Jailer: ತಲೈವ ನಟನೆಯ ಜೈಲರ್‌ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿತ್ತು. ಇನ್ನು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವಾಗಲೇ ಓಟಿಟಿ ಅಂಗಳಕ್ಕೂ ಕಾಲಿಟ್ಟಿದೆ. 


COMMERCIAL BREAK
SCROLL TO CONTINUE READING

ಇನ್ನು ಈ ಸಿನಿಮಾದಲ್ಲಿ ಅದ್ಭುತ ಪಾತ್ರವರ್ಗದಿಂದ ಮಿಂಚಿದ ಜೈಲರ್‌ನ ತಾರಾಗಣದ ಸಂಭಾವನೆ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು. ಅದರಲ್ಲೂ ಖಳನಾಯನಾಕನಾಗಿ ರಾರಾಜಿಸಿದ್ದ ವಿನಾಯಕನ್‌ ಪಡೆದಿರುವ ಸಂಭಾವನೆ ಬಗ್ಗೆ ಹಲವಾರು ವರದಿಗಳು ಮಾಹಿತಿ ನೀಡಿದ್ದವು. ಆದರೆ ಅದು ನಿಜವಾ ಅಥವಾ ಸುಳ್ಳಾ ಎಂಬುದರ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಆ ಮಾಹಿತಿ ಇಲ್ಲಿದೆ ನೋಡಿ...


ಇದನ್ನೂ ಓದಿ-ಧ್ರುವ ಸರ್ಜಾ ಮಡಿಲಿಗೆ ಮಗುವಾಗಿ ಸೇರಿದ ಚಿರು..ಗಂಡು ಮಗುವಿಗೆ ಜನ್ಮ ನೀಡಿದ ಪ್ರೇರಣಾ!!   


ಕೋಟಿ ಕೋಟಿ ಕಲೆಕ್ಷನ್‌ ಮಾಡಿ ಬೀಗಿರುವ ಜೈಲರ್‌ ಸಿನಿಮಾ ನಿರ್ಮಾಪಕರು ನಟರನ್ನು, ಜೊತೆಗೆ ಕೈಜೋಡಿಸಿದ ಯಾರನ್ನೂ ಮರೆತಿಲ್ಲ. ಈ ಚಿತ್ರದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಗಿಫ್ಟ್‌ ನೀಡಿ ಸಂಭ್ರಮಿಸಿದ್ದರು. 


ಸದ್ಯ ಹಲವಾರು ವರದಿಗಳು ವಿನಾಯಕ್‌ 35 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನುತ್ತಿವೆ. ಇದಕ್ಕೆ ಅವರೇ ಸ್ವತಃ ಒಂದು ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು "ಮಾಡಲಾದ ವರದಿಗಳಂತೆ ಜೈಲರ್‌ ಸಿನಿಮಾಗಾಗಿ ನಾನು 35 ಲಕ್ಷ ಸಂಭಾವನೆ ಪಡದುಕೊಂಡಿಲ್ಲ. ನಾನು ಈ ವದಂತಿಯ ಮೂರು ಪಟ್ಟು ಹಣವನ್ನು ಪಡೆದುಕೊಂಡಿದ್ದೇನೆ ನಿರ್ಮಾಪಕರು ನಾನು ಕೇಳಿದ್ದಷ್ಟು ನೀಡಿದ್ದಾರೆ. ಹಾಗೆಯೇ ಶೂಟಿಂಗ್‌ ಸೆಟ್‌ನಲ್ಲಿ ನನಗೆ ಒಳ್ಳೆಯ ಉಪಚಾರ ಮಾಡಿ ನೋಡಿಕೊಂಡಿದ್ದಾರೆ" ಎಂದು ಖಳನಾಯಕ ವಿನಾಯಕನ್ ತಿಳಿಸಿದ್ದಾರೆ. 


ಇದನ್ನೂ ಓದಿ-Happy Birthday Upendra: 'ಸ್ಯಾಂಡಲ್ ವುಡ್ ಬುದ್ಧಿವಂತ'ನಿಗೆ ಇಂದು ಜನ್ಮದಿನದ ಸಂಭ್ರಮ!!  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.