ಸದ್ಯ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ರಾಕುಲ್ ಪ್ರೀತ್ ಮೊದಲ ಸಂಬಳ ಎಷ್ಟು ಗೊತ್ತಾ?
Rakul Preet`s first salary: ಸ್ಟಾರ್ ಹೀರೋಯಿನ್ ರಾಕುಲ್ ಪ್ರೀತ್ ಸಿಂಗ್ ಇತ್ತೀಚೆಗಷ್ಟೇ ತಾವು ಮೊದಲು ಗಳಿಸಿದ ಆದಾಯ ಎಷ್ಟು ಎಂಬುದನ್ನು ತಿಳಿಸಿದ್ದಾರೆ..
Rakul Preet Singh: 2009 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ರಾಕುಲ್ ಪ್ರೀತ್ ಸಿಂಗ್ ಕನ್ನಡದ ಗಿಲ್ಲಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.. ನಂತರ ಎರಡನೇ ಸಿನಿಮಾದ ಮೂಲಕವೇ ಈ ಸುಂದರಿ ಟಾಲಿವುಡ್‌ಗೆ ಹಾಡಿದರು.. ಅಲ್ಲಿ ಸಂದೀಪ್ ಕಿಶನ್ ಅಭಿನಯದ ವೆಂಕಟಾದ್ರಿ ಎಕ್ಸ್ ಪ್ರೆಸ್ ಆಕೆಗೆ ಬ್ರೇಕ್ ನೀಡಿತು. ಮುಂದೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ರಾಕುಲ್ ಸ್ಟಾರ್ ಸ್ಥಾನಮಾನ ಗಳಿಸಿದ್ದರು.
ಇದನ್ನೂ ಓದಿ :ಸಪ್ತಭಾಷೆಯಲ್ಲಿ ನಿರ್ಮಾಣವಾಗುತ್ತಿದೆ ರಾಧಿಕಾ ಕುಮಾರಸ್ವಾಮಿ ಅಭಿನಯದ "ಅಜಾಗ್ರತ" : ನೂರು ದಿನಗಳ ಚಿತ್ರೀಕರಣ ಪೂರ್ಣ
ರಾಕುಲ್ ಅನೇಕ ಟಾಪ್ ಸ್ಟಾರ್‌ಗಳ ಎದುರು ನಟಿಸಿದ್ದಾರೆ.. ಮಾಡೆಲ್ ಆಗಿ ವೈತ್ತಿ ಜೀವನವನ್ನು ಶುರುಮಾಡಿ ನಟಿ ಒಂದು ತಿಂಗಳಿಗೆ ಎಷ್ಟು ಗಳಿಸುತ್ತಿದ್ದರು ಎನ್ನುವುದರ ಮಾಹಿತಿಯನ್ನು ರಾಕುಲ್ ಪ್ರೀತ್ ಹೇಳಿಕೊಂಡಿದ್ದಾರೆ.. ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ ನಟಿ "ಇಂಡಸ್ಟ್ರಿಗೆ ಬಂದ ಮೇಲೆ ನನ್ನ 25 ವರ್ಷದವರೆಗೂ ನನ್ನ ತಾಯಿ ನನಗೆ ಜೊತೆಯಾಗಿದ್ದರು.. ಮಾಡೆಲ್ ಆಗಿ ನನ್ನ ಮೊದಲ ಗಳಿಕೆ ರೂ. 5 ಸಾವಿರ. ಅಲ್ಲಿಂದ ಈ ಮಟ್ಟಕ್ಕೆ ಬಂದಿದ್ದೇನೆ.. ಈ ಯಶಸ್ವಿ ಪಯಣದಲ್ಲಿ ತಂದೆ-ತಾಯಿ ಮತ್ತು ಆಪ್ತ ಸ್ನೇಹಿತರ ಪ್ರೋತ್ಸಾಹ ಮತ್ತು ಬೆಂಬಲ ತುಂಬಾ ಇದೆ. ಅವರಿಲ್ಲದಿದ್ದರೆ ನಾನು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೆ" ಎಂದಿದ್ದಾರೆ..
ಇದನ್ನೂ ಓದಿ : Actress Honey Rose:ರೆಡ್ ಡ್ರೆಸ್‌ನಲ್ಲಿ ಹನಿ ರೋಸ್ ಸಖತ್ ಟ್ರೋಲ್ಡ್: ನಟ್ಟಿಗರು ಅಂದಿದ್ದೇನು?
ಇನ್ನು ಸದ್ಯದಲ್ಲೇ ರಾಕುಲ್ ಪ್ರೀತ್ ಸಿಂಗ್ ಮದುವೆ ಆಗುತ್ತಿದ್ದಾರೆ.. ಅವರು ನಟ ಮತ್ತು ನಿರ್ಮಾಪಕ ಜಾಕಿ ಭಗ್ನಾನಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು.. ಇದೀಗ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.. ಫೆಬ್ರವರಿ 21 ರಂದು ಗೋವಾದಲ್ಲಿ ಅದ್ಧೂರಿ ವಿವಾಹ ನಡೆಯಲಿದ್ದು.. ರಾಕುಲ್ ಪ್ರೀತ್ ಅವರ ಮದುವೆಯಲ್ಲಿ ಕುಟುಂಬ ಸದಸ್ಯರು, ಆಪ್ತರು ಮತ್ತು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.