ಪ್ರೀತಿಗೆ ಬ್ರಾಂಡ್ ಅಂಬಾಸಿಡರ್ ಅಂತ ಈ ಭೂಮಿ ಮೇಲೆ ಒಬ್ರು ಇದ್ದಾರೆ ಅಂದ್ರೆ ಅದು ಒನ್ ಆಂಡ್ ಓನ್ಲಿ ನಮ್ಮ ಪ್ರೀತಿಯ ಕ್ರೇಜಿಸ್ಟಾರ್ ರವಿಚಂದ್ರನ್. ಮಗುವಿನ ಮನಸುಳ್ಳ ಕನಸುಗಾರ ತಮ್ಮ ಇಡೀ ಜೀವನವನ್ನ  ಬರೀ ಸಿನಿಮಾಗಾಗೇ ಮೀಸಲಿಟ್ಟಿದ್ದಾರೆ. ನಿಜಕ್ಕೂ ಪ್ರೀತಿ ಹೇಗೆ ಮಾಡಬೇಕು ಅಂತ ಜಗತ್ತಿಗೆ ತೋರಿಸಿಕೊಟ್ಟ ರವಿ ಮಾಮ ಇಡೀ ರಾತ್ರಿ ಎಚ್ಚರವಿದ್ದು ಮಾಡೋ ಕೆಲಸ ಮತ್ತು ಚಿಂತಿಸೋ ವಿಚಾರ ಅಂದ್ರೆ ಅದು ಬರೀ ಸಿನಿಮಾ.


COMMERCIAL BREAK
SCROLL TO CONTINUE READING

ಹೌದು, ಸಿನಿಮಾನೇ ಉಸಿರು ಅಂತ ಇವತ್ತಿಗೂ, ಈ ಕ್ಷಣದವರೆಗೂ ಯೋಚಿಸಿ ನನ್ನ ಪ್ರೀತಿ ಮಾಡೋ ಅಭಿಮಾನಿಗಳಿಗೆ ಒಳ್ಳೆ ಸಿನಿಮಾ ಕೊಡಬೇಕು ಅನ್ನೋ ಉದ್ದೇಶವಿದೆ. ಅದಕ್ಕಾಗಿ ಹೋರಾಟ ಮಾಡುತ್ತಲೇ ಇದ್ದಾರೆ ನಮ್ಮೆಲ್ಲರ ಪ್ರೀತಿಯ ರವಿಮಾಮ.


ಇದನ್ನೂ ಓದಿ- Akshay Kumar-Twinkle Khanna: ಪಬ್ಲಿಕ್ ನಲ್ಲಿಯೇ ಸ್ಟಾರ್ ನಟನ ಪ್ಯಾಂಟ್ ಬಟನ್ ತೆಗೆದಿದ್ದಕ್ಕೆ ಪತ್ನಿ ಬಂಧನ!


ಇನ್ನೊಂದು ವಿಚಾರ ನಿಮ್ಗೆ ಗೊತ್ತೋ ಇಲ್ವೋ.. ಅದೇನು ಅಂತ ನಾವು ನಿಮ್ಗೆ ಹೇಳ್ತಾ ಹೋಗ್ತಿವಿ. ನಾನು ಡಿಫರೆಂಟ್ ಸಿನಿಮಾಗಳನ್ನ ಮಾಡ್ತೀನಿ ಜನ ಅದನ್ನ ತಲೆಗೆ ಕೆಲಸ ಕೊಟ್ಟು ಯಾಕೆ ಅರ್ಥೈಸಿಕೊಳ್ಳೋದಿಲ್ಲ ಅನ್ನೋ ನೋವು ಇತ್ತೀಚಿಗೆ ರವಿಮಾಮನಿಗಿದೆ. ಒಂದೇ ಏಟಿಗೆ ಸಿನಿಮಾ ಚೆನ್ನಾಗಿಲ್ಲ ಅನ್ನೋ ಪ್ರಚಾರ ಮಾಡಿ ಬಿಡುತ್ತಾರೆ. ಈ ಕೆಲಸ ಯಾಕೆ ಅಂತ ಕೆಲ ತಿಂಗಳ ಹಿಂದೆ  ರವಿ ಬೋಪಣ್ಣ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಹೇಳಿಕೊಂಡಿದ್ದರು.


ಇದನ್ನೂ ಓದಿ- ಶಾರುಖ್‌ ಖಾನ್‌ ಕಟ್ಟುವ ಈ ವಾಚ್‌ ಬೆಲೆಯಲ್ಲಿ ಐಷಾರಾಮಿ ಬಂಗಲೆ, ಕಾರು ಖರೀದಿಸಬಹುದು.!


ಸಿನಿಮಾನೇ ಉಸಿರು, ಸಿನಿಮಾನೇ ನನ್ನ ಕುಟುಂಬ ಮತ್ತು ಜಗತ್ತು ಅಂತ ಭಾವಿಸಿರೋ ರವಿ ಮಾಮನ ಸಿನಿಮಾಗಳನ್ನ ಪ್ರೀತಿಸಬೇಕು. ನಾವು ಅಭಿಮಾನಿಗಳೇ ಅವರ ಸಿನಿಮಾಗಳಿಗೆ ದೊಡ್ಡ ಮಟ್ಟದ ಪ್ರಚಾರ ಕೊಟ್ಟು ಗೆಲ್ಲಿಸಿದರೆ ಮುಂದೆ ಇನ್ನಷ್ಟು ಒಳ್ಳೆ ಸಿನಿಮಾಗಳನ್ನ ನಾವು ರವಿಚಂದ್ರನ್ ಅವರಿಂದ ನಿರೀಕ್ಷೆ ಮಾಡಬಹುದು ಅಲ್ಲವೇ. ಮುಂದೆ ರವಿಚಂದ್ರನ್ ಸರ್ ಯಾವ ಪ್ರಾಜೆಕ್ಟ್ ಮಾಡಬಹುದು ಅನ್ನೋ ಕುತೂಹಲ ಎಲ್ಲರಿಗೂ ಇದೆ. ಸೋ ವೇಟ್ ಮಾಡಿ ನೋಡೋಣ. ನೆಕ್ಸ್ಟ್ ಅವರ ಕಡೆಯಿಂದ ಬರೋ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣೋ ಹಾಗೇ ಫ್ಯಾನ್ಸ್ ಅವರ ಬೆನ್ನಿಗೆ ನಿಲ್ಲೋಣ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.