Actress Rashmi: ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿ ಮರೆಯಾದ ಅದೆಷ್ಟೋ ತಾರೆಗಳಿದ್ದಾರೆ, ಅದರಲ್ಲಿ ದುನಿಯಾ ಸಿನಿಮಾದ ರಶ್ಮಿ ಕೂಡ ಒಬ್ರು. ರಶ್ಮಿ ಎನ್ನುವ ಹೆಸರು ಕೇಳಿದ ಒಡನೆ ಅಷ್ಟು ಬೇಗ ಮುಖಭಾವ ನೆನಪಾಗುವುದಿಲ್ಲ, ಆದರೆ ದುನಿಯಾ ಸಿನಿಮಾ ನಟಿ ಎಂದ ಒಡನೆ ತಟ್ಟನೆ ಈಕೆ ನೆನಪಾಗ್ತಾರೆ. ಅದ್ಭುತ ಅಭಿನಯ, ಮುಗ್ಧ ಮಾತು ಹಾಗೂ ಸಿನಿಮಾದಲ್ಲಿ ಆಕೆ ನಿಭಾಯಿಸಿದಂತಹ ಮನಕಲುಕುವ ಪಾತ್ರ ಇಂದಿಗೂ ನಮ್ಮ ಕಣ್ಣ ಮುಂದೆ ಒಮ್ಮೆ ಬಂದು ಹೋಗುತ್ತದೆ.


COMMERCIAL BREAK
SCROLL TO CONTINUE READING

ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುವ ನಟಯರು ಹಿಟ್‌ ಆಗಲು ಒಂದೆರೆಡು ಸಿನಿಮಾಗಳು ಮಾಡಬೇಕಾಗುತ್ತದೆ, ಬೋಲ್ಡ್‌ ಆಗಿ ನಟಿಸಿ ಸೈ ಎನಿಸಿಕೊಳ್ಳಬೇಕಾಗುತ್ತದೆ. ಆದರೆ, ಮಾಡಿದ ಒಂದೆ ಸಿನಿಮಾದಲ್ಲಿ ನಟಿ ರಶ್ಮಿ ರಾತ್ರೋ ರಾತ್ರಿ ಹಿಟ್‌ ಆಗಿದ್ದರು, ಆಕೆಯ ಆಕ್ಟಿಂಗ್‌ ಕಂಡು ಪ್ರೇಕ್ಷಕರು ಫಿದಾ ಆಗಿದ್ದರು, ಸಿನಿಮಾ ಪ್ರಿಯರು ಈಕೆಯ ಆಕ್ಟಿಂಗ್‌ಗೆ ಮನಸೋತಿದ್ದರು, ಈಕೆಗೆ ಮುಗ್ದತೆಗೆ ಪಡ್ಡೆ ಹುಡುಗರು ಮನಸೋರಿದ್ದರು. ಮೊದಲನೆ ಸಿನಿಮಾದಲ್ಲಿಹಿಟ್‌ ಆಗಿದ್ದ ಈ ನಟಿ ನಂತರ ದಿಢೀರನೆ ಸಿನಿಮಾ ರಂಗವನ್ನು ತೊರೆದು ಬಿಟ್ಟಿದ್ದರು.


ಅಷ್ಟಕ್ಕೂ ನಟಿ ರಶ್ಮಿ ಸಿನಿಮಾ ಇಂಡಸ್ಟ್ರಿ ತೊರೆದಿದ್ದೇಕೆ..? ಆಕೆಯ ಬಾಳಲ್ಲಿ ನಡೆದಿದ್ದಾದರೂ ಏನು..? ನಟಿ ರಶ್ಮಿ ಸೂರಿ ನಿರ್ದೇಶನದಲ್ಲಿ ಬಂದಿದ್ದ ದುನಿಯಾ ಸಿನಿಮಾದಲ್ಲಿ ನಟಿಸಿದ್ದರು, ಈ ಸಿನಿಮಾ 2007 ರಲ್ಲಿ ತೆರೆಗೆ ಬಂದಿತ್ತು, ಸಿಕ್ಕಾಪಟ್ಟೆ ಸಕ್ಸಸ್‌ ಕೂಡ ಗಿಟ್ಟಿಸಿಕೊಂಡಿತ್ತು, ಈ ಸಿನಿಮಾದಲ್ಲಿ ರಶ್ಮಿಗೆ ಜೋಡಿಯಾಗಿ ನಟಿಸಿದ್ದ ವಿಜಯ್‌ ಕೂಡ ದೊಡ್ಡ ಫೇಮ್‌ ಗಿಟ್ಟಿಸಿಕೊಂಡಿದ್ದರು. ಇಬ್ಬರ ಜೀವನಕ್ಕೂ ಈ ಸಿನಿಮಾ ದೊಡ್ಡ ತಿರುವನ್ನೆ ತಂದುಕೊಟ್ಟಿತ್ತು ಎಂದೆ ಹೇಲಬಹುದು.


