ನವದೆಹಲಿ: ಕನ್ನಡದಲ್ಲಿ ಶಿವರಾಜ್ ಕುಮಾರ್ ಮತ್ತು ಉಪೇಂದ್ರರ ಪ್ರೀತ್ಸೆ ಚಿತ್ರದಲ್ಲಿ ಅಭಿನಯಿಸಿದ್ದ ಸೊನಾಲಿ ಬೇಂದ್ರೆ ಒಂದಾನೊಂದು ಕಾಲದಲ್ಲಿ  ಬಾಲಿವುಡ್ ಜಗತ್ತನ್ನೇ ಆಳಿದವಳು.


COMMERCIAL BREAK
SCROLL TO CONTINUE READING

ಆದರೆ ಈಗ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ.ಈ ಕುರಿತಾಗಿ ಅವರು ಸ್ವಾಮಾಜಿಕ ಜಾಲತಾಣದಲ್ಲಿ ಈ ರೋಗದ ಕುರಿತಾಗಿ ಹಂಚಿಕೊಂಡಿದ್ದರು.ಈಗ ಅವರು ಅಮೇರಿಕಾದ  ನ್ಯೂಯಾರ್ಕ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  



ಈಗ ಅವರು ಫ್ರೆಂಡ್ಶಿಪ್ ಡೇ ಸಂದರ್ಭದಲ್ಲಿ, ಸೊನಾಲಿ ಬೇಂದ್ರ ನಟಿ ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಸ್ನೇಹಿತೆಯರಾದ ಸುಸೇನ್ ಖಾನ್ ಮತ್ತು ಗಾಯತ್ರಿ ಒಬೆರಾಯ್ರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಬಿಡುವಿನ ಸಮಯದಲ್ಲಿಯೂ ಕೂಡ ಬಂದು ಸ್ನೇಹಿತೆಯರು ತಮ್ಮನ್ನು ಭೇಟಿಯಾಗಿದ್ದಕ್ಕೆ ಸೊನಾಲಿ ಬೇಂದ್ರೆ ಸಂತಸ ವ್ಯಕ್ತಪಡಿಸಿದ್ದಾರೆ.