ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದೆ ಡಾ.ರಾಜ್ಕುಮಾರ್ ಕುಟುಂಬದ ಕುಡಿ
ದೊಡ್ಮನೆ ಹುಡುಗನ ನಿಶ್ಚಿತಾರ್ಥ ಇದೇ ತಿಂಗಳ ಜುಲೈ 5 ರಂದು ನಡೆಯಲಿದೆ.
ಬೆಂಗಳೂರು: ಕನ್ನಡದ ಕಣ್ಮಣಿ, ವರನಟ ಡಾ. ರಾಜ್ ಕುಮಾರ್ ಕುಟುಂಬದ ಕುಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ದೊಡ್ಮನೆ ಹುಡುಗನ ನಿಶ್ಚಿತಾರ್ಥ ಇದೇ ತಿಂಗಳ ಜುಲೈ 5 ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಡಾ. ರಾಜ್ ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸುಪುತ್ರ ಯುವ ರಾಜ್ಕುಮಾರ್(ಗುರುರಾಜ್ ಕುಮಾರ್) ನಿಶ್ಚಿತಾರ್ಥ ಮೈಸೂರು ಮೂಲದ ಗೆಳತಿ ಶ್ರೀದೇವಿ ಅವರ ಜತೆ ಯುವರಾಜ್ ನಿಶ್ಚಿತಾರ್ಥ ನಡೆಯಲಿದೆ. ಎರಡು ಕುಟುಂಬದ ಸಮ್ಮುಖದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಶ್ಚಿತಾರ್ಥ ಶುಭಕಾರ್ಯ ನಡೆಯಲಿದೆ ಎನ್ನಲಾಗಿದ್ದು, ನಿಶ್ಚಿತಾರ್ಥದಲ್ಲಿ ಆಪ್ತರು, ಬಂಧು-ಬಳಗ ಮಾತ್ರ ಹಾಜರಿರಲಿದ್ದಾರೆ ಎನ್ನಲಾಗಿದೆ.