Pawan Kalyan Third Wife: ತೆಲುಗು ನಟ-ರಾಜಕಾರಣಿಯಾಗಿರುವ ಪವನ್ ಕಲ್ಯಾಣ್ ರಾಜ್ಯ ಚುನಾವಣೆಯಲ್ಲಿ ಜನಸೇನಾ ಪಕ್ಷದ (ಜೆಎಸ್‌ಪಿ)ದಿಂದ ಐತಿಹಾಸಿಕ ಗೆಲುವು ಸಾಧಿಸಿದರು..  ಪತ್ನಿ ಅನ್ನಾ ಲೆಝ್ನೆವಾ ಪವನ್‌ ಕಲ್ಯಾಣ್‌ ಅವರ ರಾಜಕೀಯ ಜೀವನಕ್ಕೆ ಅಚಲ ಬೆಂಬಲಿಗರಾಗಿದ್ದಾರೆ..


COMMERCIAL BREAK
SCROLL TO CONTINUE READING

 ಪತಿಯ ಗೆಲುವನ್ನು ಸಂಭ್ರಮಿಸಿದ ಅನ್ನಾ ಲೆಝ್ನೆವಾ ಪವನ್‌ ಕಲ್ಯಾಣ್‌ಗೆ ತಿಲಕ ಇಟ್ಟು ಆರತಿ ಮಾಡಿರುವ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು.. ಇದೇ ವೇಳೆ ಅವರ ಮೂರನೇ ಪತ್ನಿಯ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳು ಹೊರಬಿದ್ದಿವೆ..


Alia Bhatt: 15 ವರ್ಷಕ್ಕೆ ಲವ್‌, ಮದುವೆಗೂ ಮುನ್ನ ಗರ್ಭಿಣಿ.. ಬಾಲಿವುಡ್ ಟಾಪ್‌ ನಟಿ ಈಕೆ !!


ಅನ್ನಾ ಲೆಝ್ನೆವಾ ರಷ್ಯಾದ ಮಾಡೆಲ್‌ ಹಾಗೂ ನಟಿ.. ಇವರು 2011 ರ ಚಲನಚಿತ್ರ ' ತೀನ್ ಮಾ ' ಚಿತ್ರೀಕರಣದಲ್ಲಿ ನಟ-ರಾಜಕಾರಣಿ ಪವನ್‌ ಕಲ್ಯಾಣ್ ಅವರನ್ನು ಭೇಟಿಯಾದರು.. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದರು.. ನಂತರ ಸೆಪ್ಟೆಂಬರ್ 30, 2013 ರಂದು ಅವರು ವಿವಾಹವಾದರು..


ಇದನ್ನೂ ಓದಿ-ಇನ್ನು ಮುಂದೆ ಆ ಸ್ಟಾರ್ ಹೀರೋಗಳ ಜೊತೆ ನಟಿಸಲ್ಲ..! ಬಾಲಿವುಡ್‌ ಸಿನಿಮಾ ನಂತರ ವಿಜಯ್ ಶಾಕಿಂಗ್‌ ಹೇಳಿಕೆ


ಪವನ್‌ ಕಲ್ಯಾಣ್‌ ಹಾಗೂ ಅನ್ನಾ ಲೆಝ್ನೆವಾ ದಂಪತಿಗೆ ಸದ್ಯ ಮಾರ್ಕ್ ಶಂಕರ್ ಪವನೋವಿಚ್ ಎಂಬ ಗಂಡು ಮಗನಿದ್ದಾನೆ.. ಆದರೆ ಅನ್ನಾ ಲೆಝ್ನೆವಾ ಅವರದ್ದು ಕೂಡ ಇದು ಎರಡನೇ ಮದುವೆ.. ಹಾಗೇ ಒಬ್ಬ ಮಗಳ ತಾಯಿಯೂ ಹೌದು.. ಆ ಮಗುವನ್ನು ಪವನ್‌ ಕಲ್ಯಾಣ್‌ ತನ್ನ ಮಗಳಂತೆ ಬೆಳೆಸಿದ್ದಾರೆ.. 


ಇನ್ನು ಭಾರತದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ  'ಪವರ್ ಸ್ಟಾರ್'  ಪವನ್‌ ಕಲ್ಯಾಣ್‌ 2013 ರಿಂದ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.. ರಾಜಕೀಯದ ಮೇಲೆ ಗಮನಹರಿಸುವುದಕ್ಕಾಗಿ ನಟ 2017 ರಲ್ಲಿ ನಟನೆಯಿಂದ ದೂರಉಳಿದಿದ್ದರು.. ನಂತರ 2021 ರಲ್ಲಿ ' ವಕೀಲ್ ಸಾಬ್ '  ಚಿತ್ರದ ಮೂಲಕ ಕಂಬ್ಯಾಕ್‌ ಮಾಡಿದ್ದದರು. 
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.