಸಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ನಾಟು ನಾಟು ಹಾಡು ಪ್ರಶಸ್ತಿಯನ್ನು ಗೆದ್ದಿದೆ. ಮತ್ತು
ಇದನ್ನೂ ಓದಿ : ಫ್ಯಾನ್ಸ್‌ಗೆ ಬಿಗ್ ಗಿಫ್ಟ್ ನೀಡಿದ NTR : ಬರ್ತ್ ಡೇಗೂ ಮುನ್ನವೇ ʼDevaraʼ ಟೈಟಲ್ ರಿವೀಲ್
ಎನ್ ಟಿಆರ್ 40ನೇ ಹುಟ್ಟುಹಬ್ಬದ ಸಂದರ್ಭದಲ್ಲಿ NTR 30 ತಂಡ ಖತರ್ನಾಕ್ ಅಪ್ ಡೇಟ್ ನೀಡಿದ್ದು ಗೊತ್ತೇ ಇದೆ. NTR 30 ಸ್ಟ್ ಲುಕ್ ಜೊತೆಗೆ ಟೈಟಲ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರಕ್ಕೆ ದೇವರಾ ಎಂದು ಟೈಟಲ್ ನೀಡಲಾಗಿದೆ. ಮೇಲಾಗಿ ಎನ್‌ಟಿಆರ್ ಫಸ್ಟ್‌ಲುಕ್‌ನಲ್ಲಿ ಖಡಕ್ ಆಗಿ ಕಾಣಿಸಿದ್ದಾರೆ.
ಇಂದು ಗ್ಲೋಬಲ್ ಸ್ಟಾರ್ ಎನ್‌ಟಿಆರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ಎಷ್ಟು ಕೋಟಿ ಆಸ್ತಿಯ ಎಂದು ನೋಡೋಣ.. 1991ರಲ್ಲಿ ಬಾಲನಟನಾಗಿ ಎನ್‌ಟಿಆರ್ ಸಿನಿ ಜರ್ನಿ ಶುರು ಮಾಡಿದರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. ಇನ್ನು ಎನ್‌ಟಿಆರ್ ಆಸ್ತಿ ವಿಚಾರಕ್ಕೆ ಬಂದರೆ ಅವರು 25 ಕೋಟಿ ಮೌಲ್ಯದ ಐಷಾರಾಮಿ ಭವನ ಮತ್ತು 80 ಕೋಟಿ ಮೌಲ್ಯದ ಖಾಸಗಿ ಜೆಟ್ ಹೊಂದಿದ್ದಾರೆ. ಇವುಗಳ ಜೊತೆಗೆ ವೃಂದಾವನಂ ಹೆಸರಿನ ಆರೂವರೆ ಎಕರೆ ಕೃಷಿ ಭೂಮಿಯೂ ಇದೆ.
ಇದನ್ನೂ ಓದಿ : ʼಜೋಡೆತ್ತುʼ ಸರ್ಕಾರಕ್ಕೆ ಶುಭ ಕೋರಿದ ಸಲಗ..! ಛಲ ಬಿಡದ ತ್ರಿವಿಕ್ರಮನಂತೆ ಕೆಲಸ ನಿರ್ವಹಿಸಿ ಎಂದ ವಿಜಿ..
ಇವುಗಳಲ್ಲದೆ ಬೆಂಗಳೂರಿನಲ್ಲಿ ಕೆಲವು ಆಸ್ತಿಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಇವುಗಳ ಜೊತೆಗೆ ಕೆಲವು ಬೆಲೆಬಾಳುವ ಕಾರುಗಳು ಮತ್ತು ವಾಚ್‌ಗಳನ್ನು ಸಹ ಹೊಂದಿದ್ದಾರೆ. ಎನ್ ಟಿಆರ್ ಆಸ್ತಿಯ ಒಟ್ಟು ಮೌಲ್ಯ 571 ಕೋಟಿ ರೂಪಾಯಿ ಆಗಲಿದೆ ಎನ್ನಲಾಗಿದೆ. ಮತ್ತೊಂದೆಡೆ, ಎನ್‌ಟಿಆರ್‌ನ ಮಾಸಿಕ ಆದಾಯ ರೂ. 3 ಕೋಟಿ ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : Jr, NTRಗೆ ಇಂದು 40ನೇ ಹುಟ್ಟು ಹಬ್ಬದ ಸಂಭ್ರಮ..! ತಾರಕ್ ಸಿನಿ ಪಯಣ ಹೀಗಿದೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