ಕೇವಲ ತನ್ನ ಕಣ್ಸನ್ನೆಯಿಂದಲೇ ನ್ಯಾಶನಲ್ ಲೆವೆಲ್'ನಲ್ಲಿ ಒಂದೇ ರಾತ್ರಿಗೆ ಫೇಮಸ್ ಆದ ಮಲಯಾಳಂ ಬೆಡಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಪಾದನೆಯನ್ನು ಆರಂಭಿಸಿದ್ದಾಳಂತೆ. ಆಕೆ ಸೋಶಿಯಲ್ ಮಿಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ರೆ ಸಾಕು, 8 ಲಕ್ಷ ರೂ. ಗಳಿಸ್ತಿದಾಳಂತೆ. ಹಾಗಂತ ಹೇಳ್ತಿದೆ ಸೋಶಿಯಲ್ ಮೀಡಿಯಾ ರಿವ್ಯೂ. 


COMMERCIAL BREAK
SCROLL TO CONTINUE READING

ಪ್ರೇಮಿಗಳ ದಿನಾಚರಣೆಯಂದು ತನ್ನ ಆರು ಅದಾರ್ ಲವ್ ಚಿತ್ರದ ಮಾಣಿಕ್ಯ ಮಲಯಾರ ಪೂವಿ ಒಂದೇ ರಾತ್ರಿಗೆ ಇಡೀ ರಾಷ್ಟ್ರದ ಜನತೆಯ ಮನಗೆದ್ದು ಪ್ರಖ್ಯಾತಿಯಾದ ಪ್ರಿಯಾ ಪ್ರಕಾಶ್ ವಾರಿಯರ್ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಿದ ಹೆಸರಂತೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ಈಕೆ ಹೊಂದಿರುವ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 5.1ಮಿಲಿಯನ್​! ಮಾರ್ಕ್​ ಜುಕರ್​ ಬರ್ಗ್'​, ಡೊನಾಲ್ಡ್ ಟ್ರಂಪ್ ಸೇರಿದಂತೆ ಎಲ್ಲರನ್ನೂ ತನ್ನ ಒಂದೇ ಕಣ್ಣೇಟಿಂದಲೇ ಹಿಂದೆ ಹಾಕಿದ ಈ ಚೆಲುವೆ, ಈಗ ಎಲ್ಲಾ ಹುಡುಗರು ಇಷ್ಟ ಪಡೋ ಸನ್ನಿ ಲಿಯಾನಿನೂ ಮೀರಿಸಿದ್ದಾಳೆ !


ಹೀಗೆ ಇನ್'ಸ್ಟಾಗ್ರಾಂನಲ್ಲಿ ಹೆಚ್ಚು ಫಾಲೋವರ್ಸ್ ಪಡೆದಿದ್ದೇ ತಡ, ಪ್ರಿಯಾ ಟ್ವಿಟರ್​, ಫೇಸ್​​ಬುಕ್​ನಲ್ಲೂ ಅಕೌಂಟ್​ ಕ್ರಿಯೇಟ್​ ಮಾಡಿ ಒಂದು ಪೋಸ್ಟ್​ ಹಾಕಿ 8 ಲಕ್ಷ ಸಂಬಳ ಪಡೀತಾಳಂತೆ. ಇದೆಲ್ಲ ಲಕ್ ಅಲ್ದೆ ಮತ್ತೇನು?