ಸೌತ್ ಬ್ಯೂಟಿ ಪೂಜಾ ಹೆಗ್ಡೆ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತಾ?
Pooja Hegde Property: ನಾಗ ಚೈತನ್ಯ ನಾಯಕನಾಗಿ ನಟಿಸಿರುವ ಒಕ ಲೈಲಾ ಕೋಸಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ಪೂಜಾ ಹೆಗಡೆ ಸದ್ಯ ಎಷ್ಟು ಕೋಟಿ ಆಸ್ತಿಯ ಒಡತಿ ಎಂದು ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ.
Pooja Hegde: ತೆಲುಗಿನ ಒಕ ಲೈಲಾ ಕೋಸಂ ಚಿತ್ರ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿತ್ತು. ನಂತರ ನಟಿ ಪೂಜಾ ಹೆಗ್ಡೆ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸಿದರು. ಈ ಚಿತ್ರವೂ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ನಂತರ ಮತ್ತೆ ಟಾಲಿವುಡ್‌ಗೆ ಮರಳಿದರು. ಸದ್ಯ ನಟಿ ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ.
ಸ್ಟಾರ್ ಕ್ರಿಕೆಟರ್ ಜೊತೆ ಮದುವೆ: ಟಾಪ್ ಹೀರೋಗಳ ಎದುರು ನಟಿಸಿದ್ದ ನಟಿ ಪೂಜಾ ಹೆಗ್ಡೆ ಎರಡು ವರ್ಷಗಳಿಂದ ಫ್ಲಾಪ್ ಸಿನಿಮಾಗಳನ್ನೇ ನೀಡುತ್ತಿದ್ದಾರೆ. ಆದರೆ ಇತ್ತೀಚೆಗೆ ನಟಿ ಸಿನಿಮಾ ಅವಕಾಶಗಳಿಲ್ಲದೇ ಕಂಗಾಲಾಗಿದ್ದಾರೆ ಎನ್ನಲಾಗಿದೆ. ಇದೆಲ್ಲದರ ನಡುವೆ ಅವರ ಮದುವೆ ವಿಚಾರವೊಂದು ಸಖತ್ ವೈರಲ್ ಆಗುತ್ತಿದೆ. ಪೂಜಾ ಸ್ಟಾರ್ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದು, ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ-ʼವಾಟ್ಸಾಪ್ ಚಾನೆಲ್ʼ ಸೃಷ್ಟಿಕರ್ತನನ್ನೇ ಹಿಂದಿಕ್ಕಿದ ಕತ್ರಿನಾ..! ಟಾಪ್ 9 ಸೆಲೆಬ್ರಿಟಿ ಲಿಸ್ಟ್ ಇಲ್ಲಿದೆ
ಪೂಜಾ ಹೆಗ್ಡೆ ಆಸ್ತಿ ವಿವರ: ಪೂಜಾ ಅಭಿಮಾನಿಗಳು ಇತ್ತೀಚೆಗೆ ಆಕೆ ಗಳಿಸಿದ ಆಸ್ತಿ ಎಷ್ಟು? ಎನ್ನುವ ವಿವರಗಳಿಗಾಗಿ ಹುಡುಕಾಡುತ್ತಿದ್ದಾರೆ. ಪೂಜಾ ಹೆಗ್ಡೆ ಸುಮಾರು 20 ಸಿನಿಮಾಗಳಲ್ಲಿ ನಟಿಸಿದ್ದು, 60 ಕೋಟಿ ಆಸ್ತಿ ಹೊಂದಿದ್ದಾರೆ. ಮತ್ತೊಂದು ಕಡೆ ವಿವಿಧ ಬ್ರಾಂಡ್‌ಗಳಿಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸಿ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ.
ಇನ್ನೂ ನಟಿ ಪೂಜಾ ಪ್ರತಿ ಜಾಹೀರಾತಿಗೆ ರೂ.3 ಕೋಟಿ ಸಂಭಾವನೆ ಪಡೆಯುತ್ತಾರೆ. ಇದಲ್ಲದೇ ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿ ಪೋಸ್ಟ್‌ಗೆ ರೂ.40 ಲಕ್ಷ ಗಳಿಸುತ್ತಿದ್ದಾರೆ. 2 ಕೋಟಿ ಮೌಲ್ಯದ ಎರಡು ಐಷಾರಾಮಿ ಕಾರುಗಳ ಜತೆಗೆ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನ, 10 ಕೋಟಿ ರೂಪಾಯಿ ಬೆಲೆಬಾಳುವ ಮನೆ, 4 ಕೋಟಿ ಬೆಲೆಬಾಳುವ ಇನ್ನೊಂದು ಮನೆ, ಹಲವೆಡೆ ಕೆಲವು ನಿವೇಶನಗಳಿವೆ ಎಂದು ವರದಿ ಮಾಡಲಾಗಿದೆ.
ಇದನ್ನೂ ಓದಿ-ಕಾಂತಾರ ಚಿತ್ರಕ್ಕೆ 1 ವರ್ಷ...! ‘ವರಾಹ ರೂಪಂ’ ವಿಡಿಯೋ ಸಾಂಗ್ ರಿಲೀಸ್ ಮಾಡಲು ಸಜ್ಜಾದ ಹೊಂಬಾಳೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.