ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಸಂಜೆ 6:30 ಕ್ಕೆ ಪ್ರಸಾರವಾಗುತ್ತಿರುವ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ಕಥಾನಾಯಕ ದತ್ತನ ಹಳೆಯ ಲವ್‌ ಸ್ಟೋರಿ ಅನಾವರಣಗೊಳ್ಳಲಿದೆ. ಕಥಾನಾಯಕ ದತ್ತ ಸುಂದರವಾಗಿರುವ ಹುಡುಗಿಯರ ಬಗ್ಗೆ ದ್ವೇಷ ಬೆಳೆಸಿಕೊಂಡಿರುತ್ತಾನೆ. ಆದರೆ ಇದಕ್ಕೆ ಕಾರಣ ಏನು? ಎಂಬುದು ನೋಡುಗರಿಗೆ ಗೊತ್ತಿರಲಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ವೇತನ ವರ್ಗಕ್ಕೆ ಸಿಹಿ ಸುದ್ದಿ !ಸ್ಟಾಂಡರ್ಡ್ ಡಿಡಕ್ಷನ್ ಏರಿಸಲು ಸರ್ಕಾರದ ಸಿದ್ದತೆ


 ದತ್ತಾತ್ರೇಯ–ದತ್ತ ಭಾಯ್‌ ಆಗಿದ್ದು ಹೇಗೆ?
ದತ್ತನಿಗೆ ಅವನ ತಾಯಿ ಅಬ್ಬಕ್ಕ, ಇಂಪನಾ ಎಂಬ ಹುಡುಗಿಯೊಂದಿಗೆ ಮದುವೆ ಮಾಡಿಸುವ ಯೋಚನೆಯಲ್ಲಿದ್ದು, ಇದೇ ಸಮಯದಲ್ಲಿ ಮನೆ ಕೆಲಸದ ಹುಡುಗಿಯಾಗಿರುವ ಕಥಾನಾಯಕಿ ದೃಷ್ಟಿಯ ಬಳಿ ದತ್ತ ತನ್ನ ಹಳೆಯ ಪ್ರೀತಿಯ ಬಗ್ಗೆ, ಅದರ ಸಂಕಟಗಳ ಬಗ್ಗೆ, ಪ್ರೇಮ ವೈಫಲ್ಯ ತನ್ನ ಬದುಕಿನ ದಿಕ್ಕು ಬದಲಾಯಿಸಿದ ಬಗ್ಗೆ, ತಾನು ಯಾಕೆ ಸುಂದರವಾಗಿರುವ ಹುಡುಗಿಯರ ಬಗ್ಗೆ ತಿರಸ್ಕಾರ ಬೆಳೆಸಿಕೊಂಡೆ ಎಂಬುದರ ಬಗ್ಗೆ, ಎಲ್ಲಕ್ಕಿಂತ ಹೆಚ್ಚಾಗಿ ದತ್ತಾತ್ರೇಯ ಪಾಟೀಲ್‌ ಎಂಬ ಶಾಂತ ಸ್ವಭಾವದ ತಾನು ದತ್ತ ಭಾಯ್‌ ಆಗಿ  ಬದಲಾಗಿ ರೌಡಿ ಬದುಕನ್ನು ತನ್ನದಾಗಿಸಿಕೊಂಡೆ  ಎಂಬ ಕುರಿತು ಹೇಳಿಕೊಳ್ಳುತ್ತಾನೆ.


ದತ್ತನ ಬದುಕಿನ  ಹಳೆಯ ದಿನಗಳು ಇದೇ ಸೋಮವಾರದಿಂದ ಅಂದರೆ ನವೆಂಬರ್‌ 25ರಿಂದ ಸಂಜೆ 06:30 ಕ್ಕೆ ವೀಕ್ಷಕರ ಮುಂದೆ ತೆರೆದುಕೊಳ್ಳಲಿದೆ. ಈ ಸಂಚಿಕೆಗಳಲ್ಲಿ ದತ್ತ ಹಾಗೂ ಆತನ ಕುಟುಂಬದವರು ಬಡತನದ ದಿನಗಳಲ್ಲಿ ಹೇಗಿದ್ದರು ಎಂಬುದನ್ನು ನೋಡುಗರು ತಿಳಿಯಬಹುದಾಗಿದೆ.
 
