ಬೆಂಗಳೂರು : ʼಝಲಕ್ ದಿಖ್ಲಾ ಜಾʼ ದೀರ್ಘಕಾಲ ಪ್ರೇಕ್ಷಕರನ್ನು ರಂಜಿಸುತ್ತಿರುವ ಅತ್ಯಂತ ಜನಪ್ರಿಯ ನೃತ್ಯ ರಿಯಾಲಿಟಿ ಶೋ. ಸಾಕಷ್ಟು ಮನರಂಜನೆಯ ಜೊತೆಗೆ ಅದ್ಭುತ ನೃತ್ಯ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಘಟನೆಯೊಂದು ನಡೆದಿದ್ದು, ಖ್ಯಾತ ನಟಿ ಟಬು ಆಂಕರ್‌ ಮನೀಷ್‌ ಪಾಲ್‌ ಕುತ್ತಿಗೆಗೆ ಕತ್ತಿ ಹಿಡಿದ ಪ್ರಸಂಗ ನಡೆಯಿತು.


COMMERCIAL BREAK
SCROLL TO CONTINUE READING

ಹೌದು.. ಇತ್ತೀಚಿಗೆ ʼಝಲಕ್ ದಿಖ್ಲಾ ಜಾʼ ಕಾರ್ಯಕ್ರಮಕ್ಕೆ ʼದೃಶ್ಯಂʼ 2 ರ ಚಿತ್ರತಂಡ ಅತಿಥಿಯಾಗಿ ಆಗಮಿಸಿತ್ತು. ಈ ವೇಳೆ ಟಬು ಅವರಿಗೆ ಟಾಸ್ಕ್‌ ಒಂದನ್ನು ನೀಡಲಾಗಿತ್ತು. ದೃಶ್ಯಂ 2 ಸಿನಿಮಾದ ಡೈಲಾಗ್‌ ಒಂದನ್ನು ಹೇಳುತ್ತಾ ಟಬು, ಮನೀಷ್‌ ಪಾಲ್‌ ಕುತ್ತಿಗೆಗೆ ಕತ್ತಿ ಹಿಡಿದರು. ಇದನ್ನು ಊಹಿಸದ ಮನೀಷ್‌ ಸೇರಿದಂತೆ ಮಾಧುರಿ ದೀಕ್ಷಿತ್‌ ಮತ್ತು ನೋರಾ ಫತೇಹಿ ಗಾಬರಿಗೊಂಡರು. ನಂತರ ಟಬು ನಗಲು ಪ್ರಾರಂಭಿಸಿದರು.


ಇದನ್ನೂ ಓದಿ: Kerebete: ಸ್ಯಾಂಡಲ್‌ವುಡ್‌ನ ಒಂದಿಷ್ಟು ಮಂದಿ ‘ಕೆರೆಬೇಟೆ’ಗೆ ಸಜ್ಜಾಗಿದ್ದು ಏಕೆ?


 

 

 

 



 

 

 

 

 

 

 

 

 

 

 

A post shared by ColorsTV (@colorstv)


ಇನ್ನು ಝಲಕ್ ದಿಖ್ಲಾ ಜಾದಲ್ಲಿ ಸ್ಪರ್ಧಿಗಳಿಗೆ ಸವಾಲನ್ನು ನೀಡಲಾಗುವುದು. ಇತ್ತೀಚಿನ ಸಂಚಿಕೆಯಲ್ಲಿ ತಬು ಮತ್ತು ಅಜಯ್ ದೇವಗನ್ ಅವರ 90 ರ ದಶಕದ ಹಾಡುಗಳ ಪ್ರದರ್ಶನ ನೀಡಲು ಟಾಸ್ಕ್‌ ನೀಡಲಾಗಿದೆ. ವಾರಾಂತ್ಯದ ಸಂಜೆ ಎಲ್ಲಾ ವೀಕ್ಷಕರನ್ನು ರಂಜಿಸಲು ದೃಶ್ಯಂನ ಇಡೀ ತಂಡವು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ. ದೃಶ್ಯಂ 2 ನಲ್ಲಿ ಅಜಯ್‌ ದೇವಗನ್‌, ಟಬು, ಅಕ್ಷಯ್‌ ಖನ್ನಾ ಅಭಿನಯಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.