ಬೆಂಗಳೂರು: ರಾಜ್ಯದಲ್ಲಿ‌ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರುವ  ಡ್ರಗ್ಸ್ ಮಾಫಿಯಾ (Drug Mafia)ಕ್ಕೆ ಸಂಭವಿಸಿದಂತೆ ಪೋಲಿಸರ ವಶದಲ್ಲಿ ವಿಚಾರಣೆ ಎದುರಿಸುತ್ತಿರುವ ಚಿತ್ರನಟಿಯರಾದ  ರಾಗಿಣಿ‌ ದ್ವಿವೇದಿ (Ragini Dwivedi)  ಮತ್ತು‌ ಸಂಜನಾ ಗುಲ್ರಾನಿಗೆ ನಿನ್ನೆ 'ಡಬಲ್ ಟಾರ್ಚರ್' ನೀಡಲಾಗಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಏನಿದು ಡಬಲ್ ಟಾರ್ಚರ್?
ಡ್ರಗ್ಸ್ ಮಾಫಿಯಾದ ತನಿಖೆ ನಡೆಸುತ್ತಿರುವ ಸಿಟಿ ಕ್ರೈಂ ಬ್ರಾಂಚ್ ಪೊಲೀಸರಿಗೆ (CCB) ಚಿತ್ರನಟಿಯರಾದ ರಾಗಿಣಿ‌ ದ್ವಿವೇದಿ ಮತ್ತು‌  ಸಂಜನಾ ಗುಲ್ರಾನಿ (Sanjana Gulrani) ಅವರಿಂದ ಮಾಹಿತಿ ತೆಗೆಯುವುದು ತ್ರಾಸದಾಯಕವಾಗಿತ್ತು. ಯಾವುದೇ ರೀತಿ ಕೇಳಿದರೂ ಯಾವೊಂದು ಮಾಹಿತಿಯನ್ನು ಬಾಯಿ ಬಿಡುತ್ತಿರಲಿಲ್ಲ. ಜೊತೆಗೆ ಅನಾರೋಗ್ಯದ ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಒಬ್ಬರಾದ ಬಳಿಕ ಒಬ್ಬ ತನಿಖಾಧಿಕಾರಿ ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ.


ಡ್ರಗ್ಸ್ ಧಂಧೆ: ಇಂದು ರಾಗಿಣಿ‌ ದ್ವಿವೇದಿ, ಸಂಜನಾ ಗುಲ್ರಾನಿ ಸೇರಿದಂತೆ 6 ಮಂದಿಯ ಭವಿಷ್ಯ ನಿರ್ಧಾರ


ಮಡಿವಾಳ ಎಫ್ ಎಸ್ ಎಲ್ (FSL)ನಲ್ಲಿ  ನಟಿಯರಿಬ್ಬರನ್ನು ಮೊದಲು ಇನ್ಸ್ ಪೆಕ್ಟರ್ ಗಳಾದ ಅಂಜುಮಾಲ ಹಾಗೂ ಪುನೀತ್ ಅವರು ವಿಚಾರಣೆ ನಡೆಸಿದರು. ಅವರು ವಿಚಾರಣೆ ಮುಗಿಸಿದ್ದೇ ತಡ ಸಿರಾಜಿದ್ದೀನ್ ಹಾಗೂ ಶ್ರೀಧರ್ ಪೂಜಾರಿ ವಿಚಾರಣೆಗೊಳಪಡಿಸಿದರು. ಎಲ್ಲರೂ ಭಿನ್ನ ಭಿನ್ನ ರೀತಿಯಲ್ಲಿ ಬಾಯಿ ಬಿಡಿಸುವ ಪ್ರಯತ್ನ ಮಾಡಿದರು. ಈ 'ಡಬಲ್ ಟಾರ್ಚರ್' ಕಾರ್ಯತಂತ್ರ ಕೈಗೂಡಿದ್ದು ಕಡೆಗೂ ಚಿತ್ರನಟಿಯರು ಹೈ ಎಂಡ್ ಪಾರ್ಟಿಗಳ ಆಯೋಜಕ ವಿರೇನ್ ಖನ್ನಾ ಪರಿಚಯ ಇರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


