ಪುನೀತ್ `ಪವರ್` ನ ಸಿಕ್ರೆಟ್ ಗೊತ್ತಾಗಿದ್ದು ಹೇಗೆ ಗೊತ್ತಾ?
ಬೆಂಗಳೂರು: ಕೇಂದ್ರ ಸಚಿವ ರಾಜವರ್ದನ್ ಸಿಂಗ ರಾಥೋಡ್ ಪ್ರಾರಂಭಿಸಿರುವ ಫಿಟ್ ಚಾಲೆಂಜ್ ಈಗ ಬಾಲಿವುಡ್ ಟಾಲಿವುಡ್ ನಿಂದ ಹಿಡಿದು ಈಗ ಕನ್ನಡದ ಸ್ಯಾಂಡಲ್ ವುಡ್ ವರೆಗೂ ಬಂದು ತಲುಪಿದೆ.
ಹೌದು,ಈಗ ಕನ್ನಡದ ಪವರ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ಪುನೀತ್ ರಾಜ್ ಕುಮಾರ್ ತಮ್ಮ ಪವರ್ ನಲ್ಲಿರುವ ಖದರ್ ನ್ನು ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿರುವುದರ ಮೂಲಕ ತೋರಿಸಿದ್ದಾರೆ.ದಕ್ಷಿಣ ಭಾರತದಲ್ಲಿ ತಮ್ಮ ಡ್ಯಾನ್ಸ್ ಮತ್ತು ಆಕ್ಷನ್ ಮೂಲಕ ತಮ್ಮದೇ ಆದ ಖ್ಯಾತಿಯನ್ನು ಹೊಂದಿರುವ ಪುನೀತ್ ಈಗ ತಮ್ಮ ಫಿಟ್ ನೆಸ್ ಗುಟ್ಟನ್ನು ಈಗ ಫೇಸ್ ಬುಕ್ ನಲ್ಲಿ ತೋರಿಸಿದ್ದಾರೆ.
ಡಾ,ಅಶ್ವತ್ ನಾರಾಯಣ್ ಮತ್ತು ಹೇಮಂತ್ ಮುದ್ದಪ್ಪ ರವರು ನೀಡಿದ ಫಿಟ್ ನೆಸ್ ಚಾಲೆಂಜ್ ನ್ನು ಸ್ವೀಕರಿಸಿರುವ ಅವರು ಈಗ ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ,ಹಾಗೂ ದಾನಿಶ್ ಸೇಟ್, ಶ್ರೀ ಮುರಳಿಯವರಿಗೆ ಚಾಲೆಂಜ್ ಹಾಕಿದ್ದಾರೆ