SRK house Mannat Cost in 2001 : ನಟ ಶಾರುಖ್ ಖಾನ್ ಖರೀದಿಸಿದ ಮನೆಯ ಬೆಲೆ ಇಂದು 200 ಕೋಟಿ ರೂ.!
ಇಂದು ನಾವು ಅವರ ಸಿನಿಮಾಗಳ ಬಗ್ಗೆ ಹೇಳುತ್ತಿಲ್ಲ. ಆದರೆ ಅವರ ಮನೆ `ಮನ್ನತ್` ಬಗ್ಗೆ ಹೇಳಲು ಹೊರಟ್ಟಿದ್ದೇವೆ. ಕಿಂಗ್ ಖಾನ್ 1992 ರಲ್ಲಿ `ದೀವಾನಾ` ಚಿತ್ರದ ಮೂಲಕ ಹಿಂದಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು, ನಂತರ ಅವರು ಹಿಂತಿರುಗಿ ನೋಡಿದ ಮಾತಿಲ್ಲ.
Shahrukh Khan House Mannat Cost : ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ 'ಡಂಕಿ' ಮತ್ತು 'ಪಠಾಣ್' ಸಿನಿಮಾಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಇದೀಗ 4 ವರ್ಷಗಳ ನಂತರ ಹಿರಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ, ಇಂದು ನಾವು ಅವರ ಸಿನಿಮಾಗಳ ಬಗ್ಗೆ ಹೇಳುತ್ತಿಲ್ಲ. ಆದರೆ ಅವರ ಮನೆ 'ಮನ್ನತ್' ಬಗ್ಗೆ ಹೇಳಲು ಹೊರಟ್ಟಿದ್ದೇವೆ. ಕಿಂಗ್ ಖಾನ್ 1992 ರಲ್ಲಿ 'ದೀವಾನಾ' ಚಿತ್ರದ ಮೂಲಕ ಹಿಂದಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು, ನಂತರ ಅವರು ಹಿಂತಿರುಗಿ ನೋಡಿದ ಮಾತಿಲ್ಲ.
ಮನ್ನತ್‌ಗಿಂತ ಮೊದಲು ಶಾರುಖ್ ಸಣ್ಣ ಫ್ಲಾಟ್‌ನಲ್ಲಿ ವಾಸ
ಈದ್ ಅಥವಾ ಹುಟ್ಟುಹಬ್ಬವೇ ಇರಲಿ, ಶಾರುಖ್ ಖಾನ್ ತಮ್ಮ ಮನೆಯ ಬಾಲ್ಕನಿಗೆ ಬಂದು ತಮ್ಮ ಅಭಿಮಾನಿಗಳಿಗೆ ಕೈ ಬಿಸಿ ಸಂತೋಷಪಡಿಸುತ್ತಾರೆ. ಮುಂಬೈನಲ್ಲಿರುವ ಕಿಂಗ್ ಖಾನ್ ಮನೆ ‘ಮನ್ನತ್’ ಪ್ರವಾಸಿ ಸ್ಥಳಕ್ಕಿಂತ ಕಡಿಮೆಯೇನಲ್ಲ. ಶಾರುಖ್ 'ಮನ್ನತ್' ಖರೀದಿಸುವ ಮೊದಲು ಬಾಂದ್ರಾದಲ್ಲಿನ 3 ಕೋಣೆಗಳ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ಗೌರಿ ಖಾನ್ ಜೊತೆ ವಾಸಿಸುತ್ತಿದ್ದರು. ಮಾಧ್ಯಮಗಳ ವರದಿ ಪ್ರಕಾರ ಇದೀಗ ಶಾರುಖ್ ಮನೆ 'ಮನ್ನತ್' ಬೆಲೆ 200 ಕೋಟಿ ರೂ.ಗೂ ಹೆಚ್ಚು ಎಂದು ಹೇಳಲಾಗುತ್ತಿದೆ. ಆದರೆ ಶಾರುಖ್ ಈ ಬಂಗಲೆಯನ್ನು ಎಷ್ಟು ಬೆಲೆಗೆ ಖರೀದಿಸಿದ್ದಾರೆ ಗೊತ್ತಾ? ಇಲ್ಲಿದೆ ಮಾಹಿತಿ.
