Drugs Party Case: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan)ಅವರ ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಇಂದು ವಿಚಾರಣೆ ನಡೆಯಲಿದೆ. ಇದಕ್ಕೂ ಮೊದಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಆರ್ಯನ್ ಖಾನ್ ಮತ್ತು ಬಾಲಿವುಡ್ ನಟಿ ನಡುವೆ ಡ್ರಗ್ ಚಾಟ್ ಅನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಿದೆ. ಇದನ್ನು ಆಧಾರವಾಗಿಟ್ಟುಕೊಂಡು ಆರ್ಯನ್ ಖಾನ್ ಜಾಮೀನನ್ನು ಸಂಸ್ಥೆ ವಿರೋಧಿಸಬಹುದು ಎಂಬುದು ಸ್ಪಷ್ಟವಾಗಿದೆ. ಆಂಗ್ಲ ಮಾಧ್ಯಮದಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, NCB ಬಳಿ ಡ್ರಗ್ಸ್ ಕುರಿತು ಆರ್ಯನ್ ಖಾನ್ ನಟಿಯೊಂದಿಗೆ ನಡೆಸಿರುವ ಚಾಟ್ ವಿವರ ಇದೆ. ಇದನ್ನೇ ಸಂಷ್ಟೇ  ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಪ್ರಸ್ತುತಪಡಿಸಿದ್ದು, ಆರ್ಯನ್ ಕಸ್ಟಡಿಯನ್ನು ಇನ್ನೂ ಕೆಲ ಕಾಲ ವಿಸ್ತರಿಸುವಂತೆ ಕೋರಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಈ ನಟಿಯ ವಿರುದ್ಧ 50 ಕೋಟಿ ರೂ. ಮಾನಹಾನಿ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ..!


ಮೂಲಗಳ ಪ್ರಕಾರ, ಮುಂಬೈನಲ್ಲಿ ನಡೆದ ಕ್ರೂಸ್ ಪಾರ್ಟಿಯಲ್ಲಿ (Cruise Drugs Party Case), ಆರ್ಯನ್ ಖಾನ್ ಜೊತೆಗೆ ನಟಿಯು ಡ್ರಗ್ಸ್ ಬಗ್ಗೆ ಸಂಭಾಷಣೆ ನಡೆಸಿದ್ದಳು ಎಂದು ಸಂಸ್ಥೆ ಹೇಳಿದೆ. ಸ್ವಲ್ಪ ಸಮಯದ ನಂತರ NCB ಆರ್ಯನ್ ಖಾನ್ ನನ್ನು ಬಂಧಿಸಿತು. ಆರ್ಯನ್ ಹೊರತುಪಡಿಸಿ, ಇತರ 7 ಮಂದಿಯನ್ನು ಸಹ ಸಂಸ್ಥೆ ಅಕ್ಟೋಬರ್ 2 ರಂದು ಬಂಧಿಸಿತ್ತು. ಚಾಟ್ ನಲ್ಲಿ ಆರ್ಯನ್ ಖಾನ್ ಡ್ರಗ್ಸ್ ಬಗ್ಗೆ ನಟಿಯೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎಂದು ಸಂಸ್ಥೆ ಹೇಳಿದೆ. ಕಳೆದ ವಿಚಾರಣೆಯ ಸಂದರ್ಭದಲ್ಲಿ ಕೆಲವು ಚಾಟ್‌ಗಳನ್ನು ಎನ್‌ಸಿಬಿ ನ್ಯಾಯಾಲಯಕ್ಕೆ ಒದಗಿಸಿತ್ತು. ಅದರ ನಂತರ ಇದೀಗ ಇನ್ನೂ ಕೆಲವು ವಿವರಗಳನ್ನು ಏಜೆನ್ಸಿ ಸಲ್ಲಿಸಿದೆ ಎನ್ನಲಾಗಿದೆ. 


ಇದನ್ನೂ ಓದಿ-ಸತತ ನಾಲ್ಕನೇ ಬಾರಿಗೆ ಇಡಿ ಸಮನ್ಸ್ ನಿಂದ ತಪ್ಪಿಸಿಕೊಂಡ 'ಗಡಂಗ್ ರಕ್ಕಮ್ಮಾ'


ಕಳೆದ ವಾರ, ಆರ್ಯನ್ ಖಾನ್ (Aryan Khan) ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತುಇತರೆ ಆರು ಜನರನ್ನು ಅಕ್ಟೋಬರ್ 2 ರಂದು ಏಜೆನ್ಸಿ ಬಂಧಿಸಿತ್ತು. ಇದರ ನಂತರ ಮರುದಿನ ಇತರ 8 ಜನರನ್ನು ಬಂಧಿಸಲಾಗಿದೆ. ಆರ್ಯನ್ ಖಾನ್ ಸದ್ಯ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಡ್ರಗ್ಸ್ ನಿಂದ ಚೇತರಿಸಿಕೊಳ್ಳಲು ಆರ್ಯನ್ ಮತ್ತು ಇತರರಿಗೆ ಕೌನ್ಸೆಲಿಂಗ್ ಕೂಡ ನಡೆಸಲಾಗುತ್ತಿದೆ. ಗಮನಾರ್ಹವಾಗಿ, ಆರ್ಯನ್ ಖಾನ್ ಬಂಧನವು ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಎನ್‌ಸಿಪಿ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ.


ಇದನ್ನೂ ಓದಿ-ಜೈಲಿನಲ್ಲಿರುವ ಆರ್ಯನ್ ಖಾನ್ ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಮಾಡಿದ ಶಾರುಖ್ ಖಾನ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