Shobha Shetty: ಕನ್ನಡದ ಖಾಸಗಿ ವಾಹಿನಿಯಲ್ಲಿ ಮೂಡಿಬಂದ ಅಗ್ನಿಸಾಕ್ಷಿ ಸಿರೀಯಲ್‌ನಲ್ಲಿ ನೆಗೆಟಿವ್‌ ಶೆಡ್‌ ಪಾತ್ರದಲ್ಲಿ ಮಿಂಚಿದ್ದ ಶೋಭಾ ಶೆಟ್ಟಿ ತೆಲುಗು ಬಿಗ್‌ಬಾಸ್‌ ಶೋ ಮೂಲಕ ಮತ್ತಷ್ಟು ದೊಡ್ಡ ಖ್ಯಾತಿ ಗಳಿಸಿದ್ದರು.. ಕನ್ನಡ ಹಾಗೂ ತೆಲುಗು ಕಿರುತೆರಯಲ್ಲಿ ಸಕ್ರಿಯವಾಗಿರುವ ಈ ಚೆಲುವೆ ಸದ್ಯ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ..


COMMERCIAL BREAK
SCROLL TO CONTINUE READING

ಶೋಭಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಲವ್ ಮ್ಯಾಟರ್ ಹೇಳಿಕೊಂಡಿದ್ದು, ತಾನು ಮತ್ತೊಬ್ಬ ಧಾರಾವಾಹಿ ನಟ ಯಶವಂತ್ ರೆಡ್ಡಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ... ಶೋಭಾಗಾಗಿ ಯಶವಂತ್ ರೆಡ್ಡಿ ಒಂದೋ ಎರಡೋ ಬಾರಿ ಬಿಗ್ ಬಾಸ್ ಗೆ ಬಂದಿದ್ದರು. ಅದರೊಂದಿಗೆ ಶೋಭಾ ಶೆಟ್ಟಿ-ಯಶವಂತ್ ರೆಡ್ಡಿ ಪ್ರೇಮ ಬೆಳಕಿಗೆ ಬಂದಿದೆ. ಎಲಿಮಿನೇಟ್ ಆದ ಶೋಭಾ ಶೆಟ್ಟಿಗೆ ಯಶವಂತ್ ರೆಡ್ಡಿ ಅದ್ಧೂರಿ ಸ್ವಾಗತ ಕೋರಿದ್ದರು..


ಇದನ್ನೂ ಓದಿ-ಗೆಲುವಿನ ಬಳಿಕ ಭರ್ಜರಿ ಸ್ಟೆಪ್ ಹಾಕಿದ ವಿರಾಟ್‌ ಕೊಹ್ಲಿ..! ಕಿಂಗ್‌ ಡ್ಯಾನ್ಸ್‌ ವಿಡಿಯೋ ವೈರಲ್!!  


ಇತ್ತೀಚೆಗೆ ಈ ಜೋಡಿ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು... ಸದ್ಯದಲ್ಲೇ ಅವರು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಶೋಭಾ ಶೆಟ್ಟಿ ಮದುವೆಗೂ ಮುನ್ನ ತನ್ನ ಪ್ರಿಯಕರನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೆರಡು ಮೂರು ದಿನದಲ್ಲಿ ಯಶವಂತ್ ರೆಡ್ಡಿ ಹುಟ್ಟುಹಬ್ಬ. ಹಾಗಾಗಿ ಆತನಿಗೆ ಸರ್ಪ್ರೈಸ್ ಗಿಫ್ಟ್ ಆಗಿ ಮಹೀಂದ್ರ ಬೀಸ್ಟ್ ಎಕ್ಸ್‌ಯುವಿ 700 ಅನ್ನು ನೀಡಿದ್ದಾರೆ...  


ಈ ಕುರಿತು ಮಾಹಿತಿ ನೀಡಿರುವ ಯಶವಂತ್ ರೆಡ್ಡಿ ಹೊಸ ಕಾರಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿವೆ. ಶೋಭಾ ಶೆಟ್ಟಿಯ ಬಾಯ್ ಫ್ರೆಂಡ್ ಎಂದರೆ ಅಭಿಮಾನಿಗಳಿಗೆ ತುಂಬಾ ಪ್ರೀತಿ. ಬರ್ತ್ ಡೇ ಗಿಫ್ಟ್ ಆಗಿ ಲಕ್ಷ ಲಕ್ಷ ಬೆಲೆಯ ಕಾರನ್ನು ಕೊಟ್ಟಿದ್ದಾರೆ ಎಂಬ ಕಾಮೆಂಟ್ ಗಳು ಬರುತ್ತಿವೆ. ಕೆಲವರು ಅಭಿನಂದನೆಗಳು ಎಂದು ಹೇಳುತ್ತಿದ್ದಾರೆ.


ಇದನ್ನೂ ಓದಿ-ದುಡ್ಡನ್ನು ಅಯಸ್ಕಾಂತದಂತೆ ಆಕರ್ಷಿಸುತ್ತೆ ಈ ಪುಟ್ಟ ಸಸ್ಯ: ಸೂರ್ಯನ ಬೆಳಕಿಲ್ಲದೆ, ಕಡಿಮೆ ನೀರಿನಲ್ಲಿ ಬೆಳೆಸಬಹುದಾದ ಗಿಡವಿದು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.