Pawan Kalyan: ಟಾಲಿವುಡ್ ಇಂಡಸ್ಟ್ರಿಯಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಕ್ರೇಜ್ ಹೇಳತೀರದು. ಎರಡು ತೆಲುಗು ರಾಜ್ಯಗಳಲ್ಲಿ ಅವರ ಸಿನಿಮಾಗಳು ಥಿಯೇಟರ್‌ಗಳಲ್ಲಿ ಬರುತ್ತಿವೆ. ಪವನ್ ಅವರ ಸಿನಿಮಾಗಳ ಶೂಟಿಂಗ್ ಶುರುವಾಗದೇ ಬಹಳ ದಿನಗಳಾಗಿವೆ. ಆದರೆ ಈಗ ಪವನ್ ಕಲ್ಯಾಣ್ ಅವರು ಎಪಿಯ ಉಪ ಮುಖ್ಯಮಂತ್ರಿಯಾಗಿ ಜವಾಬ್ದಾರಿಯನ್ನು ಹೊತ್ತಿದ್ದಾರೆ.. ಶೀಘ್ರದಲ್ಲೇ ಅವರು ತಮ್ಮ ಮುಂದಿನ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ಕಿರಿಯ ಸಹೋದರನಾಗಿ ಚಿತ್ರರಂಗದ ಪಯಣ ಆರಂಭಿಸಿದ ಪವನ್ ತಮ್ಮದೇ ಪ್ರತಿಭೆಯಿಂದ ಸ್ಟಾರ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಹಲವಾರು ಹಿಟ್‌ ಸಿನಿಮಾಗಳ ಮೂಲಕ ಅತಿ ಕಡಿಮೆ ಸಮಯದಲ್ಲಿ ಸ್ಟಾರ್ ಡಮ್ ಪಡೆದರು. ಈಗ ಅವರು ಟಾಲಿವುಡ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅಲ್ಲದೇ ಚಿತ್ರರಂಗದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಾಯಕನೆನಿಸಿಕೊಂಡಿದ್ದಾರೆ.. ಆದರೆ ಪವನ್ ಕಲ್ಯಾಣ್ ಅವರ ಮೊದಲ ಸಿನಿಮಾಗೆ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ? 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಹಸೆಮಣೆ ಏರಲಿರುವ ಅನುಶ್ರೀ ಓದಿದ್ದೇನು.. ಇವರ ನಿಜವಾದ ತಂದೆ ಯಾರು ?


ಪವನ್ ಕಲ್ಯಾಣ್ ಆರಂಭದಲ್ಲಿ ನಿರ್ದೇಶಕನಾಗಲು ಬಯಸಿದ್ದರು. ಆದರೆ ಅತ್ತಿಗೆ ಸುರೇಖಾ ಮಾತಿನಿಂದ ನಟನೆಯತ್ತ ಹೆಜ್ಜೆ ಹಾಕಿದರು. 1996 ರಲ್ಲಿ ಬೆಳ್ಳಿತೆರೆಗೆ ನಾಯಕರಾಗಿ ಪಾದಾರ್ಪಣೆ ಮಾಡಿದರು. ಇವಿವಿ ನಿರ್ದೇಶನದ  ಚಿತ್ರದಲ್ಲಿ ನಾಗಾರ್ಜುನ ಅವರ ಸೊಸೆ ಸುಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಹಿಂದಿಯ ಖಯಾಮತ್ ಸೆ ಕಯಾಮತ್ ಚಿತ್ರದ ರಿಮೇಕ್ ಆಗಿದೆ. ಆಗ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಈ ಚಿತ್ರವನ್ನು ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರವಿಂದ್ ನಿರ್ಮಿಸಿದ್ದಾರೆ.


ಇದನ್ನೂ ಓದಿ-ಇಂಡಸ್ಟ್ರೀಗೆ ಬಿಗ್‌ಶಾಕ್..‌ ಡಿವೋರ್ಸ್‌ ನೋವಿನಿಂದ ಹೊರಬರಲಾಗದೇ ಸಂಚಲನದ ನಿರ್ಧಾರ ತೆಗೆದುಕೊಂಡ ಸಮಂತಾ!


ಆದರೆ ಪವನ್ ಕಲ್ಯಾಣ್ ತಮ್ಮ ಮೊದಲ ಸಿನಿಮಾಗೆ ತೆಗೆದುಕೊಂಡ ಸಂಭಾವನೆ ಕೇವಲ 50 ಸಾವಿರ ರೂ.. ಅಂದರೆ ತಿಂಗಳಿಗೆ ಐದು ಸಾವಿರ ಮಾತ್ರ ತೆಗೆದುಕೊಂಡರು. ಅಂದರೆ ಇಡೀ ಚಿತ್ರ ಮುಗಿದಾಗ 50 ಸಾವಿರ ರೂ. ಇದನ್ನು ತಿಳಿದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಸದ್ಯ ಪವನ್ ತಮ್ಮ ಒಂದು ಚಿತ್ರಕ್ಕೆ 2 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