ʼಅನಿಮಲ್ʼ ಚಿತ್ರದಲ್ಲಿ ತೃಪ್ತಿ ಡಿಮ್ರಿ ಪಾತ್ರವನ್ನು ಮಿಸ್ ಮಾಡಿಕೊಂಡ ಸ್ಟಾರ್ ಹೀರೋಯಿನ್ ಯಾರು ಗೊತ್ತಾ?
Animal Tripti Dimri: ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡುತ್ತಿರುವ ಅನಿಮಲ್ ಚಿತ್ರದಲ್ಲಿ ಹಿರೋಯಿನ್ಗಿಂತ ಹೈಲೈಟ್ ಆಗಿದ್ದು ತೃಪ್ತಿ ಡಿಮ್ರಿ.. ಆದರೆ ಈ ಪಾತ್ರ ಮಾಡುವ ಅವಕಾಶ ಇವರ ಮೊದಲು ಬೇರೋಬ್ಬ ಖ್ಯಾತ ನಟಿಗೆ ಬಂದೊದಗಿತ್ತಂತೆ ಹಾಗಾದರೆ ಈ ಚಿತ್ರದ ಪಾತ್ರವನ್ನು ಮಿಸ್ ಮಾಡಿಕೊಂಡ ಸ್ಟಾರ್ ನಟಿ ಯಾರು ಅಂತೀರಾ.. ಈ ಸ್ಟೋರಿ ಓದಿ..
Animal: ಅನಿಮಲ್ ಚಿತ್ರವು ಆಕ್ಷನ್ ಥ್ರಿಲ್ಲರ್ ಹಾಗೂ ಬೋಲ್ಡ್ ಕಂಟೆಂಟ್ನೊಂದಿಗೆ ಭಾಕ್ಸಾಫಿಸ್ನಲ್ಲಿ ಭಾರೀ ಸದ್ದು ಮಾಡುತ್ತಿದೆ.. ಈ ಚಿತ್ರದಲ್ಲಿ ಬೆಡ್ರೂಮ್ ಸೀನ್ ಮಾಡಿರುವ ತ್ರಿಪ್ತಿ ಡಿಮ್ರಿ ಸದ್ಯ ಪಡ್ಡೆಹೈಕ್ಳ ಕ್ರಷ್ ಆಗಿದ್ದಾರೆ.. ಆದರೆ ಇವರಿಗಿಂತ ಮೊದಲು ಈ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಬೇರೋಬ್ಬ ಸ್ಟಾರ್ ನಟಿಗೆ...
ಸಂಚಲನ ಮೂಡಿಸುತ್ತಿರುವ ಅನಿಮಲ್ ಮೂವಿಯಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ತೃಪ್ತಿ ಡಿಮ್ರಿ ಭಾರೀ ಬೋಲ್ಡ್ ಆಗಿ ಮಿಂಚಿದ್ದಾರೆ.. ಆದರೆ ಇದೀಗ ಒಂದು ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ. ಹೌದು ಸದ್ಯದ ಹಾಟ್ ಸೆನ್ಸೇಷನ್ ಆಗಿರುವ ತೃಪ್ತಿ ಪಾತ್ರದ ರಹಸ್ಯವೊಂದು ರಿವೀಲ್ ಆಗಿದೆ..
ಇದನ್ನೂ ಓದಿ-ಈ ಕ್ರಿಕೆಟಿಗನ ಪ್ರೀತಿ ನಂಬಿ 30ನೇ ವಯಸ್ಸಿಗೆ ಮದುವೆಯಾಗದೆ ಗರ್ಭಿಣಿಯಾದ ನಟಿ..!
‘ಅನಿಮಲ್ ಸಿನಿಮಾದಲ್ಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರಿಗಿಂತ ತೃಪ್ತಿ ಡಿಮ್ರಿ ಹೆಚ್ಚು ಫೇಮಸ್ ಆಗಿದ್ದಾರೆ.. ಇದ್ದಕ್ಕಿದ್ದಂತೆ ಸಂಚಲನ ಸೃಷ್ಟಿಸಿದ ತಾರೆಯ ಫೋಟೋಗಳು, ಜೀವನಚರಿತ್ರೆ, ಕುರಿತು ಅಭಿಮಾನಿಗಳು Instagram ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹುಡುಕುತ್ತಿದ್ದಾರೆ.
ಇಷ್ಟೆಲ್ಲಾ ಕ್ರೇಜ್ ಮಿಸ್ ಮಾಡಿಕೊಂಡ ನಾಯಕಿ ಯಾರು ಎಂಬುದು ಈಗ ಕುತೂಹಲ ಮೂಡಿಸಿದೆ. ಆಕೆ ಬೇರೆ ಯಾರೂ ಅಲ್ಲ.. ಸೈಫ್ ಅಲಿ ಖಾನ್ ಅವರ ಪುತ್ರಿ.. ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್. ಹೌದು ಈ ನಟಿಗೆ ಮೊದಲು ಅನಿಮಲ್ ಚಿತ್ರದಲ್ಲಿ ನಟಿಸುವ ಆಫರ್ ಸಿಕ್ಕಿತು. ಆದರೆ ಇಲ್ಲಿ ದೊಡ್ಡ ಟ್ವಿಸ್ಟ್ ಇದೆ.
ಇದನ್ನೂ ಓದಿ-ಪರಿಶುದ್ಧ ಮನೋರಂಜನೆಯ ರಸದೌತಣ ಬಡಿಸಲು ಬರುತ್ತಿದ್ದಾರೆ "ಬ್ಯಾಕ್ ಬೆಂಚರ್ಸ್"
ಸಾರಾ ಅಲಿ ಖಾನ್ ಆಡಿಷನ್ ಕೊಟ್ಟ ನಂತರ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಬೋಲ್ಡ್ ಹಾಗೂ ನಗ್ನ ದೃಶ್ಯಗಳಿಗೆ ಸಾರಾ ಸೂಕ್ತವಲ್ಲ ಎಂದು ಭಾವಿಸಿ, ಅವರೇ ಸಾರಾ ಅವರನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ಸಾರಾ ಅಲಿಖಾನ್ 'ಅನಿಮಲ್' ಚಿತ್ರದಲ್ಲಿ ನಟಿಸುವ ಆಫರ್ ಮಿಸ್ ಮಾಡಿಕೊಂಡಿದ್ದಾರೆ.
ಇನ್ನು ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ `ಅನಿಮಲ್' ಚಿತ್ರದಲ್ಲಿ ತೃಪ್ತಿ ಡಿಮ್ರಿ ಮತ್ತೊಬ್ಬ ನಾಯಕಿಯಾಗಿ ಬೋಲ್ಡ್ ದೃಶ್ಯಗಳಲ್ಲಿ ಮಿಂಚಿದ್ದು, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಕಳೆದ ಶುಕ್ರವಾರ ಬಿಡುಗಡೆಯಾಗಿ ಸಂಚಲನ ಮೂಡಿಸಿದ ಈ ಸಿನಿಮಾ ಈಗಾಗಲೇ 563 ಕೋಟಿ ಕಲೆಕ್ಷನ್ ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.