ವಿರೇನ್ ಖನ್ನಾ ಪರಿಚಯ ಇರುವುದಾಗಿ ಮತ್ತು ಆತ ಆಯೋಜಿಸಿದ್ದ ಕೆಲವು ಪಾರ್ಟಿಗಳಲ್ಲಿ ತಾವು ಭಾಗಿಯಾಗಿದ್ದಾಗಿ ಕೂಡ ಒಪ್ಪಿಕೊಂಡಿದ್ದಾರೆ.‌ ಮೊದಲು ಪರಿಚಯ ಆಯಿತು. ನಂತರ ಸ್ನೇಹ ಬೆಳೆಯಿತು. ಮತ್ಯಾವುದೇ ವ್ಯವಹಾರ ಆಗಿಲ್ಲ ಎಂದು ರಾಗಿಣಿ ದ್ವಿವೇದಿ ಹಾಗೂ ಸಂಜನಾ ತಿಳಿಸಿದ್ದಾರೆ ಎನ್ನಲಾಗಿದೆ.


ರಾಗಿಣಿ ದ್ವಿವೇದಿ 'ಡ್ರಗ್ಸ್ ಹುಡುಗಿ' ಅಂತಾ ಗೊತ್ತಿರಲಿಲ್ಲ: ರಮೇಶ್ ಜಾರಕಿಹೊಳಿ‌

ಇದೇ ವೇಳೆ ರಾಗಿಣಿ ದ್ವಿವೇದಿಯನ್ನು 2018ರ ಬಾಣಸವಾಡಿ ಕೇಸ್ ಬಗ್ಗೆಯೂ ಪ್ರತ್ಯೇಕ ವಿಚಾರಣೆ ನಡೆಸಲಾಗಿದೆ. ಅಲ್ಲದೆ ಮೊಬೈಲ್ ನಲ್ಲಿ ಡಿಲೀಟ್ ಮಾಡಿರುವ ಮೆಸೇಜ್ ಗಳ ಬಗ್ಗೆ ವಿಚಾರಣೆ ಮಾಡಲಾಗಿದೆ. 


ಯಾವ ಕಾರಣಕ್ಕೆ ವಾಟ್ಸಪ್ ಚಾಟ್  ಡಿಲೀಟ್ ಮಾಡಿದ್ದು? ಆ ಸಂಭಾಷಣೆಗಳಲ್ಲಿ ಯಾವುದರ ಬಗ್ಗೆ ಚರ್ಚೆಯಾಗಿತ್ತು? ಡಿಲೀಟ್ ಮಾಡುವಂತದ್ದು ಏನಿತ್ತು? ಎಂದು ವಿಚಾರಣೆಗೊಳಪಡಿಸಲಾಗಿದೆ.

ಇದೇ ರೀತಿ ಸಂಜನಾ ಕೂಡ ತಮ್ಮ ಮೊಬೈಲ್ ನ‌ಲ್ಲಿ ಕೆಲವರ ಜೊತೆ ಮಾಡಿದ್ದ ಚಾಟ್ ಡಿಲೀಟ್ ಮಾಡಿದ್ದರು. ಹಾಗಾಗಿ ಅವರನ್ನು ಮೊಬೈಲ್ ನಲ್ಲಿ ಸಾಕ್ಷಿ ನಾಶ ಮಾಡಿದ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ಪ್ರತ್ಯೇಕ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಂದಿದೆ.


ವಿಶೇಷವಾಗಿ ಈ ಇಬ್ಬರು ನಟಿಯರು ಹೋಗಿದ್ದ ಪಾರ್ಟಿಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ.‌ ಕಳೆದ ಒಂದು ವರ್ಷದಲ್ಲಿ ಯಾವೆಲ್ಲಾ ಪಾರ್ಟಿಗಳಿಗೆ ಹೋಗಿದ್ದರು? ಯಾರ ಜೊತೆ ಪಾರ್ಟಿಗಳಿಗೆ ಹೋಗಿದ್ದರು? ಆ ಪಾರ್ಟಿಗಳಿಗೆ ಬೇರೆ ಯಾರೆಲ್ಲಾ ಬಂದಿದ್ದರು? ಆ ಪಾರ್ಟಿಗಳನ್ನು ಆಯೋಜಿಸಿದ್ದವರು ಯಾರು? ಎಂಬ ಬಗ್ಗೆ ಮಾಹಿತಿ‌ ಕಲೆಹಾಕಲಾಗಿದೆ.‌ ಇಂದು ನ್ಯಾಯಾಧೀಶರ ಮುಂದೆ ಹಾಜರು‌ ಪಡಿಸುವ ಮುನ್ನ ಇವರನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.