ಈ ಸಿನಿಮಾದ ನಂತರ ನಟಿ ರಶ್ಮಿ ಹಲವು ಸಿನಿಮಾಗಳಲ್ಲಿ ನಟಿಸಿದರು. ಅದರಲ್ಲಿ ಶ್ರೀ ತೀರ್ಥ, ಡಬ್ಬ ಚಿತ್ರ, ಅಧಿಕ ಪ್ರಸಂಗ, ಪ್ರೇಮಾಯ ನಮಃ ಮುಂತಾದ ಸಿನಿಮಾಗಳಿವೆ. ಆದರೆ ದುನಿಯಾ ಸಿನಿಮಾದ ಗೆಲುವಿನ ನಂತರ ಇವರು ನಟಿಸಿದ ಯಾವ ಸಿನಿಮಾಗಳು ಕೂಡ ಇವರ ಕೈ ಹಿಡಿಯಲಿಲ್ಲ, ಇವರು ಮಾಡಿದ ಎಲ್ಲಾ ಸಿನಿಮಾಗಳು ಸೋಲುಂಡಿದ್ದವು, ಇದೇ ಕಾರಣದಿಂದ ಅವರು ಸಿನಿಮಾ ಇಂಡಸ್ಟ್ರಿಯನ್ನು ತೊರೆದು ತಮ್ಮ ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಲು ಶುರು ಮಾಡುತ್ತಾರೆ.


ಸಿನಿಮಾ ಇಂಡಸ್ಟ್ರಿಯನ್ನು ತೊರೆದ ನಂತರ ನಟಿ ರಶ್ಮಿ ಬಿಗ್‌ ಬಾಸ್‌ ಸೀಸನ್‌ 7 ಕ್ಕೆ ಕಾಲಿಟ್ಟಿದ್ದರು, ಇಲ್ಲಿ ತಮ್ಮ ಅದ್ಭುತವಾದ ಆಟವಾಡಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಆದರೆ ಕೆಲವೇ ದಿನಗಳಲ್ಲಿ ಮನೆಯಿಂದ ಔಟ್‌ ಆಗಿದ್ದರು, ನಂತರ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು.." ಸಿನಿಮಾದಲ್ಲಿ ಅವಕಾಶಗಲು ಸಿಗದಿರುವ ಕಾರಣ ನಾನು ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದೆ, ಆದ್ರೆ ಸಿನಿಮಾದಲ್ಲಿ ನಟಿಸುವ ಆಸೆ ಇದೆ" ಎಂದು ಹೇಳಿದ್ದರು.


ನಟಿ ರಶ್ಮಿ ಅವರಿಗೆ ಇದೀಗ 33 ವರ್ಷ ವಯಸ್ಸು ಆದರೂ ಕೂಡ ಅವರು ಇನ್ನೂ ಮದುವೆಯಾಗಿಲ್ಲ, ಇದರ ಕುರಿತು ಕೂಡ ಅವರು ಮಾತನಾಡಿದ್ದು "ನಾನು ಮದುವೆಯಾಗುತ್ತೇನೆ, ಸನ್ಯಾಸಿಯಾಗಂತೂ ರುವುದಿಲ್ಲ, ಸಮಯ ಬಂದಾಗ ಖಂಡಿತವಾಗಿಯೂ ಮದುವೆಯಾಗುತ್ತೇನೆ" ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.