Kotee movie  : ಪರಮ್‌ ನಿರ್ದೇಶನದ ಡಾಲಿ ಧನಂಜಯ್‌ ನಟನೆಯ ʼಕೋಟಿʼ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ : Bourn Vita : ಆರೋಗ್ಯ ಪಾನೀಯ ಲಿಸ್ಟ್ ನಿಂದ "ಬೋರ್ನ್ ವೀಟಾ"  ಔಟ್ : ಕೇಂದ್ರ ಆದೇಶ


ಮಧ್ಯಮ ವರ್ಗದ ಜನ ಜೀವನದ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಧನಂಜಯ್ ಕೋಟಿ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾ ಜೂನ್‌ 14ಕ್ಕೆ ರಿಲೀಸ್‌ ಆಗಲಿದೆ.


ಟೀಸರ್‌ ಇಂದು ಬಿಡುಗಡೆಯಾಗಿದ್ದು, ಅದ್ಭುತವಾಗಿ ಮೂಡಿ ಬಂದಿದೆ. ಎಲ್ಲರೊಳಗೊಬ್ಬ ಕಳ್ಳನಿದ್ದಾನೆ ಎನ್ನುವ ಮಾತು ಇಂದಿನ ಸಮಾಜದಲ್ಲಿ ಸ್ವಾರ್ಥಕ್ಕಾಗಿ.. ಹಣಕ್ಕಾಗಿ... ಏನು ಬೇಕಾದರೂ ಮಾಡುವ ಜನರ ಮನಸ್ಥಿತಿಯನ್ನು ವಿವರಿಸುತ್ತದೆ. ಸಾಲ ತೀರಿಸಲು ಹಣದ ಹಿಂದೆ ಬೀಳುವ ಕೋಟಿಗೆ ಎದುರಾಗುವ ಕಷ್ಣಗಳನ್ನು ಟೀಸರ್‌ನಲ್ಲಿ ನೋಡಬಹುದು. 


ಟೀಸರ್‌ನಲ್ಲಿ ರಂಗಾಯಣ ರಘು ಪಂಚಿಂಗ್​ ಡೈಲಾಗ್​ ಹೈಲೈಟ್, ಕಳ್ಳತನ, ಮೋಸ, ವಂಚನೆ ಮಾಡದೆ ಸತ್ಯ ಮಾರ್ಗದಲ್ಲಿ ಹಣ ಗಳಿಸಲು ಸಾಧ್ಯವೆ ಎಂಬ ಪ್ರಶ್ನೆಗೆ ನಾಯಕ ಕೋಟಿ ಉತ್ತರ ಹುಡುಕುತ್ತಾ ಟೀಸರ್ ಸಾಗುತ್ತದೆ. ಕೊನೆಗೆ ಮಾಡಿದ ಸಾಲವನ್ನು ತೀರಿಸಲು ಡಾಲಿ ನ್ಯಾಯದ ಹಾದಿ ತುಳಿತಾನಾ ಇಲ್ಲವೇ ತಪ್ಪು ದಾರಿಯಲ್ಲಿ ನಡಿತಾನಾ ಎನ್ನುವುದು ಸಿನಿಮಾ ನೋಡಿ ತಿಳಿದುಕೊಳ್ಳಬೇಕಾಗಿದೆ ಎನ್ನುವುದಾಗಿದೆ. 


ಇದನ್ನು ಓದಿ : ಇತಿಹಾಸ ಸೃಷ್ಟಿಯ ಹೊಸ್ತಿಲಲ್ಲಿ Yujvendra Chahal, ಈ ವಿಶಿಷ್ಟ ಡಬಲ್ ಸೆಂಚ್ಯೂರಿಯಿಂದ ಮೂರೇ!


 ಜಿಯೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕೋಟಿ ಸಿನಿಮಾ ನಿರ್ಮಾಣವಾಗಿದೆ ಮತ್ತು ಪರಮ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಹೊಯ್ಸಳ ಸಿನಿಮಾದ ನಂತರ ಧನಂಜಯ್ ಒಂದು ವರ್ಷದ ಬಳಿಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಇದೇ ಜೂನ್‌ 14ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.