Real age of Actress: ಕನ್ನಡದ ಅನೇಕ ನಟಿಯರು ತಮ್ಮ ವೃತ್ತಿಬದುಕಿನ ಕಡೆಗೆ ಹೆಚ್ಚು ಒಲವು ತೋರುವ ಕಾರಣದಿಂದ ಮದುವೆ ಬಗ್ಗೆ ಅಷ್ಟೊಂದು ಚಿಂತೆ ಮಾಡೋದಿಲ್ಲ. ಒಂದು ವೇಳೆ ಫ್ಯಾನ್ಸ್ ಈ ಬಗ್ಗೆ ಮಾತನಾಡಿದ್ರೆ ಅದಕ್ಕೆ ನಗುವಿನಲ್ಲೇ ಉತ್ತರ ನೀಡಿ ಕೆಲ ನಟಿಯರು ಸುಮ್ಮನಾಗುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್’ಗೆ 36ರ ಹರೆಯದ ಟೆಸ್ಟ್ ಸ್ಪೆಷಲಿಸ್ಟ್ ನಿವೃತ್ತಿ ಘೋಷಣೆ!


ಅಷ್ಟಕ್ಕೂ ಮದುವೆಯೆಂಬುದು ಪ್ರತಿಯೊಬ್ಬರ ವೈಯಕ್ತಿಕ ವಿಚಾರ. ಹೆಣ್ಣಾಗಲಿ ಗಂಡಾಗಲಿ ಯಾವ ಸಮಯಕ್ಕೆ ಮದುವೆಯಾಗಬೇಕು ಎಂಬುದನ್ನು ಸ್ವತಃ ತಾವೇ ನಿರ್ಧರಿಸಬೇಕೇ ಹೊರತು ಬೇರೆಯವರಲ್ಲ. ಇದು ವಾಸ್ತವವಾಗಿದ್ದರೂ, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ-ನಟಿಯರ ಮದುವೆ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ.


ನಾವಿಂದು ಈ ವರದಿಯಲ್ಲಿ ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸೇರಿದಂತೆ, ಕೆಲ ನಟಿಯರ ವಯಸ್ಸಿನ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.


ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ನಿತ್ಯಾ ಮೆನನ್ ಮಲಯಾಳಿಯಾದರೂ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಜೋಶ್, ಮೈನಾ, ಕೋಟಿಗೊಬ್ಬ-2 ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈ ಕರ್ಲಿ ಹೇರ್ ನಟಿಗೆ 34 ವರ್ಷ ವಯಸ್ಸು. ಆದರೆ ಇನ್ನೂ ಮದುವೆಯಗಿಲ್ಲ. ಇವೆಲ್ಲದರ ನಡುವೆ ಮಲಯಾಳಂನ ಖ್ಯಾತ ನಟರೊಬ್ಬರನ್ನು ನಿತ್ಯಾ ಮದುವೆಯಾಗಲಿದ್ದಾರೆ ಎಂಬ ಪಿಸುಮಾತುಗಳು ಕೇಳಿಬರುತ್ತಿವೆ.


ಶರ್ಮಿಳಾ ಮಾಂಡ್ರೆ ವಯಸ್ಸು ಕೂಡ 34 ವರ್ಷ. ಕನ್ನಡದಲ್ಲಿ ಹಿಟ್ ಕಂಡ ಸಜನಿ, ಕೃಷ್ಣ, ಈ ಬಂಧನ, ಮಾಸ್ ಲೀಡರ್, ನವಗ್ರಹ, ಗಾಳಿಪಟ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಶರ್ಮಿಳಾ ನಟಿಸಿದ್ದಾರೆ.


ಬೆಂಗಳೂರಿನಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ನಟಿ ರಾಗಿಣಿ ದ್ವಿವೇದಿಗೆ 33 ವರ್ಷ ವಯಸ್ಸು. ಕಿಚ್ಚ ಸುದೀಪ್ ಅಭಿನಯದ 2009ರಲ್ಲಿ ಬಿಡುಗಡೆಯಾದ 'ವೀರ ಮದಕರಿ' ಸಿನಿಮಾ ಮೂಲಕ ಸ್ಯಾಂಡಲ್ವುಡ್’ಗೆ ಎಂಟ್ರಿಕೊಟ್ಟ ರಾಗಿಣಿ ದ್ವಿವೇದಿ ಈವರೆಗೂ 25ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.


ಇನ್ನು ಸ್ಯಾಂಡಲ್ವುಡ್ ಲೋಕದ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲು ಮಿಂಚಿದ್ದು ಕಿರುತೆರೆಯಲ್ಲಿ. ಅಲ್ಲಿಂದ ಶುರುವಾದ ಜರ್ನಿ ಇದೀಗ ಕನ್ನಡದ ಬಹುಬೇಡಿಕೆಯ ನಟಿ ಎಂದೆನಿಸಿಕೊಳ್ಳುವವರೆಗೆ ತಲುಪಿದೆ. ಸದ್ಯ ಸಿಂಗಲ್ ಲೈಫ್ ಎಂಜಾಯ್ ಮಾಡುತ್ತಿರುವ ಗುಳಿಕೆನ್ನೆ ಚೆಲುವೆಗೆ ಈಗ 31 ವರ್ಷ ವಯಸ್ಸಾಗಿದೆ.


ಸ್ಯಾಂಡಲ್‌ವುಡ್‌ ಮೋಹಕತಾರೆ ರಮ್ಯಾ ಕ್ರೇಜ್ ಈಗಲೂ ಕಡಿಮೆಯಾಗಿಲ್ಲ. ನಗುಮೊಗದ ಈ ಸುಂದರಿ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇನ್ನು ರಮ್ಯಾಗೆ ಈಗ 41 ವರ್ಷ ವಯಸ್ಸಾಗಿದೆ.


ಇದನ್ನೂ ಓದಿ:  ‘ಭಾಗ್ಯಲಕ್ಷ್ಮೀ’ ನಟ ತಾಂಡವ್ ರಿಯಲ್ ಪತ್ನಿ ಇವರೇ… ಕರುನಾಡ ಈ ಸುಂದರಿ ಖ್ಯಾತ ಬಹುಭಾಷಾ ನಟಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