Puneeth rajkumar with Duniya vijay : ಇದೇ ತಿಂಗಳು 17ರಂದು ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಅಪ್ಪು ಅಭಿಮಾನಿಗಳು ರಕ್ತದಾನ, ಅನ್ನದಾನ, ನೇತ್ರದಾನ ಸೇರಿದಂತೆ ಉತ್ತಮ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ದೊಡ್ಮನೆ ಕಂದನ ಬರ್ತ್‌ಡೇಯನ್ನು ಅರ್ಥಪೂರ್ಣವಾಗಿ ಆಚರಿಸಿದರು.


COMMERCIAL BREAK
SCROLL TO CONTINUE READING

ಹೌದು... ಪುನೀತ್‌ ತಮ್ಮ ನಟನೆ, ವ್ಯಕ್ತಿತ್ವ ಮತ್ತು ಉದಾರತೆಯಿಂದ ಕರುನಾಡಿನ ಜನ ಸೇರಿದಂತೆ ಭಾರತೀಯ ಸಿನಿ ಪ್ರೇಕ್ಷಕರಲ್ಲಿ ಸ್ಥಾನ ಪಡೆದಿದ್ದಾರೆ. ಕನ್ನಡದ ಹೆಮ್ಮೆ ಪದ್ಮಭೂಷಣ ಡಾ. ರಾಜ್‌ಕುಮಾರ್‌ ಅವರ ಪುತ್ರನಾಗಿ ಜನಿಸಿದ ವೀರ ಕನ್ನಡಿಗ ʼಅಪ್ಪುʼ ಎಂಬ ಹೆಸರಿನಿಂದ ಬಿರುದಾಂಕಿತನಾಗಿ ಇಂದಿಗೂ ಸಹ ಕನ್ನಡಾಂಬೆಯ ಹೃದಯ ಸಿಂಹಾಸನದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ:ಕಮಲ್‌ ಪುತ್ರಿಯ ಜೊತೆ ಆ ರೀತಿ ಕಾಣಿಸಿಕೊಂಡ ಖ್ಯಾತ ಡೈರೆಕ್ಟರ್‌..! ಫೋಟೋ ವೈರಲ್‌


ಇನ್ನು ಅಪ್ಪು ಅಂದ್ರೆ ಸ್ಯಾಂಡಲ್‌ವುಡ್‌ಗೆ ತುಂಬಾ ಇಷ್ಟ. ಅಯ್ಯೋ ಯುವರತ್ನ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ.. ಅಲ್ವಾ.. ರಾಜಕುಮಾರನ ಅಕಾಲಿಕ ಮರಣ ಇಂದಿಗೂ ಅರಗಿಸಿಕೊಳ್ಳಲಾಗದ ತುತ್ತು. ಆದ್ರೆ ಅವರಿಲ್ಲ ಎನ್ನುವ ಕೊರಗು ಯಾವತ್ತೂ ಕಡಿಮೆಯಾಗಿಲ್ಲ.. ಅವರು ಇಲ್ಲೆ ಎಲ್ಲೋ ಹೋಗಿದ್ದಾರೆ ಅಷ್ಟೇ.. ಬರ್ತಾರೆ ಎನ್ನುವುದು ಅವರ ಮನದಾಳದಲ್ಲಿ ಗಟ್ಟಿಯಾಗಿ ಉಳಿದು ಬಿಟ್ಟಿದೆ.


ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಮನೆ ಮಗನ ಫೋಟೋ ಒಂದು ವೈರಲ್‌ ಆಗುತ್ತಿದೆ. ಈ ಫೋಟೋದಲ್ಲಿ ಕನ್ನಡದ ಸ್ಟಾರ್‌ ನಟರೊಬ್ಬರನ್ನು ಪರಮಾತ್ಮ ಅಪ್ಪಿಕೊಂಡಿರುವ ದೃಶ್ಯವಿದೆ. ಇದನ್ನು ನೋಡಿ ನೆಟ್ಟಿಗರು ಸ್ವಲ್ಪ ಕನ್ಫೂಸ್‌ ಆಗಿದ್ದು, ಯಾರು ಈ ನಟ ಅಂತ ತಲೆಕೆಡಿಸಿಕೊಂಡಿದ್ದಾರೆ..


ಇದನ್ನೂ ಓದಿ:ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಮೆಹ್ರೀನ್..! ಫೋಟೋಸ್‌ ವೈರಲ್


ನಿಮ್ಗೂ ಹಾಗೇ ಹಾಗಿದ್ರೆ, ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅವರು ಬೇರೆ ಯಾರೂ ಅಲ್ಲ, ಸ್ಯಾಂಡಲ್‌ವುಡ್‌ ಸಲಗ ದುನಿಯಾ ವಿಜಯ್‌. ವಿಜಿಯವರಿಗೆ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರಿಗೆ ಉತ್ತಮ ಬಾಂಧವ್ಯವಿತ್ತು. ಮೊನ್ನೆ ನಟಸಾರ್ವಭೌಮನ ಹುಟ್ಟು ಹಬ್ಬಕ್ಕೆ ವಿಜಯ್‌ ಈ ಫೋಟೋ ಶೇರ್‌ ಮಾಡಿಕೊಂಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.