Kalki Fight Master: ಪ್ರಭಾಸ್ ಅವರ ಕಲ್ಕಿ 2898AD ಚಿತ್ರ ಹಿಟ್ ಟಾಕ್‌ನೊಂದಿಗೆ ಬಿಡುಗಡೆಯಾಗಿದೆ.. ಅದರಲ್ಲೂ ಚಿತ್ರದಲ್ಲಿನ ದೃಶ್ಯಗಳು, ಭರ್ಜರಿ ಆಕ್ಷನ್‌ಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆ್ಯಕ್ಷನ್ ಸೀನ್ ಗಳು ಜಾಸ್ತಿ ಆಗಿದ್ದು, ಕೆಲ ಆ್ಯಕ್ಷನ್ ಸೀಕ್ವೆನ್ಸ್ ಹಾಲಿವುಡ್ ರೇಂಜ್ ನಲ್ಲಿವೆ ಎನ್ನಲಾಗಿದೆ. ಪ್ರಭಾಸ್ ಮತ್ತು ಅಮಿತಾಭ್ ನಡುವೆ ಎರಡು ಪೈಟ್‌ ಇದ್ದು, ಇವರಿಬ್ಬರ ಹೈ ಲೆವೆಲ್ ಆಕ್ಷನ್ ಸೀಕ್ವೆನ್ಸ್‌ಗಳಿಂದ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ.. 


COMMERCIAL BREAK
SCROLL TO CONTINUE READING

ಸದ್ಯ ಪ್ರತಿಯೊಬ್ಬರೂ ಈ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ಗಳ ಬಗ್ಗೆ ಮಾತನಾಡುತ್ತಿದ್ದಾರೆ.. ಹಾಗಾದ್ರೆ ಅವುಗಳನ್ನು ವಿನ್ಯಾಸಗೊಳಿಸಿದವರು ಯಾರು ಎಂಬುದು ನಿಮಗೆ ಗೊತ್ತೇ? ಯೆಸ್‌ ಕಲ್ಕಿ ಚಿತ್ರಕ್ಕೆ ಆ್ಯಕ್ಷನ್ ಕೊರಿಯೋಗ್ರಾಫರ್ ಆಂಡಿ ಲಾಂಗ್ ಗುವಾನ್ ಹಾಲಿವುಡ್ ರೇಂಜ್ ನಲ್ಲಿ ಆ್ಯಕ್ಷನ್ ಕೊರಿಯೋಗ್ರಫಿ ಮಾಡಿದ್ದಾರೆ. ಅವರು ಹಾಂಗ್ ಕಾಂಗ್ ಮೂಲವನ್ನು ಹೊಂದಿರುವ ಜರ್ಮನ್ ಮಾರ್ಷಲ್ ಆರ್ಟ್ಸ್ ಮಾಸ್ಟರ್. ಬಾಲ್ಯದಿಂದಲೇ ಮಾರ್ಷಲ್ ಆರ್ಟ್ಸ್ ಕಲಿತು ಸ್ಟಂಟ್ ಮಾಸ್ಟರ್ ಆದರು. ವಿಶೇಷವೆಂದರೇ ಅವರು ಜಾಕಿ ಚಾನ್ ಅವರೊಂದಿಗೆ ಕೆಲಸ ಮಾಡಿದ್ದಾರೆ.. 


ಇದನ್ನೂ ಓದಿ-ʼವಾರಾಹಿ ದೀಕ್ಷೆʼಯಲ್ಲಿ ಪವನ್ ಕಲ್ಯಾಣ್..! ಈ ವ್ರತದ ಮಹತ್ವ.. ಮಾತೆ ʼವಾರಾಹಿ ದೇವಿʼ ಯಾರು ಗೊತ್ತೆ..?


ಪ್ರಸ್ತುತ ಆಂಡಿ ಲ್ಯಾಂಗ್ ಚಿತ್ರಗಳಿಗೆ ಆಕ್ಷನ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ಕಲ್ಕಿ ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾಗಿದ್ದಾರೆ. ನಾಗ್ ಅಶ್ವಿನ್ ಅವರ ನಿರ್ದೇಶನದಲ್ಲಿ ಆಂಡಿ ಲಾಂಗ್ ಮತ್ತು ಅವರ ತಂಡವು ಕಲ್ಕಿಗಾಗಿ ರೋಮಾಂಚಕ ಸಾಹಸ ದೃಶ್ಯಗಳನ್ನು ರಚಿಸಿದ್ದಾರೆ. ಇತ್ತೀಚೆಗೆ, ಆಂಡಿ ಲ್ಯಾಂಗ್ ಕೂಡ ತಂಡದ ಪರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಕಲ್ಕಿ, ನಾಗ್ ಅಶ್ವಿನ್ ಮತ್ತು ನಿರ್ಮಾಪಕರ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.. 



ಆಂಡಿ ಲ್ಯಾಂಗ್ ತಂಡ ಇತ್ತೀಚೆಗೆ ಕಲ್ಕಿ ಚಿತ್ರದ ಆಕ್ಷನ್ ಮೇಕಿಂಗ್ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಹೇಗೆ ಆಕ್ಷನ್ ದೃಶ್ಯಗಳನ್ನು ಶೂಟ್ ಮಾಡಿದ್ದಾರೆ, ಅಮಿತಾಬ್ ಮತ್ತು ಪ್ರಭಾಸ್ ಗೆ ಹೇಗೆ ಆಕ್ಷನ್ ಕಲಿಸಿದ್ದಾರೆ ಎನ್ನುವ ಆ್ಯಕ್ಷನ್ ಮೇಕಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ.


ಇದನ್ನೂ ಓದಿ-ದರ್ಶನ್ ಒಳ್ಳೆಯವರು, ಅವರು ನಿರಪರಾಧಿಯಾಗಿ ಹೊರಬರುತ್ತಾರೆ..! ನಟ ನಾಗ ಶೌರ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.