ಡಾ.ಪುನೀತ್ ರಾಜ್‌ಕುಮಾರ್ ರವರನ್ನುಆರಾಧ್ಯ ದೈವ ಎನ್ನಲು ಕಾರಣವೇನು ...?
Puneeth Rajkumar:ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ.. ಅಪ್ಪು ನಮ್ಮನ್ನು ಅಗಲಿ ಸುಮಾರು ಒಂದೂವರೆ ವರ್ಷದ ಹತ್ತಿರವಾಗ್ತಿದೆ.. ಆದ್ರೆ ಈ ನೋವು ಮರೆಯೋದಕ್ಕೆ ಮಾತ್ರ ಆಗ್ತಿಲ್ಲ... ಅಭಿಮಾನಿಗಳ ಪಾಲಿಗೆ ದೇವರು... ದೇಶದ ಮೂಲೆ ಮೂಲೆಯಲ್ಲೂ ಅಪ್ಪು ಅಭಿಮಾನಿಗಳಿದ್ದಾರೆ.. ಕರ್ನಾಟಕ ಮಾತ್ರವಲ್ಲದೇ ದೇಶದ ಪ್ರತಿಗಲ್ಲಿಯಲ್ಲೂ ಅಪ್ಪು ಫೋಟೋ ಕಾಣಬುಹುದು.
Puneeth Rajkumar:ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ.. ಅಪ್ಪು ನಮ್ಮನ್ನು ಅಗಲಿ ಸುಮಾರು ಒಂದೂವರೆ ವರ್ಷದ ಹತ್ತಿರವಾಗ್ತಿದೆ.. ಆದ್ರೆ ಈ ನೋವು ಮರೆಯೋದಕ್ಕೆ ಮಾತ್ರ ಆಗ್ತಿಲ್ಲ... ಅಭಿಮಾನಿಗಳ ಪಾಲಿಗೆ ದೇವರು... ದೇಶದ ಮೂಲೆ ಮೂಲೆಯಲ್ಲೂ ಅಪ್ಪು ಅಭಿಮಾನಿಗಳಿದ್ದಾರೆ.. ಕರ್ನಾಟಕ ಮಾತ್ರವಲ್ಲದೇ ದೇಶದ ಪ್ರತಿಗಲ್ಲಿಯಲ್ಲೂ ಅಪ್ಪು ಫೋಟೋ ಕಾಣಬುಹುದು.
ಬಾನ ದಾರಿಯಲ್ಲಿ ಪುನೀತ ಪಯಣ ಕಾರ್ಯಕ್ರಮದಲ್ಲಿ ರಸ್ತೆ ನಾಮಕರಣ ಮಾಡಿದ ಬೆನ್ನಲೇ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಯಿ ಅಪ್ಪು ಸಮಾಧಿ ಬಳಿ ಸ್ಮಾರಕವನ್ನೂ ನಿರ್ಮಿಸುವುದಾಗಿ ಘೋಷಿಸಿದ್ಧಾರೆ..ಅಪ್ಪು ಹೆಸ್ರು ಎಷ್ಟರ ಮಟ್ಟಿಗೆ ಅಜಾರಮರ ಎಂದರೆ...ಅಗಲಿ ಸುಮಾರು ಒಂದೂವರೆ ವರ್ಷ ಹತ್ತಿರವಾಗಿದ್ದರೂ ಪ್ರತಿ ರಾಜ್ಯದ ಅನೇಕ ಕಡೆಗಳಲ್ಲಿ ಅಪ್ಪು ಪುಥಳಿ ನಿರ್ಮಾಣವಾಗಿರೋದು ಸಾಕ್ಷಿಯಾಗಿವೆ..ಪ್ರತಿ ,ಮನೆ, ಹಬ್ಬ ಜಾತ್ರೆ , ಮದುವೆ ಗಳಲ್ಲೂ ಅಪ್ಪು ಪೋಟೋ ನೀಡುವುದು ಟ್ರೇಂಡ್ ಆಗಿದೆ.ಹಾಗೆಯೇ ಹುಟ್ಟುವ ಮಗುವಿನಿಂದ ಹಿಡಿದು ಹೋಟೆಲ್, ಅಂಗಡಿ, ದೇವಾಲಯ ನಿರ್ಮಾಣ ಮಾಡಿ ಅಪ್ಪು ಹೆಸ್ರು ಇಟ್ಟಿರುವುದು ಕಾಣಬಹುದು..
ಇದನ್ನೂ ಓದಿ: No Kissing ಪಾಲಿಸಿಗೆ ಬ್ರೇಕ್! ವಿಜಯ್ ದೇವರಕೊಂಡ ಜೊತೆ ತಮನ್ನಾ ಲಿಪ್‌ಲಾಕ್?
