King of Kotha movie : ಮಲಯಾಳಂ ಸ್ಟಾರ್ ಹೀರೋ ದುಲ್ಕರ್ ಸಲ್ಮಾನ್ ಅವರ ಪ್ಯಾನ್ ಇಂಡಿಯಾ ಚಿತ್ರ 'ಕಿಂಗ್ ಆಫ್ ಕೋಟಾ'ದ ಟೀಸರ್ ರಿಲೀಸ್ ಆಗಿದ್ದು, ದುಲ್ಕರ್ ಖಡಕ್ ಲುಕ್‌ಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. 'ಕಿಂಗ್ ಆಫ್ ಕೋಟಾ' ಮಲಯಾಳಂ ಟೀಸರ್ ಅನ್ನು ದುಲ್ಕರ್ ತಂದೆ ಸೂಪರ್ ಸ್ಟಾರ್ ನಟ ಮಮ್ಮುಟ್ಟಿ ಬಿಡುಗಡೆ ಮಾಡಿದರು. 


COMMERCIAL BREAK
SCROLL TO CONTINUE READING

ತೆಲುಗಿನ ಟೀಸರ್ ಅನ್ನು ಸೂಪರ್ ಸ್ಟಾರ್ ಮಹೇಶ್ ಬಾಬು ಬಿಡುಗಡೆ ಮಾಡಿದರು. ಮಲಯಾಳಂ, ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಐಶ್ವರ್ಯ ಲಕ್ಷ್ಮಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಭಿಲಾಷ್ ಜೋಶಿ ನಿರ್ದೇಶನದ ಈ ಚಿತ್ರ ಇದೇ ವರ್ಷ ಓಣಂ ಉಡುಗೊರೆಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಶಾನ್ ರೆಹಮಾನ್ ಮತ್ತು ಜೇಕ್ಸ್ ಬಿಜೋಯ್ ಸಂಗೀತ ನೀಡುತ್ತಿದ್ದರೆ, ನಿಮಿಸ್ ರವಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. 


ಇದನ್ನೂ ಓದಿ: ಅರಸು ನಿರ್ದೇಶಕರ ಹೊಸ ಪ್ರೇಮಕಥೆ ತೆರೆಗೆ ಬರಲು ರೆಡಿ....ಜುಲೈ 14ಕ್ಕೆ 'ಅಪರೂಪ' ಸಿನಿಮಾ ಬಿಡುಗಡೆ


ಟೀಸರ್ ನೋಡಿದರೆ ಈ ಸಿನಿಮಾ ಗ್ಯಾಂಗ್ ಸ್ಟರ್ ಡ್ರಾಮಾ ಹಿನ್ನಲೆಯಲ್ಲಿ ಸಾಗುತ್ತಿದೆಯಂತೆ. ಟೀಸರ್ ನೋಡಿದರೆ ದುಲ್ಕರ್ ಖಳನಾಯಕರಿಂದ ಜನರನ್ನು ರಕ್ಷಿಸುವ ದರೋಡೆಕೋರನಾಗಿ ನಟಿಸುತ್ತಿರುವುದು ಸ್ಪಷ್ಟವಾಗಿದೆ. ರಾಜು ಬರುವಿಕೆಗಾಗಿ ಜನ ಕಾಯುತ್ತಿದ್ದಾರೆ ಎಂಬ ಡೈಲಾಗ್‌ನೊಂದಿಗೆ ಟೀಸರ್ ಶುರುವಾಗುತ್ತದೆ. ಕೇವಲ ಒಂದೂವರೆ ನಿಮಿಷದ ಟೀಸರ್ ದರೋಡೆಕೋರರು ಹಾಗೂ ಸಾಹಸ ದೃಶ್ಯಗಳಿಂದ ಕುತೂಹಲ ಮೂಡಿಸುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.