BBK 9: ಬಿಗ್ ಬಾಸ್ ಮನೆಯಲ್ಲಿ ಸರ್ಪ್ರೈಸ್ ಎಲಿಮಿನೇಷನ್! ಹೊರ ನಡೆದೋರು ಯಾರು?
Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ಅತ್ಯಂತ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇನ್ನು ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಕನ್ನಡ 9 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಯತ್ತ ಸಾಗುತ್ತಿದ್ದಾರೆ. BBK9 ವೀಕ್ಷಕರು ಕಾರ್ಯಕ್ರಮದ ವಿಜೇತ ಮತ್ತು ರನ್ನರ್ ಅಪ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭವಿಷ್ಯ ನುಡಿಯುತ್ತಿದ್ದಾರೆ.
Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ಅತ್ಯಂತ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇನ್ನು ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಕನ್ನಡ 9 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಯತ್ತ ಸಾಗುತ್ತಿದ್ದಾರೆ. BBK9 ವೀಕ್ಷಕರು ಕಾರ್ಯಕ್ರಮದ ವಿಜೇತ ಮತ್ತು ರನ್ನರ್ ಅಪ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭವಿಷ್ಯ ನುಡಿಯುತ್ತಿದ್ದಾರೆ. ಟಾಸ್ಕ್‌ನಲ್ಲಿ ಸ್ಪರ್ಧಿಗಳ ಕಾರ್ಯಕ್ಷಮತೆಯ ಬಗ್ಗೆ ಅವರು ಟ್ವಿಟರ್‌ನಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಗ್ರ್ಯಾಂಡ್ ಫಿನಾಲೆ ಕದನಕ್ಕೆ ಬಿಗ್ ಬಾಸ್ ಕನ್ನಡ 9 ಮನೆಯಲ್ಲಿ ಎಲ್ಲಾ ಪ್ರಬಲ ಸ್ಪರ್ಧಿಗಳು ಉಳಿದಿದ್ದಾರೆ. ದಿನಗಳು ಕಳೆದಂತೆ ಸ್ಪರ್ಧಿಗಳು BBK9 ಟ್ರೋಫಿಯನ್ನು ಪಡೆಯಲು ತಮ್ಮ ಆಟದ ತಂತ್ರವನ್ನು ಬದಲಾಯಿಸುತ್ತಿದ್ದಾರೆ.
ಇದನ್ನೂ ಓದಿ : Video : ಜೈಲಿನಲ್ಲಿ ಹಾಟ್ ಬ್ಯೂಟಿ ಉರ್ಫಿ ಜಾವೇದ್ ಹೇಗಿದ್ದಾರೆ ನೋಡಿ..
13 ನೇ ವಾರದ ಎಲಿಮಿನೇಷನ್ ಬಗ್ಗೆ ಮಾತನಾಡುವುದಾದರೆ, ಅರುಣ್, ಆರ್ಯವರ್ಧನ್, ದೀಪಿಕಾ ದಾಸ್ ಮತ್ತು ದಿವ್ಯಾ ಉರುಡುಗ ನಾಮಿನೇಟ್ ಆಗಿದ್ದಾರೆ. ಮತ್ತೊಂದೆಡೆ, ಬಿಗ್ ಬಾಸ್ ಕನ್ನಡ 9 ತಯಾರಕರು ಈ ವಾರ ಡಬಲ್ ಎಲಿಮಿನೇಷನ್‌ಗೆ ಯೋಜಿಸುತ್ತಿದ್ದಾರೆ ಎಂಬ ವದಂತಿಗಳಿವೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಎಂಟು ಜನರು ಇರುವುದರಿಂದ ಈ ವಾರ ಡಬಲ್ ಎಲಿಮಿನೇಷನ್ ನಡೆಯುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ ಉಳಿದಿರುವುದು ಎರಡೇ ವಾರ. ಫಿನಾಲೆಯ ವೇದಿಕೆಯ ಮೇಲೆ ಐವರಿಗೆ ಮಾತ್ರ ಅವಕಾಶ. ಆದರೆ ಮನೆಯಲ್ಲಿರುವುದು ಎಂಟು ಜನ. ಇದೇ ಕಾರಣಕ್ಕೆ ಈ ವಾರ ಇಬ್ಬರು ಮನೆಯಿಂದ ಹೊರ ಬರುತ್ತಾರೆ ಎನ್ನಲಾಗುತ್ತಿದೆ.
ಮನೆಯಲ್ಲಿ ರೂಪೇಶ್ ರಾಜಣ್ಣ, ಅಮೂಲ್ಯ ಗೌಡ, ದಿವ್ಯಾ ಉರುಡುಗ, ಅರುಣ್ ಸಾಗರ್, ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಉಳಿದುಕೊಂಡಿದ್ದಾರೆ. ವರದಿಗಳ ಪ್ರಕಾರ, ಇವರಲ್ಲಿ ಇಬ್ಬರು ಸ್ಪರ್ಧಿ ಕೂಡ ಎನಿಮಿನೇಟ್ ಆಗಬಹುದು ಎನ್ನಲಾಗುತ್ತಿದೆ. ಬಿಗ್ ಮನೆಯಲ್ಲಿ 8 ಮಂದಿ ಇದ್ದು, ಇಬ್ಬರು ಈ ವಾರ ಹೊರ ಹೋಗಬಹುದು. ಮತ್ತೋರ್ವ ಸ್ಪರ್ಧಿ ಮುಂದಿನ ವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Sneha Divorce : ʼನೀನು ಪರ್ಫೆಕ್ಟ್ ಅಲ್ಲ...!ʼ ಕೊನೆಗೂ ಗಂಡನ ಕುರಿತು ಸತ್ಯ ಬಿಚ್ಚಿಟ್ಟ ನಟಿ ಸ್ನೇಹಾ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.