Double iSmart Teaser: ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ಉಸ್ತಾದ್ ರಾಮ್ ಪೋತಿನೇನಿ ಕಾಂಬಿನೇಷನ್’ನ ಬಹುನಿರೀಕ್ಷಿತ ಸಿನಿಮಾ 'ಡಬಲ್ ಇಸ್ಮಾರ್ಟ್'. ಇಸ್ಮಾರ್ಟ್ ಶಂಕರ್ ಚಿತ್ರದ ಸೀಕ್ವೆಲ್ ಆಗಿರುವ 'ಡಬಲ್ ಇಸ್ಮಾರ್ಟ್' ಸಿನಿಮಾದ ಟೀಸರ್ ಇಂದು ಡೈನಾಮಿಕ್ ಸ್ಟಾರ್ ರಾಮ್ ಜನ್ಮದಿನಕ್ಕೆ ಬಿಡುಗಡೆ ಮಾಡಲಾಗಿದೆ. ಭರ್ಜರಿ ಆಕ್ಷನ್ ಮೂಲಕ ರಾಮ್ ಅಬ್ಬರಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಸಾಧಾರಣ ಸಾಧನೆ ತೋರಿದ ಭಾರತೀಯ ಕ್ರೀಡಾಪಟುಗಳಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ನಿಂದ ಗೌರವ


ಮಾಸ್ ಮತ್ತು ಆಕ್ಷನ್-ಪ್ಯಾಕ್ಡ್ ಟೀಸರ್’ನಲ್ಲಿ ರಾಮ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾವ್ಯಾ ಥಾಪರ್ ನಾಯಕಿಯಾಗಿ ನಟಿಸಿದ್ದು, ಸಂಜಯ್ ದತ್ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. 1.26 ಸೆಕೆಂಡ್ ಇರುವ ಟೀಸರ್’ನಲ್ಲಿ ರಾಮ್ ಪೋತಿನೇನಿ ಹಾಗೂ ಸಂಜಯ್ ಜುಗಲ್ಬಂದಿ ನೋಡುಗರಿಗೆ ಕಿಕ್ ಕೊಡ್ತಿದೆ. 


ಇದನ್ನೂ ಓದಿ: “ನನ್ನ ಮನೆಗೆ ಕಲ್ಲು ಎಸೆಯಲು ಸಾಧ್ಯವಿಲ್ಲ- ನಿವೃತ್ತಿ ಚರ್ಚೆ ಮಧ್ಯೆಯೇ ಹೀಗಂದಿದ್ದೇಕೆ ರೋಹಿತ್ ಶರ್ಮ


ಡಬಲ್ ಆಕ್ಷನ್, ಡಬಲ್ ಎನರ್ಜಿ ಮತ್ತು ಡಬಲ್ ಫನ್‌ ಕೊಡುವ 'ಡಬಲ್ ಇಸ್ಮಾರ್ಟ್' ಟೀಸರ್ ಕ್ಲೈಮ್ಯಾಕ್ಸ್ ಸೀನ್ಸ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದೆ. ಮಣಿ ಶರ್ಮಾ ಸಂಗೀತ ಚಿತ್ರಕ್ಕಿದೆ. ಕ್ರೇಜಿ ಪ್ಯಾನ್ ಇಂಡಿಯನ್ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ ಬ್ಯಾನರ್’ನಡಿ ಪುರಿ ಜಗನ್ನಾಥ್, ಚಾರ್ಮಿ ಕೌರ್ ನಿರ್ಮಾಣದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿಬರುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.