Bollywood vs South Actors Controversy: ಬಾಪ್ ಬಾಪ್ ಹೋತಾ ಹೈ' ಎಂದು ಸುನಿಲ್ ಶೆಟ್ಟಿ ಹೇಳಿದ್ದೇಕೆ?
2001ರಲ್ಲಿ ಮನ್ನತ್ ಖರೀದಿಸಿದ ಶಾರುಖ್
ಶಾರುಖ್ ಖಾನ್ 1997 ರಲ್ಲಿ 'ಯೆಸ್ ಬಾಸ್' ಚಿತ್ರದ ಶೂಟಿಂಗ್ ಸಮಯದಲ್ಲಿ ಮನ್ನತ್ ಮನೆಯನ್ನು ಇಷ್ಟಪಟ್ಟಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಈ ಮನೆ ಮೊದಲು ಗುಜರಾತಿನ ಉದ್ಯಮಿ ನಾರಿಮನ್ ದುಬಾಶ್ ಅವರಿಗೆ ಸೇರಿತ್ತು. ಶಾರುಖ್ ಅವರಿಂದ 2001 ರಲ್ಲಿ 13.32 ಕೋಟಿಗೆ ಖರೀದಿಸಿದರು. ಇದಾದ ನಂತರ 2005 ರಲ್ಲಿ ಗೌರಿ ಮತ್ತು ಶಾರುಖ್ ತಮ್ಮ ಮನೆಗೆ 'ಮನ್ನತ್' ಎಂದು ಹೆಸರಿಟ್ಟರು. ಶಾರುಖ್ ಖಾನ್ 'ಮನ್ನತ್' ಮನೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗೌರಿ ಖಾನ್ ತಮ್ಮ ಬಂಗಲೆಯನ್ನು ಶೃಂಗರಿಸಿದ್ದಾರೆ.
ಗೌರಿ ಯಾವಾಗಲೂ ತಮ್ಮ ಮನೆಯಲ್ಲಿ ಪೂಜಾ ಕೋಣೆ ಮಾಡಿಸಿದ್ದಾರೆ . 2019 ರಲ್ಲಿ ಸಂದರ್ಶನವೊಂದರಲ್ಲಿ, ಶಾರುಖ್ ಖಾನ್ ಮನ್ನತ್ ಬಗ್ಗೆ ಮಾತನಾಡುತ್ತಾ, 'ನಾನು ದೆಹಲಿಯಲ್ಲಿ ವಾಸಿಸುತ್ತಿದ್ದೆ, ಅಲ್ಲಿನ ಜನ ದೊಡ್ಡ ಮನೆಗಳಲ್ಲಿ ವಾಸಿಸುತ್ತಿರುವುದನ್ನ. ಆದರೆ ಮುಂಬೈನಲ್ಲಿ ಎಲ್ಲರೂ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ನಾನು ಗೌರಿಯೊಂದಿಗೆ ಇಲ್ಲಿಗೆ ಸಣ್ಣ ಫ್ಲಾಟ್‌ನಲ್ಲಿ ತೆರಳಿದಾಗ. ನನ್ನ ಅತ್ತೆ, 'ನೀವು ತುಂಬಾ ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದೀರಿ' ಎಂದು ಹೇಳಿದ್ದರು. ಆದರೆ 'ಮನ್ನತ್' ನೋಡಿದಾಗ ನನಗೆ ಅದು ದೆಹಲಿಯ ದೊಡ್ಡ ಮನೆಗಳು ನೆನಪಾದವು ಎಂದರು.
'ನನ್ನ ನಿಭಾಯಿಸಲು ಬಾಲಿವುಡ್ ಕೈಯಲ್ಲಿ ಆಗಲ್ಲ': ಟಾಲಿವುಡ್ ಸೂಪರ್ ಸ್ಟಾರ್..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.