ಫಸ್ಟ್ ಲುಕ್ ಹಾಡಿನ ಮೂಲಕ ಗಮನ ಸೆಳೆದ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಭರವಸೆ ಹೊತ್ತ ಟ್ರೇಲರ್ ಬಿಡುಗಡೆಯಾಗಿದೆ.   ಕಾರ್ತಿಕ್ ಮಾರಲಭಾವಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ಟ್ರೇಲರ್ ನಟರಾಕ್ಷಸ ಡಾಲಿ ಧನಂಜಯ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.


COMMERCIAL BREAK
SCROLL TO CONTINUE READING

ನೈಜ ಘಟನೆ ಆಧಾರಿತ ಈ ಚಿತ್ರದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸೂರ್ಯಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಸೇರಿದಂತೆ  ಹಲವು ರಂಗಭೂಮಿ ಕಲಾವಿದರು ತಾರಾಬಳಗದಲ್ಲಿದ್ದಾರೆ.


ಇದನ್ನೂ ಓದಿ: ShivaRajkumar: ದರ್ಶನ್‌ಗೆ ಚಪ್ಪಲಿ ಎಸೆತ: ಫ್ಯಾನ್ಸ್ ಒತ್ತಾಯದ ಬೆನ್ನಲ್ಲೇ ಶಿವಣ್ಣ ಪ್ರತಿಕ್ರಿಯೆ


ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಡಾಲಿ ಧನಂಜಯ ಇಡೀ ತಂಡವನ್ನು ನೋಡಿ ತುಂಬಾ ಖುಷಿ ಆಯ್ತು. ನಿರ್ದೇಶಕ ಕಾರ್ತಿಕ್ ತುಂಬಾ ಒಳ್ಳೆ ಟೀಂ ಕಟ್ಟಿಕೊಂಡು, ಒಳ್ಳೆ ಒಳ್ಳೆ ಕಲಾವಿದರನ್ನು ಇಟ್ಟುಕೊಂಡು ನೈಜ ಘಟನೆ ಆಧರಿಸಿದ ಸಿನಿಮಾ ಮಾಡಿದ್ದಾರೆ. ಚಿತ್ರದ ಪ್ರಮೋಷನ್ ಕೂಡ ತುಂಬಾ ಕ್ರಿಯೇಟಿವ್ ಆಗಿ ಮಾಡ್ತಿದ್ದಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆದಾಗ್ಲಿ. ಜನವರಿ 6ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಈ ಚಿತ್ರ ವರ್ಷದ ಮೊದಲ ಹಿಟ್ ಸಿನಿಮಾ ಆಗಲಿ. ಉತ್ತರ ಕರ್ನಾಟಕ ಭಾಗದಿಂದ ಇನ್ನಷ್ಟು ನಿರ್ದೇಶಕರು, ಕಲಾವಿದರು ಚಿತ್ರರಂಗಕ್ಕೆ ಬರಲಿ. ಆ ಭಾಗದ ಕಥೆಗಳನ್ನು ಹೇಳಲಿ ಎಂದು ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.


ನಿರ್ದೇಶಕ ಕಾರ್ತಿಕ್ ಮಾರಲಭಾವಿ ಮಾತನಾಡಿ ಈ ಚಿತ್ರಕ್ಕಾಗಿ ಒಂದೂವರೆ ವರ್ಷದಿಂದ ಇಡೀ ತಂಡ ಕಷ್ಟ ಪಟ್ಟಿದ್ದೀವಿ. ಸಿನಿಮಾ ಜನವರಿ 6ಕ್ಕೆ ಬಿಡುಗಡೆಯಾಗುತ್ತಿದೆ, ಟ್ರೇಲರ್ ನೋಡಿ ಯಾಕಿಷ್ಟು ವೈಲೆನ್ಸ್ ಎನ್ನೋರಿಗೆ ಸಿನಿಮಾ ನೋಡಿದ ಮೇಲೆ ವೈಲೆನ್ಸ್ ಯಾಕೆ ಎಂದು ಅರ್ಥವಾಗುತ್ತೆ. ನಾನು ಯಾದಗಿರಿಯ ಪುಟ್ಟ ಹಳ್ಳಿಯಿಂದ ಬಂದವನು. ಧನಂಜಯ್ ಅವರ  ಜಯನಗರ 4th ಬ್ಲಾಕ್ ಕಿರುಚಿತ್ರ ನೋಡಿ ಸ್ಪೂರ್ತಿ ಪಡೆದು ಚಿತ್ರರಂಗಕ್ಕೆ ಬಂದೆ. ನಾನು ಕಿರುಚಿತ್ರ ನಿರ್ದೇಶನ ಮಾಡೋಕೆ ಆರಂಭಿಸಿದೆ. ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಟ್ರೇಲರ್ ಧನಂಜಯ್ ಸರ್ ಬಿಡುಗಡೆ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು. ಊರಿನಲ್ಲಿ ನಮ್ಮ ಹಿರಿಯರು ಹಿಂದೆ ನಡೆದ ಘಟನೆ ಬಗ್ಗೆ ಕಥೆ ಹೇಳುತ್ತಿದ್ರು ಆ ಘಟನೆ ಆಧಾರವಾಗಿಟ್ಟುಕೊಂಡು ಕಥೆ ಹೆಣೆದು ಅದಕ್ಕೊಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟಿದ್ದೇನೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು.