ಅಪ್ಪು ಹಾಕಿಕೊಟ್ಟ ಹಾದಿಯಲ್ಲಿ ಅವರ ಅಭಿಮಾನಿಗಳು ನಡೆಯುತ್ತಿದ್ದಾರೆ ಎಂಬುವುದಕ್ಕೆ ಇತ್ತಿಚೇಗೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ದಯಾನಂದ ಮತ್ತು ವಾಲಿ ನಿವಾಸಿಗಳ ಇವರ ಮಗ ಈರಣ್ಣ ಕಿಡ್ನಿ ವೈಫಲ್ಯದಿಂದ ನರಳುತ್ತಿ ಬಾಲಕನ ಪರಿಸ್ಥಿತಿಯನ್ನ ನೋಡಿ ಪುನೀತ್ ರಾಜ್ ಕುಮಾರ್ ಅಭಿಮಾನಿ ತಂಡವೊಂದು ಈರಣ್ಣನ ಬೆನ್ನಿಗೆ ನಿಂತಿದ್ದು ಸಾಕ್ಷಿಯಾಗಿದೆ.
ಇದನ್ನೂ ಓದಿ: ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ "ನಮ್ಮ ಲಚ್ಚಿ"ಗೆ ಸಿಕ್ತು ಈ ಹಿರಿಮೆ...!
ಶಸ್ತ್ರ ಚಿಕಿತ್ಸೆಗೆ ಧನಸಹಾಯ ಮಾಡಲು ಫೇಸ್ಬುಕ್, ವಾಟ್ಸಾಪ್, ಸಾಮಾಜಿಕ ಜಾಲತಾಣ, ಶಾಲಾ - ಕಾಲೇಜು ಸೇರಿ ಹಲವೆಡೆ ಭೇಟಿ ನೀಡಿ ಅಪ್ಪು ಅಭಿಮಾನಿಗಳು ಆ ಯುವಕನ ಚಿಕಿತ್ಸೆಗೆ ಹಣ ಸಂಗ್ರಹಿಸುರುವುದು ಅಪ್ಪು ಹಾಕಿಕೊಟ್ಟ ಹಾದಿಯಲ್ಲಿ ಮಾದರಿಯಾಗಿದೆ.
ಅಪ್ಪು ಜೀವಂತವಾಗಿದ್ದಾಗ ಬಡ ಜನರಿಗೆ ಹೇಗೆ ನೆರವಾಗಿದ್ದರೋ ಹಾಗೆ ಅವರ ಅಗಲಿಕೆ ನಂತರ ಅವರ ಸಮಾಧಿ ಬಳಿ ಬಡ ಜನರು ಅಪ್ಪುವಿನ ಭಾವ ಚಿತ್ರ ಮಾರಾಟ ಮಾಡುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.ಅವರ ಅಗಲಿಕೆ ನಂತರ ಕರ್ನಾಟಕ ಅಪ್ಪುವಿನ ಹಾದಿಯಲ್ಲಿ ಅಭಿಮಾನಿಗಳು ನೇತ್ರದಾನ , ರಕ್ತದಾನದಲ್ಲಿ ತೋಡಗಿಸಿಕೊಳ್ಳುತ್ತಿರುವುದು ಕಾಣಬಹುದು..
ಅಪ್ಪು ಹೆಸರು, ಹೋಟೇಲ್ , ರಸ್ತೆ, ಅಂಗಡಿ, ಮಳಿಗೆ ಅಷ್ಟೇ ಅಲ್ಲದೇ ಪಠ್ಯ ಪುಸ್ತಕದಲ್ಲೂ ಅಪ್ಪು ಜೀವನ ಸಾಧನೆ ಸೇರಿಸಲು ಮನವಿಗಳು ಕೇಳಿ ಬಂದಿವೆ.. ಇವೆಲ್ಲಾದಕ್ಕೂ ಕಾರಾಣವಾಗಿರೋಅಪ್ಪುವಿನ ವಿನಯತೆ,ಸಾಮಾಜಿಕ ಕಳಕಳಿ, ಸರಳತೆ,ಪ್ರೀತಿ , ಗೌರವ ಎಲ್ಲಾ ಗುಣ ಹೊಂದಿದ ಇವರು ಕೋಟ್ಯಂತರ ಜನರ ಆರಾಧ್ಯ ದೈವನಾಗಲು ಇದಕ್ಕಿಂತ ಬೇರೆ ಕಾರಣ ಬೇಕೆ.. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.