Ram Charan-Upasana Kamineni: ಅಮೆರಿಕಾದ ಲಾಸ್ ಏಂಜಲೀಸ್‌’ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಆಸ್ಕರ್ 2023 ಸಮಾರಂಭದಲ್ಲಿ RRR ತಂಡವು ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇದು ಭಾರತಕ್ಕೆ ಹೆಮ್ಮೆಯ ಕ್ಷಣವೆಂದೇ ಹೇಳಬಹುದು. ಈ ಸಿನಿಮಾದ ಅದ್ಭುತ ಹಾಡು ನಾಟು ನಾಟು ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: OSCA’RRR’… ದೇಶಕ್ಕೆ ಆಸ್ಕರ್ ಬಂದಿದೆ ನಿಜ… ಆದ್ರೆ ಕರ್ನಾಟಕಕ್ಕೆ ಡಬಲ್-ಸ್ಪೆಷಲ್ ಧಮಾಖ ಯಾಕೆ ಗೊತ್ತಾ?


ಇನ್ನು ಈ ಸಮಾರಂಭಕ್ಕೆ ರಾಮ್ ಚರಣ್, ಅವರ ಪತ್ನಿ ಉಪಾಸನಾ ಕಾಮಿನೇನಿ, ಜೂನಿಯರ್ ಎನ್‌ ಟಿ ಆರ್, ಎಸ್‌ಎಸ್ ರಾಜಮೌಳಿ, ರಾಹುಲ್ ಸಿಪ್ಲಿಗುಂಜ್, ಕಾಲ ಭೈರವ ಮತ್ತು ಎಂಎಂ ಕೀರವಾಣಿ ಆಗಮಿಸಿದ್ದರು. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಂತೆ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಉಪಾಸನಾ ಕಾಮಿನೇನಿ ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದಿದ್ದರು.


ರಾಮ್ ಚರಣ್ ಅವರ ಪತ್ನಿ ಉಪಾಸನಾ ಅವರು ಈ ಸಂದರ್ಭದಲ್ಲಿ ಕ್ಲಾಸಿಕ್ ಬಿಳಿ ಸೀರೆಯಲ್ಲಿ ಮಿಂಚಿದ್ದರು. ಇದೇ ವೇಳೆ ಸಂದರ್ಶಕರ ಜೊತೆ ಮಾತನಾಡಿದ ಅವರು, “ಬೆಳಗ್ಗೆ ಎದ್ದ ತಕ್ಷಣ ಒಂದು ಬಾರಿ ಕೈಗೆ ನಾನೇ ಗಿಂಡಿದೆ. ಈ ಕ್ಷಣ ನಿಜವೇ? ಎಂದು ನನ್ನಲ್ಲೇ ನಾನು ಪ್ರಶ್ನೆ ಮಾಡಿಕೊಂಡೆ. ತುಂಬಾ ಉತ್ಸುಕನಾಗಿದ್ದೇನೆ. ಪ್ರಥಮವಾಗಿ ಇಲ್ಲಿ ನಾನು ಬಂದಿರುವುದು ರಾಮ್’ಗೆ ಬೆಂಬಲ ನೀಡಲು. ಆ ಬಳಿಕ ಪ್ರೇಕ್ಷಕಳಾಗಿ ಬಂದಿದ್ದೇನೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: Oscars 2023 : ಇದೇನಿದು ನಾಮಿನೇಟ್‌ ಆಗದೆಯೇ ಆಸ್ಕರ್‌ ಗೆದ್ರಾ ವಿವೇಕ್ ಅಗ್ನಿಹೋತ್ರಿ!


ಭಾರತೀಯ ಶೆರ್ವಾನಿಯಲ್ಲಿ ರಾಮ್ ಚರಣ್ ಮಿಂಚಿದರೆ, ಅವರ ಪತ್ನಿ ಸುಂದರವಾದ ಸೀರೆಯೊಂದಿಗೆ ಭಾರತದ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆ. ಹೈದರಾಬಾದ್ ಮೂಲದ ಡಿಸೈನರ್ ಜಯಂತಿ ರೆಡ್ಡಿ ಉಪಾಸನ ಅವರ ಕಾಸ್ಟ್ಯೂಮ್ ತಯಾರಿಸಿದ್ದಾರೆ. ಜಯಂತಿ ರೆಡ್ಡಿ ಅವರು ರಾಮ್ ದಂಪತಿಯ ಆತ್ಮೀಯ ಸ್ನೇಹಿತರಾಗಿದ್ದಾರೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.