Drugs Case: ಮುಂಬೈ ಡ್ರಗ್ಸ್ ಪ್ರಕರಣಕ್ಕೆ (Drugs Case) ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಮಧ್ಯೆಯೇ ಹಲವು ಗಣ್ಯ ವ್ಯಕ್ತಿಗಳನ್ನು ಪ್ರಶ್ನಿಸಲಾಗಿದೆ. ಇದೇ ವೇಳೆ  ಈ ಪ್ರಕರಣದಲ್ಲಿ, ನಟ ಅರ್ಮಾನ್ ಕೊಹ್ಲಿಯನ್ನು (Arman Kohli) ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬಂಧಿಸಿದೆ. ಆತನ ಮನೆಯಿಂದ ಮಾದಕ ವಸ್ತುಗಳ ಪತ್ತೆಗೆ ಹಿನ್ನೆಲೆ ಭಾನುವಾರ ಆತನನ್ನು ಬಂಧನಕ್ಕೋಳಪಡಿಸಲಾಗಿದೆ.  ಅಂದಿನಿಂದ, ಅನೇಕ ಆಘಾತಕಾರಿ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ.  ಪ್ರಸ್ತುತ ಈ ಪ್ರಕರಣದಲ್ಲಿ, ಮುಂಬೈ ನ್ಯಾಯಾಲಯವು ಅರ್ಮಾನ್ ಕೊಹ್ಲಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-COVID-19 ಲಸಿಕೆ ತೆಗೆದುಕೊಂಡರೂ ಬಾಲಿವುಡ್ ನಿರ್ಮಾಪಕಿ ಫರಾಖಾನ್ ಗೆ ಕೊರೊನಾ ಧೃಡ


Arman Kohli) ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಹಂಚಿಕೊಂಡಿರುವ ಸುದ್ದಿ ಸಂಸ್ಥೆ ANI, 'ಮುಂಬೈ ಕೋರ್ಟ್ (Mumbai Court) ಅರ್ಮಾನ್ ಕೊಹ್ಲಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಮುಂಬೈನ ಅವರ ನಿವಾಸದಲ್ಲಿ ಡ್ರಗ್ಸ್ ಜಪ್ತಿ ಮಾಡಲಾಗಿರುವ ಹಿನ್ನೆಲೆ ಅವರನ್ನು ಬಂಧಿಸಲಾಗಿತ್ತು' ಎಂದು ಬರೆದುಕೊಂಡಿದೆ. ಆಗಸ್ಟ್ 28ರಂದು NCB ಅಧಿಕಾರಿಗಳು ಅರ್ಮಾನ್ ಕೊಹ್ಲಿ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು ಎಂಬುದು ಇಲ್ಲಿ ಗಮನಾರ್ಹ. ಬಳಿಕ ಅವರನ್ನು ವಿಚಾರಣೆಗಾಗಿ NCB ಕಚೇರಿಗೆ ಕರೆದುಕೊಂಡು ಹೋಗಲಾಗಿತ್ತು. ವಿಚಾರಣೆಯ ವೇಳೆ ನಟ ಮಾದಕ ಪದಾರ್ಥದ ಮತ್ತಿನಲ್ಲಿದ್ದರು ಎಂದೂ ಕೂಡ ಹಲವು ಮಾಧ್ಯಮಗಳು ವರದಿ ಮಾಡಿದ್ದವು.


ಇದನ್ನೂ ಓದಿ-ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಬಾಲಿವುಡ್ ಹಿರಿಯ ನಟಿ ಸಾಯಿರಾ ಬಾನು


ಅರ್ಮಾನ್ ಕೊಹ್ಲಿಗೂ ಮುನ್ನ ಇವರನ್ನು ಬಂಧಿಸಲಾಗಿದೆ
ಅರ್ಮಾನ್ ಕೊಹ್ಲಿಯ ಮೇಲೆ ಮಾದಕ ಪದಾರ್ಥ ಹಾಗೂ ಸೈಕೊಟ್ರೋಫಿಕ್ ಪದಾರ್ಥಗಳ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ವಿಶೇಷ NDPS ನ್ಯಾಯಾಲಯವು (NDPS Court) ಅರ್ಮಾನ್ ಕೊಹ್ಲಿಯ NCB ಕಸ್ಟಡಿಯನ್ನು ಸೆಪ್ಟೆಂಬರ್ 1ರವರೆಗೆ ವಿಸ್ತರಿಸಿತ್ತು. ಅರ್ಮಾನ್ ಅವರನ್ನು ಹೊರತುಪಡಿಸಿ ಈ ಪ್ರಕರಣದಲ್ಲಿ ಡ್ರಗ್ಸ್ ಪೆಡ್ಲಿಂಗ್ ಆರೋಪದಡಿ ಅಜಯ್ ಸಿಂಗ್ (Drug Pedler Ajay Singh) ಎಂಬಾತನನ್ನು ಮುಂಬೈನ ಹಾಜಿ ಅಲಿ ಪ್ರದೇಶದಿಂದ ಬಂಧಿಸಲಾಗಿದೆ. ಅಜಯ್ ಓರ್ವ ಹಿಸ್ಟರಿ ಶೀಟರ್ ಆಗಿದ್ದಾನೆ ಎಂದು NCB ಅಧಿಕಾರಿಗಳು ಹೇಳಿದ್ದಾರೆ. ಆತನ ವಿಚಾರಣೆಯ ವೇಳೆ ಅರ್ಮಾನ್ ಕೊಹ್ಲಿ ಹೆಸರು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 


ಇದನ್ನೂ ಓದಿ-ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಯಾಕೆ ರಿಮೇಕ್ ಸಿನಿಮಾ ಮಾಡುವುದಿಲ್ಲ ಗೊತ್ತಾ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