ಬೆಂಗಳೂರು: ನಟ ದುನಿಯಾ ವಿಜಯ್ ಹಲ್ಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ನಂತರ ಎರಡನೇ ಪತ್ನಿ ಜೊತೆ ಹೋಗಿರುವುದಕ್ಕೆ ಮೊದಲನೇ ಪತ್ನಿ ನಾಗರತ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ, ವಿಜಯ್ ಎರಡನೇ ಪತ್ನಿ ಹಲವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ನನ್ನ ಮಕ್ಕಳಿಗಾಗಿ ಎಲ್ಲಾ ಕಿರುಕುಳ ತೊಂದರೆಗಳನ್ನೂ ಸಹಿಸಿಕೊಂಡಿದ್ದೆ. ಮೌನವಾಗಿದ್ದೆ. ನಾನು ವಿಜಿಗೆ ವಿಚ್ಛೇದನ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ವಿಚ್ಛೇದನ ನೀಡಿರುವ ಕುರಿತು ಅವಳು ದಾಖಲೆ ಬಿಡುಗಡೆ ಮಾಡಲಿ ಎಂದು ನಾಗರತ್ನ ಸವಾಲು ಹಾಕಿದರು. 


ಮುಂದುವರೆದು, ಕೀರ್ತಿ ಗೌಡ ನನ್ನ ಗಂಡ ವಿಜಯ್ ತಲೆಕೆಡಿಸುತ್ತಿದ್ದಾಳೆ. ವಿಜಯ್ ಮೊದಲು 'ರಕ್ತ ಕಣ್ಣೀರು' ಸಿನಿಮಾ ನೋಡಲಿ. ಆಗ ಅವರಿಗೆ ಎಲ್ಲಾ ಅರ್ಥವಾಗುತ್ತದೆ ಎಂದು ಹೇಳುವ ಮೂಲಕ ಮದುವೆಯಾದ ಪತ್ನಿಯನ್ನು ಬಿಟ್ಟು, ಬೇರೆ ಹೆಂಗಸಿನ ಬಳಿ ಹೋಗುವ ಕಥಾ ನಾಯಕನ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ತಿಳಿಯಲಿ ಎಂದು ಎಚ್ಚರಿಸಿದರು. 


ಮಾರುತಿಗೌಡ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ್ವಾಗಿದ್ದ ನಟ ದುನಿಯಾ ವಿಜಯ್ ಸೋಮವಾರವಷ್ಟೇ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಬಳಿಕ ಎರಡನೇ ಪತ್ನಿ ಕೀರ್ತಿ ಗೌಡ ಜೊತೆ ಮನೆಗೆ ತೆರಳಿದ್ದರು. ಮತ್ತೊಂದೆಡೆ ಕೀರ್ತಿ ಗೌಡ ಕೂಡ ಪ್ರಪಂಚ ತಲೆ ಕೆಳಗಾದರೂ ಕೂಡ ವಿಜಯ್ ಗಂಡನನ್ನು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಇಂದು ಮೊದಲ ಪತ್ನಿ ನಾಗರತ್ನ ಪತ್ರಿಕಾಗೋಷ್ಠಿ ನಡೆಸಿದರು.