Drugs Case: Sushant Singh Rajput ಆಪ್ತ ಸ್ನೇಹಿತನನ್ನು ಬಂಧಿಸಿದ NCB
Drugs Case: Sushant Singh Rajput ಅವರ ಆಪ್ತ ಸ್ನೇಹಿತ ಹೃಷಿಕೇಶ್ ಪವಾರ್ (Rishikesh Pawar) ಅವನನ್ನು NCB ಅಧಿಕಾರಿಗಳು ಬಂಧಿಸಿದ್ದಾರೆ. ಸುಶಾಂತ್ ಸಿಂಗ್ ರಾಜ್ಪುತ್ ಡ್ರಗ್ಸ್ ಪ್ರಕರಣದಲ್ಲಿ ಈತನ ಹೆಸರು ಕೇಳಿಬಂದಿದೆ ಎನ್ನಲಾಗಿದೆ.
Drugs Case - ನವದೆಹಲಿ: ಸುಶಾಂತ್ ಸಿಂಗ್ ರಾಜ್ಪುತ ಡ್ರಗ್ಸ್ ಪ್ರಕರಣದಲ್ಲಿ NCB ಅಧಿಕಾರಿಗಳು ಮತ್ತೊಮ್ಮೆ ಕಾರ್ಯತತ್ಪರಾಗಿದ್ದಾರೆ. ಇಂದು NCB ಅಧಿಕಾರಿಗಳು ಸುಶಾಂತ್ ಸಿಂಗ್ ರಾಜ್ಪುತ್ ಅವರ ಮತ್ತೋರ್ವ ಆಪ್ತಸ್ನೇಹಿತನನ್ನು ಹಾಗೂ ಸಹಾಯಕ ನಿರ್ದೇಶಕ ಹೃಷಿಕೇಶ್ ಪವಾರ್ ನನ್ನು ಬಂಧಿಸಿದ್ದಾರೆ. ಪ್ರಸ್ತುತ ಅಧಿಕಾರಿಗಳು ಆತನ ವಿಚಾರಣೆ ಮುಂದುವರೆಸಿದ್ದಾರೆ. ಕಳೆದ ತಿಂಗಳಿನಿಂದ ಪೊಲೀಸರು ಈತನಿಗಾಗಿ ಜಾಲ ಬೀಸಿದ್ದರು.
ಜನವರಿ 8 ರಿಂದ ಪೊಲೀಸರು ಈತನ ಹುಡುಕಾಟದಲ್ಲಿದ್ದರು.
ಕಳೆದ ಕೆಲ ದಿನಗಳಿಂದ ಪ್ರಕರಣದ ತನಿಖೆಯ ವೇಳೆ ದೊರೆತ ಕೆಲ ಸಾಕ್ಷ್ಯಗಳಲ್ಲಿ ಹೃಷಿಕೇಶ್ ಪವಾರ್ ಹೆಸರು ಕೇಳಿಬಂದಿತ್ತು. ಜನವರಿ 8 ರಂದು ಪ್ರಕತಗೊಂಡಿದ್ದ ವರದಿಯೊಂದರ ಪ್ರಕಾರ NCB ಅಧಿಕಾರಿಗಳು ಪವಾರ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ. ಕಳೆದ ಹಲವು ದಿನಗಳ ಹುಡುಕಾಟದ ಬಳಿಕ ಇದೀಗ ಆತನನ್ನು ಬಂಧಿಸಲಾಗಿದೆ.
ಈ ಮೊದಲು ಕೂಡ ಆತನ ವಿಚಾರಣೆ ನಡೆಸಲಾಗಿದೆ
ಈ ಮೊದಲು ಕೂಡ ಡ್ರಗ್ಸ್ ಪ್ರಕರಣದಲ್ಲಿ NCB ಅಧಿಕಾರಿಗಳು ಪವಾರ್ ನ ವಿಚಾರಣೆ ನಡೆಸಿದ್ದಾರೆ. ಡ್ರಗ್ಸ್ ಸಪ್ಲೈಯರ್ ವೊಬ್ಬ NCB ಅಧಿಕಾರಿಗಳ ಮುಂದ ಪವಾರ್ ಹೆಸರನ್ನು ಉಲ್ಲೇಖಿಸಿದ್ದ ಎನ್ನಲಾಗಿದೆ. ಬಳಿಕ ಪವಾರ್ ನನ್ನು NCB ವಿಚಾರಣೆಗೊಳಪಡಿಸಿತ್ತು. ಪ್ರಕರಣದಲ್ಲಿ ಬಂಧನ ಭೀತಿಯ ಹಿನ್ನೆಲೆ ಪವಾರ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾ. ಆದರೆ, ಆತನಿಗೆ ಈ ನೆಮ್ಮದಿ ಸಿಕ್ಕಿರಲಿಲ್ಲ.
