ಸ್ಯಾಂಡವುಡ್ನಲ್ಲಿ ಇಂದು ಸ್ಟಾರ್ ಹೀರೋ ಆಗಿರುವ ದುನಿಯಾ ವಿಜಿ 200 ರೂ. ಕೂಲಿಗಾಗಿ ಮಾಡುತ್ತಿದ್ದ ಕೆಲಸ ಯಾವುದು ಗೊತ್ತಾ?
Duniya Vijay: ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದ ದುನಿಯಾ ವಿಜಯ್ ಅವರು ಕೂಡ ಸಿನಿಮಾಗೆ ಎಂಟ್ರಿ ಕೊಟ್ಟ ಕಥೆ ರೋಚಕ, ಹಸಿವು, ಜೀವನದಲ್ಲಿನ ಅನಿವಾರ್ಯತೆ ಅವರಲ್ಲಿ ಸಿನಿಮಾದಲ್ಲಿ ನಟಿಸುವ ಆಸೆಯನ್ನು ಹುಟ್ಟುಹಾಕಿತ್ತು, ಅಲ್ಲಿ ಶುರುವಾದ ಛಲ ಇಂದು ಅವರನ್ನು ದೊಡ್ಡ ಸ್ಟಾರ್ ಹೀರೋ ಪಟ್ಟಕ್ಕೇರಿಸಿ ನಿಲ್ಲಿಸಿದೆ.
Duniya Vijay: ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದ ದುನಿಯಾ ವಿಜಯ್ ಅವರು ಕೂಡ ಸಿನಿಮಾಗೆ ಎಂಟ್ರಿ ಕೊಟ್ಟ ಕಥೆ ರೋಚಕ, ಹಸಿವು, ಜೀವನದಲ್ಲಿನ ಅನಿವಾರ್ಯತೆ ಅವರಲ್ಲಿ ಸಿನಿಮಾದಲ್ಲಿ ನಟಿಸುವ ಆಸೆಯನ್ನು ಹುಟ್ಟುಹಾಕಿತ್ತು, ಅಲ್ಲಿ ಶುರುವಾದ ಛಲ ಇಂದು ಅವರನ್ನು ದೊಡ್ಡ ಸ್ಟಾರ್ ಹೀರೋ ಪಟ್ಟಕ್ಕೇರಿಸಿ ನಿಲ್ಲಿಸಿದೆ.
ಜೀವನದಲ್ಲಿ ಎಂದಾದರೊಮ್ಮೆಯಾದರು ಮನುಷ್ಯನಿಗೆ ತಾನು ಏನಾದರೂ ಸಾಧಿಸಬೇಕು ಎಂಬ ಛಲ ಬರುತ್ತದೆ, ಈ ಹಟ ಕೆಲವೊಮ್ಮೆ ಮನುಜನನ್ನು ಬಹಳಷ್ಟು ದೂರ ಕರೆದುಕೊಂಡು ಓಗುತ್ತೆ. ಹೀಗೆ ಬಣ್ಣದ ಪ್ರಪಂಚದ ಮೇಲೆ ಆಸೆಯಿಂದ ಸಾವಿರಾರು ಮಂದಿ ಸಾಕಷ್ಟು ಕನಸುಗಳನ್ನು ಒತ್ತು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಾರೆ, ಆದ್ರೆ ಇಲ್ಲಿ ಗೆಲ್ಲೋದು ಒಬ್ಬರೋ ಇಬ್ಬರೋ ಮಾತ್ರ, ಲಕ್ ಅನ್ನೋದು ನಿಮ್ಮ ಕೈ ಹಿಡಿದರೆ ಮಾತ್ರ ನಿಮ್ಗೆ ಚಾನ್ಸ್ ಸಿಗುತ್ತೆ, ಹೀಗೆ ತುತ್ತು ಅನ್ನಕ್ಕೂ ಒಂದು ಕಾಲದಲ್ಲಿ ಪರದಾಡುತ್ತಿದ್ದ ದುನಿಯಾ ವಿಜಯ್ ಅವರು ಕೂಡ ಸಿನಿಮಾಗೆ ಎಂಟ್ರಿ ಕೊಟ್ಟ ಕಥೆ ರೋಚಕ, ಹಸಿವು, ಜೀವನದಲ್ಲಿನ ಅನಿವಾರ್ಯತೆ ಅವರಲ್ಲಿ ಸಿನೆಮಾದಲ್ಲಿ ನಟಿಸುವ ಆಸೆಯನ್ನು ಹುಟ್ಟುಹಾಕಿತ್ತು, ಅಲ್ಲಿ ಶುರುವಾದ ಛಲ ಇಂದು ಅವರನ್ನು ದೊಡ್ಡ ಸ್ಟಾರ್ ಹೀರೋ ಪಟ್ಟಕ್ಕೇರಿಸಿ ನಿಲ್ಲಿಸಿದೆ.
