Vishnuvardhan: ವಿಷ್ಣು ದಾದಾ ಎಂದೇ ಅಭಿಮಾನಿಗಳಿಗೆ ಪ್ರೀತಿ ಪಾತ್ರರಾಗಿರುವ ವಿಷ್ಣುವರ್ಧನ್‌ ಸಾಗರದಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಸಿನಿಮಾಗಳ ಮೂಲಕ ಕನ್ನಡ ಚಿತ್ರ ರಂಗವನ್ನು ಮೇಲೆತ್ತಿದ ಕೈಗಳಲ್ಲಿ ವಿಷ್ಣುವರ್ಧನ್‌ ಬಹು ಮುಖ್ಯ ಪಾತ್ರ ವಹಿಸುತ್ತಾರೆ. 200 ಕ್ಕೂ ಹೆಚ್ಚು ಪಾತ್ರಗಳಿಗ ಜೀವ ನೀಡಿರುವ ವಿಷ್ಣುವರ್ಧನ್‌ ಒಂದಲ್ಲಾ ಒಂದು ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿರುತ್ತಾರೆ. 


COMMERCIAL BREAK
SCROLL TO CONTINUE READING

ಭಾರತಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ವಿಷ್ಣು ದಾದಾ ಅವರಿಗೆ ಇಬ್ಬರು ಪುತ್ರಿಯರು? ಹಾಗಾದರೆ ಆ ಇಬ್ಬರು ಪುತ್ರಿಯರು ಯಾರು? ಈಗ ಎಲ್ಲಿದ್ದಾರೆ? ತಿಳಿಯಲು ಮುಂದೆ ಓದಿ...


ವಿಷ್ಣು ದಾದಾಗೆ ಇಬ್ಬರು ಹೆಣ್ಣು ಮಕ್ಕಳು. ಹೌದು, ಪ್ರೀತಿಸಿ ಮದುವೆಯಾಗಿದ್ದ ವಿಷ್ಣುವರ್ಧನ್‌ ಹಾಗೂ ಭಾರತಿ ದಂಪತಿಗೆ ಬಹಳ ಕಾಲ ಮಕ್ಕಳಾಗಿರಲಿಲ್ಲ. ಇದರಿಂದಾಗಿ ದಂಪತಿ ಒಬ್ಬ ಪುಟ್ಟ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದರು, ಅವರೇ ಚಂದನ. ಚಂದನ ಅವರನ್ನು ದತ್ತು ಪಡೆದ ನಂತರ ಅವರಿಗೆ ಮತ್ತೊಂದು ಹೆಣ್ಣು ಮಗು ಜನಿಸಿತ್ತು ಅವರ ಹೆಸರು ಕೀರ್ತಿ. ಕಿರುತೆರೆ, ಹಿರಿತೆರೆಯಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿರುವ ಅನಿರುದ್ಧ್‌ ಜತ್ಕರ್‌ ಇದೇ ಕೀರ್ತಿಯವರ ಗಂಡ ಅಂದರೆ ವಿಷ್ಣುವರ್ಧನ್‌ ಅವರ ಅಳಿಯ. 


ಇದನ್ನೂ ಓದಿ: ನಾಚಿಕೆಯಾಗಲ್ವಾ ಅಂತ ಪ್ರಶ್ನೆ ಮಾಡಿದವರಿಗೆ ಸಿಲ್ಕ್‌ ಸ್ಮಿತಾ ಮಾಡಿದ್ದೇನು ಗೊತ್ತಾ..?


ಅನಿರುದ್ಧ್‌ ಕೆಲಸಗಳಿಗೆ ಸಾತ್‌ ಕೊಡುವ ಕೀರ್ತಿ ಆಗಾಗ ಅವರೊಂದಿಗೆ ಸೋಷಿಯಲ್‌ ಈವೆಂಟ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಚಂದನಾ ಅವರು ಮಾತ್ರ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಇದರಿಂದಾಗಿ ಮಾಧ್ಯಮದವರು ಪುಕಾರು ಹಬ್ಬಿಸಿದ್ದರು. ತಮ್ಮ ಸ್ವಂತ ಮಗಳಿಗೆ ಕೊಡುವಷ್ಟು ಫ್ರೀಡಂ ದತ್ತು ಪುತಿಗೆ ಕೊಡುವುದಿಲ್ಲ ಅವರನ್ನು ವಿಷ್ಣುವರ್ಧನ್‌ ಅಂಪತಿ ಕ್ಯಾಮರಾ ಮುಂದೆ ಕಾಣಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಇದ್ಯಾವುದೂ ನಿಜವಲ್ಲ.


ಚಂದನಾ ಅವರು ನಾಚಿಕೆ ಸ್ವಾಭಾವದವರು, ಅಷ್ಟಾಗಿ ಅವರು ಜನರ ಮುಂದೆ ಕಾಣಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಅದಷ್ಟೇ ಅಲ್ಲ ತಾವು ಒಬ್ಬ ಸೆಲೆಬ್ರಿಟಿ ದಂಪತಿಯ ಪುತ್ರಿ ಎಂದು ಕೂಡ ಎಲ್ಲೂ ಹೇಳಿಕೊಳ್ಳಲು ಈಕೆ ಇಷ್ಟಪಡುವುದಿಲ್ಲವಂತೆ.


ತಾವಾಯಿತು ತಮ್ಮ ಪುಟ್ಟ ಸಂಸಾರ ಆಯ್ತು ಅಂತಾ ಫುಲ್‌ ಸಿಂಪಲ್‌ ಜೀವನಾ ನಡೆಸುತ್ತಿದ್ದಾರೆ ಚಂದನಾ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.