ದತ್ತ-ದೃಷ್ಟಿ ನಡುವೆ ಭಾಂದವ್ಯ!
ಪ್ರಸ್ತುತ ಕತೆಯಲ್ಲಿ ದತ್ತನ ತಾಯಿ ಅಬ್ಬಕ್ಕ, ಇಂಪನಾ ಎಂಬ ಹುಡುಗಿಯೊಂದಿಗೆ ದತ್ತನ ಮದುವೆ ಮಾಡಿಸುವ ನಿರ್ಧಾರ ಮಾಡಿರುತ್ತಾರೆ. ಆದರೆ ಇಂಪನಾ, ತಿಲಕ್‌ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದು ಆಕೆ ಅವನೊಂದಿಗೆ ಓಡಿ ಹೋಗುವ ಯೋಚನೆಯಲ್ಲಿರುತ್ತಾಳೆ. ಈ ನಡುವೆ ದತ್ತ ಮತ್ತು ದೃಷ್ಟಿ ನಡುವೆ ಯಜಮಾನ ಮತ್ತು ಮನೆ ಕೆಲಸದವಳು ಎಂಬ ರೇಖೆಯನ್ನು ಮೀರಿದ ಭಾಂದವ್ಯ ಮೂಡಿದ್ದು, ಅವರಿಬ್ಬರೂ ಹೆಚ್ಚು ಹತ್ತಿರವಾಗುತ್ತಿದ್ದಾರೆ. ದತ್ತ ತನ್ನ ಬದುಕಿನ ಸೂಕ್ಷ್ಮ ವಿಚಾರಗಳನ್ನು ದೃಷ್ಟಿಯ ಬಳಿ ಹೇಳಿಕೊಳ್ಳುತ್ತಿದ್ದಾನೆ.


ಇದನ್ನೂ ಓದಿ: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಿಂದ ಗಂಗಕ್ಕ ಖ್ಯಾತಿಯ ಹರ್ಷಿತಾ ಹೊರಬಂದಿದ್ಯಾಕೆ? ಸ್ವತಃ ಅವರೇ ನೀಡಿದ ಕಾರಣ ಇದು...
 
ಮುಂದಿನ ಕುತೂಹಲಕಾರಿ ತಿರುವು?
ಈ ಎಲ್ಲ ಗೊಂದಲಗಳ ನಡುವೆ ದತ್ತ ಯಾರನ್ನು ಮದುವೆಯಾಗುತ್ತಾನೆ? ಮನೆ ಕೆಲಸದ ಹುಡುಗಿ ದೃಷ್ಟಿಗೆ ದತ್ತನ ಮೇಲೆ ಹುಟ್ಟಿರುವ ಪ್ರೀತಿ ಮದುವೆ ಮಂಟಪದವರೆಗೂ ಹೋಗುತ್ತಾ? ದತ್ತನ ಬದುಕನ್ನು ನರಳಿಸಬೇಕು ಎಂದು ಹಠಕ್ಕೆ ಬಿದ್ದಿರುವ ದತ್ತನ ಅಕ್ಕ ಶರಾವತಿ ಈ ಪರಿಸ್ಥಿಗಳಲ್ಲಿ ಎಷ್ಟು ಅಪಾಯಕಾರಿಯಾಗುತ್ತಾಳೆ? ದತ್ತ ಹಿಂದೆ ಪ್ರೀತಿಸಿದ್ದ ಹುಡುಗಿ ಯಾರು? ಆಕೆ ಈಗ ಎಲ್ಲಿದ್ದಾಳೆ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಮುಂದಿನ ದಿನಗಳಲ್ಲಿ ಪ್ರಸಾರವಾಗುವ ಸಂಚಿಕೆಗಳಲ್ಲಿಅನಾವರಣಗೊಳ್ಳಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