ಇದನ್ನು ಓದಿ- Drugs Case: ಡ್ರಗ್ಸ್ ಪೆಡ್ಲರ್ ಬಂಧಿಸಲು ಹೋದ NCB ತಂಡದ ಮೇಲೆ ದಾಳಿ, 2 ಅಧಿಕಾರಿಗಳಿಗೆ ಗಾಯ
ಜನವರಿ 7 ರಂದು ಪರಾರಿ
ನ್ಯಾಯಾಲಯದಿಂದ ಜಾನೀನು ದೊರಕದ ಹಿನ್ನೆಲೆ ಹಾಗೂ ಸಮನ್ ಗೆ ಹಾಜರಾಗದೆ ಇರುವ ಕಾರಣ NCB ಅಧಿಕಾರಿಗಳು ಮುಂಬೈ ನ ಚೆಂಬೂರ್ ಪ್ರದೇಶದಲ್ಲಿರುವ ಪವಾರ್ ನಿವಾಸಕ್ಕೆ ತಲುಪಿದ್ದರು. ಈ ವೇಳೆ ಪವಾರ್ ಜನವರಿ 7 ರಂದೇ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಸುಶಾಂತ್ ಗೆ ಡ್ರಗ್ಸ್ ಸಪ್ಲೈ ಮಾಡುವವರಲ್ಲಿ ಹೃಷಿಕೇಶ್ ಕೂಡ ಶಾಮೀಲಾಗಿದ್ದಾನೆ ಎನ್ನಲಾಗುತ್ತಿದೆ.
ಇದನ್ನು ಓದಿ-2019 ರ ಡ್ರಗ್ಸ್ ಪಾರ್ಟಿ ಬಗ್ಗೆ ವಿವರಣೆ ಕೋರಿ ಕರಣ್ ಜೋಹರ್ ಗೆ ಎನ್‌ಸಿಬಿ ನೋಟಿಸ್
ಹಲವು ಜನರು NCB ಬಲೆಗೆ ಬಿದ್ದಿದ್ದಾರೆ
ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಒಂದಾದ ಮೇಲೊಬ್ಬರಂತೆ ಕ್ರಮ ಕೈಗೊಳ್ಳುತ್ತಿದೆ. ಈ ಡ್ರಗ್ಸ್ ಪ್ರಕರಣದಲ್ಲಿ ಇದುವರೆಗೆ ಹಲವು ಜನರನ್ನು ಬಂಧಿಸಲಾಗಿದೆ. ಇದುವರೆಗೆ ಈ ಡ್ರಗ್ಸ್ ಪ್ರಕರಣದಲ್ಲಿ ಹಲವು ಬಾಲಿವುಡ್ (Bollywood Drugs Case) ಗಣ್ಯರ ಹೆಸರು ಕೂಡ ಕೇಳಿಬಂದಿವೆ. ತನಿಖೆಯ ಭಾಗವಾಗಿ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಹಲವು ಬಾಲಿವುಡ್ ಸೆಲಿಬ್ರಿಟಿಗಳ ಗ್ಯಾಜೆಟ್ ಗಳನ್ನು ಕೂಡ ತನಿಖೆಗೆ ಒಳಪಡಿಸಿದ್ದಾರೆ.
ಇದನ್ನು ಓದಿ- Drugs Case: ಕಾಮಿಡಿಯನ್ Bharti Singh ಪತಿ Harsh Limbachiyaaನನ್ನು ಬಂಧಿಸಿದ NCB
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.