ನಾವಿಂದು ನೋಡುತ್ತಿರುವ ದುನಿಯಾ ವಿಜಯ್ ಅವರು ಮೊದಲಿಗೆ ಹೀಗಿದ್ದವರಲ್ಲ, ಬದುಕಿನಲ್ಲಿ ನಾನಾ ಸೋಲು ಒತ್ತಡಗಳನ್ನು ಎದುರಿಸಿ ಬಂದವರು, ನಟ ವಿಜಿ ಒಬ್ಬ ಸ್ಟಂಟ್ ಮ್ಯಾನ್ ಆಗಿ ಸಿನಿಮಾ ಇಂಡಸ್ಟ್ರಿಗೆ ಹೆಜ್ಜೆ ಇಡುತ್ತಾರೆ, ತಮ್ಮ ಸುತ್ತ ಮುತ್ತಲು ಇದ್ದ ಜಿಮ್ ಗಳಲ್ಲಿ ಕಸರತ್ತು ಮಾಡುತ್ತಾ ಒಳ್ಳೆ ಬಾಡಿ ಬೆಳಸಿ ಕೊಂಡಿರುತ್ತಾರೆ. ಸ್ಟಂಟ್ ಮ್ಯಾನ್ ಆಗಿರ್ಬೇಕು ಅಂದ್ರೆ ಫಿಟ್ ಆಗಿರೋದು ತುಂಬಾ ಮುಖ್ಯ, ಈ ರೀತಿ 200 ರೂ. ಕೂಲಿಗೋಸ್ಕರ ವಿಜಿ ಸ್ಟಂಟ್ ಮ್ಯಾನ್ ಆಗಿ ಸಿನಿಮಾಗಳಲ್ಲಿ ಕೆಲಸ ಮಾಡಲು ಆರಂಭಿಸುತ್ತಾರೆ.
ಸ್ಟಂಟ್ ಮ್ಯಾನ್ ಕೆಲಲಸ ಅಂದ್ರೆ ಅದು ಸುಲಭದ ವಿಚಾರವಲ್ಲ, ಎಷ್ಟೊಂದು ಪೆಟ್ಟು, ಮೈ ತುಂಬಾ ಗಾಯ ಮಾಡಿಕೊಂಡು ದಿನವೂ 200 ರೂಪಾಯಿ. ಕೂಲಿಗೆ ಕೆಲಸಕ್ಕೆ ಹೋಗುವುದು ಅಷ್ಟು ಸುಲಬದ ಮಾತಾಗಿರಲಿಲ್ಲ, ಹೀಗೆ ಇಷ್ಟು ಪೆಟ್ಟು ತಿಂದಮೇಲು, ಅಷ್ಟೊಂದು ಕಷ್ಟ ಪತ್ತಮೇಲೂ ಕೂಡ ತೆರೆ ಮರೆಯಲ್ಲಿ ಏಕೆ ಕೆಲ್ಸಾ ಮಾಡ್ಬೇಕು ಅನ್ನುವ ಯೋಚನೆ ವಿಜಿ ಅವರಲ್ಲಿ ಹುಟ್ಟಿಕೊಳ್ಳುತ್ತೆ, ಆ ಒಂದು ಯೋಚನೆಯೇ ನೋಡಿ ದುನಿಯಾ ವಿಜಿ ಅವರ ಲೈಫ್ ಬದಲಿಸೋದು.
ಹೌದು, 2002 ವರೆಗೂ ಕ್ಯಾಮೆರಾದ ಹಿಂದೆ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದ ವಿಜಿ ಅವರಿಗೆ, ರಂಗ ಎಸ್ ಎಸ್ ಎಲ್ ಸಿ ಸಿನಿಮಾದಲ್ಲಿ ಒಂದು ಪೂರ್ವ ಪಾತ್ರದಲ್ಲಿ ನಟಿಸುವ ಅವಕಾಶ ಸಿಗುತ್ತೆ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಅವರು, ಸಖತ್ ಆಗಿ ನಟಿಸಿ ಸೈ ಎನಿಸಿಕೊಳ್ಳುತ್ತಾರೆ.
2007 ರಲ್ಲಿ ತೆರೆಕಂಡ ಈ ಸಿನಿಮಾವನ್ನು, ಸೂರಿ ಅವರು ನಿರ್ಮಿಸುತ್ತಾರೆ, ಯೋಗರಾಜ್ ಭಟ್ಟರು ಈ ಸಿನಿಮಾಗೆ ವಿಜಿ ಅವರನ್ನು ಆಯ್ಕೆ ಮಾಡಿಕೊಳ್ಳುವಂತೆ, ಸೂರಿ ಅವರಿಗೆ ಸಲಹೆ ಕೊಟ್ಟಿರುತ್ತಾರೆ, ಹೀಗೆ ಈ ಸಿನಿಮಾ ತೆರೆಕಂಡು ಸಿಕ್ಕಾಪಟ್ಟೆ ಹಿಟ್ ಆಗುತ್ತೆ, ಆಗಿನ ಕಾಲಕ್ಕೆ ಹಲವು ದಾಖಲೆಗಳನ್ನು ಮಾಡುತ್ತೆ, ಈ ಪಾತ್ರಕ್ಕಾಗಿ ದುನಿಯಾ ವಿಜಿ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದುಕೊಳ್ಳುತ್ತಾರೆ, ಹೀಗೆ ಮೊದಲನೇ ಸಿನಿಮಾದಲ್ಲೇ ಸಕ್ಸಸ್ ಕಾಣುವ ವಿಜಿ ಮತ್ತೆಂದೂ ಹಿಂದೆ ತಿರುಗು ನೋಡಲೇ ಇಲ್ಲ.
ಹೀಗೆ ಒಂದು ಕಾಲದಲ್ಲಿ 200 ರೂಪಾಯಿ ಕೂಲಿಗೆ ಸ್ಟಂಟ್ ಮಾಸ್ಟರ್ ಆಗಿ ಸಿನೆಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ದುನಿಯಾ ವಿಜಿ, ಇಂದು ಸ್ಯಾಂಡಲ್ವುಡ್‌ನ ಸೂಪರ್ ಸ್ಟಾರ್ಗಳಲ್ಲಿ ಒಬ್ಬರು, ಇತ್ತೀಚೆಗೆ ಇವರೆ ನಿರ್ಮಿಸಿ ನಟಿಸಿದ್ದ ಭೀಮ ಕೂಡ ಇವರ ಸಿನಿಮಾ ಜರ್ನಿಗೆ ಒಂದೊಳ್ಳೆ ಸೇರ್ಪಡಿಕೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.