ನಾಯಕ ಚಂದನ್ ರಾಜ್ ಮಾತನಾಡಿ, “ಧನಂಜಯ್ ಸರ್ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದು ತುಂಬಾ ಖುಷಿ ಆಯ್ತು. ಈ ಚಿತ್ರದ ಹಿಂದೆ ಇಡೀ ಚಿತ್ರತಂಡದ ಪರಿಶ್ರಮವಿದೆ, ನೈಜ ಘಟನೆ ಆಧರಿಸಿದ ಸಿನಿಮಾವಿದು ಆದ್ರಿಂದ ವೈಲೆನ್ಸ್ ಇದೆ. ಜನವರಿ 6ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ, ಸಿನಿಮಾ ಗೆದ್ರೆ ನಮ್ಮೆಲ್ಲರ ಕನಸು ನನಸಾಗುತ್ತೆ” ಎಂದರು.


ಇನ್ನೊಬ್ಬ ನಾಯಕ ನಟ ಅಶ್ವಿನ್ ಹಾಸನ್ ಮಾತನಾಡಿ “ಲಾಕ್ಡೌನ್ ನಲ್ಲಿ ಕೇಳಿದ ಕಥೆ ಇದು. ಯಾವುದೇ ಸಿನಿಮಾವಿರಲಿ, ಪುಟ್ಟ ಪಾತ್ರವಿರಲಿ ದೊಡ್ಡದಿರಲಿ ಎಲ್ಲಾ ಪಾತ್ರಗಳನ್ನು ಇಲ್ಲಿವರೆಗೆ ಮಾಡಿಕೊಂಡು ಬಂದಿದ್ದೇನೆ. ಇದರಲ್ಲಿ ಲೀಡ್ ರೋಲ್ ನಲ್ಲಿ ನಟಿಸಿದ್ದೇನೆ. ಸ್ಯಾಮ್ಯುಯಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಲೀಡ್ ರೋಲ್ ಅಷ್ಟು ಈಸಿ ಅಲ್ಲ. ನಿರ್ದೇಶಕರು ನನ್ನ ಮೇಲೆ ನಂಬಿಕೆ ಇಟ್ಟು ಪಾತ್ರ ನೀಡಿದ್ದಾರೆ ಅವರಿಗೆ ತೃಪ್ತಿ ಆಗೋ ಹಾಗೆ ನಟಿಸಿದ್ದೇನೆ. ಈ ಸಿನಿಮಾ ನಮ್ಮೆಲ್ಲರ ಕನಸು, ಗೆಲ್ಲಲೇ ಬೇಕು ಎಂದು ಚಿತ್ರವನ್ನು ಮಾಡಿದ್ದೀವಿ” ಎಂದು ಭರವಸೆಯ ಮಾತುಗಳನ್ನಾಡಿದರು.


ಈ ಚಿತ್ರವನ್ನು ಭಾರತ್ ಟಾಕೀಸ್ ನಡಿ ಜೈ ಕುಮಾರ್, ಕೀರ್ತಿ ರಾಜ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಶಶಾಂಕ್ ಶೇಷಗಿರಿ, ಅನುರಾಧ ಭಟ್ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್ ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.


ಇದನ್ನೂ ಓದಿ: ಶಾಂತಿದೂತ ʼಅಪ್ಪುʼ ಅಭಿಮಾನಿಗಳು ಚಪ್ಪಲಿ ಎಸೆದ್ರಾ..! ಇಲ್ಲವೇ ಇದು ಕಿಡಿಗೇಡಿಗಳ ಕೈವಾಡವೇ..?


ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ಸೂರ್ಯಕಿರಣ್, ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.