Duniya Vijay: ಜೀವನದಲ್ಲಿ ಅನೇಕರು ಸಾಧಿಸಬೇಕೆಂಬ ಛಲದಿಂದ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಆದರೆ ಎಲ್ಲಾ ಜನರೂ ಯಶಸ್ವಿಯಾಗುವುದಿಲ್ಲ, ಕೆಲವರು ಪ್ರಯತ್ನಿಸುತ್ತಾರೆ, ಇನ್ನು ಕೆಲವರು ಎಲ್ಲಿ ಸೋಲುತ್ತೇವೋ ಅಂತಾ ಭಯದಿಂದ ಪ್ರಯತ್ನವನ್ನೇ ಮಾಡದೆ ಬಿಡುತ್ತಾರೆ. ಆದರೂ, ಹಲವು ಸೋಲುಗಳನ್ನು ಮೆಟ್ಟಿನಿಂತು, ಇಂದು ಸ್ಟಾರ್ ಹೀರೋ ಆಗಿರುವ ವ್ಯಕ್ತಿ ದುನಿಯಾ ವಿಜಿ.


COMMERCIAL BREAK
SCROLL TO CONTINUE READING

ಹೌದು, ನೀವು ನೋಡುತ್ತಿರುವ ದುನಿಯಾ ವಿಜಯ್ ಮೊದಲಿಗೆ ಹಾಗಿರಲಿಲ್ಲ. ದುನಿಯಾ ವಿಜಯ್ ಇವತ್ತು ಈ ಸ್ಥಾನಕ್ಕೆ ಬರಲು ಎದುರಿಸಿದ ಹಾದಿ ಸುಲಭವಾಗಿರಲಿಲ್ಲ. ಸಿನಿಮಾ ರಂಗದಲ್ಲಿ ಅಥವಾ ಯಾವುದೇ ಕ್ಷೇತ್ರದಲ್ಲಿ ಸಾಧಿಸಲು ಸಾಮಾನ್ಯ ವ್ಯಕ್ತಿಗೆ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ದುನಿಯಾ ವಿಜಯ್‌ಗೂ ಹೀರೋ ಆಗುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.


ಇದನ್ನೂ ಓದಿ: ಹಳೆ ಮುನಿಸು ಮರೆತು ದರ್ಶನ್‌ಗೆ ಧೈರ್ಯ ಹೇಳ್ತಾರಾ ‘ಮಾಣಿಕ್ಯ’..? ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ ಭಯಂಕರ ಚರ್ಚೆ..!


ವಿಜಿ ಮೊದಲಿಗೆ ಸ್ಟಂಟ್ ಆರ್ಟಿಸ್ಟ್ ಆಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದರು. ಬೆಂಗಳೂರಿನ ಜಿಮ್‌ಗಳಲ್ಲಿ ದೈಹಿಕ ಕಸರತ್ತುಗಳನ್ನು ಅಭ್ಯಾಸ ಮಾಡತೊಡಗಿದರು. ಸಹ ನಟನಾಗಿ ಸ್ಟಂಟ್ ಆರ್ಟಿಸ್ಟ್ ಆಗಿ ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿನಿತ್ಯ ಕೈಕಾಲು ಮುರಿದುಕೊಂಡು ಕೇವಲ 200 ರೂಪಾಯಿಯನ್ನು ಸಂಪಾದಿಸುತ್ತಿದ್ದರು. 


ಸ್ಟಂಟ್ ಆರ್ಟಿಸ್ಟ್ ಆಗಿದ್ದ ದುನಿಯಾ ವಿಜಿಗೆ ಕಲಾವಿದನಾಗಬೇಕೆಂಬ ಆಸೆ ಹುಟ್ಟಿತ್ತು. ತಾನು ಸಿನಿಮಾದಲ್ಲಿ ಎಲ್ಲೋ ಮೂಲೆಯಲ್ಲಿ ಕಾಣುವಂತಹ ಸ್ಟಂಟ್ ಆರ್ಟಿಸ್ಟ್ ಆಗಬಾರದು, ಒಬ್ಬ ಕಲಾವಿದನಾಗಬೇಕೆಂಬ ಆಸೆ ಹೊಳೆದಿತ್ತು. ಸಿಕ್ಕ ಸಿಕ್ಕ ಪಾತ್ರಗಳಲ್ಲಿ ದುನಿಯಾ ವಿಜಯ್ ಅಭಿನಯ ಮಾಡಲು ಆರಂಭಿಸಿದರು. ಸಣ್ಣ ಸಣ್ಣ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ವಿಜಯ್‌ಗೆ ಒಂದು ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತು. 


ಇದನ್ನೂ ಓದಿ: ದಾಸನಿಗಾಗಿ ಶಕ್ತಿ ದೇವತೆಯ ಮೊರೆ ಹೋದ ವಿಜಯಲಕ್ಷ್ಮಿ..!


2002ರಲ್ಲಿ ಅನೇಕ ಸಿನಿಮಾಗಳಲ್ಲಿ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ದುನಿಯಾ ವಿಜಯ್, ರಂಗ ಎಸ್ ಎಸ್ ಎಲ್ ಸಿ ಸಿನಿಮಾದ ಮೂಲಕ ಮೊದಲ ಪೂರ್ಣ ಪಾತ್ರದಲ್ಲಿ ನಟಿಸಿದರು. ಸೂರಿಯವರ ದುನಿಯಾ ಸಿನಿಮಾದಲ್ಲಿ ನಾಯಕನಾಗಿ ಯೋಗರಾಜ್ ಭಟ್ಟ್ ಸಲಹೆಯಂತೆ ಆಯ್ಕೆ ಮಾಡಿದರು. 2007ರಲ್ಲಿ ಈ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿ ಕನ್ನಡ ಸಿನಿಮಾರಂಗದಲ್ಲಿ ಚರಿತ್ರೆ ಸೃಷ್ಟಿಸಿತು. ಈ ಸಿನಿಮಾದಲ್ಲಿ ಅಭಿನಯಕ್ಕಾಗಿ ದುನಿಯಾ ವಿಜಯ್ ಹಲವು ಪ್ರಶಸ್ತಿಗಳನ್ನು ಗೆದ್ದರು. 


ಈ ಮೂಲಕ ಎಲ್ಲೋ ಮೂಲೆಗೂಂಪಾಗಿದ್ದ ದುನಿಯಾ ವಿಜಯ್ ಮನೆ ಮಾತಾಗಿದರು. ಅಂದಿನಿಂದ ಇಂದಿನವರೆಗೆ ಕಂಠೀರವ, ಭೀಮಾ ತೀರದಲ್ಲಿ, ಕರಿ ಚಿರತೆ, ಜಂಗ್ಲಿ, ಜರಾಸಂಧ, ಸಲಗ ಮುಂತಾದ ಚಿತ್ರಗಳಿಂದ ಅವರ ಕರಿಯರ್ ಮುಂದುವರೆದಿದೆ, ಇವರನ್ನು ಕನ್ನಡ ಚಿತ್ರರಂಗದ ಸ್ಟಾರ್ ಹೀರೋಗಳಲ್ಲಿ ಒಬ್ಬರನ್ನಾಗಿ ಮಾಡಿದೆ.


ಹೀಗೆ ಹತ್ತು ವರ್ಷಗಳ ಶ್ರಮಕ್ಕೆ ದುನಿಯಾ ವಿಜಯ್ ಸ್ಟಾರ್ ಹೀರೋ ಆಗಿ ಕನ್ನಡ ಚಿತ್ರರಂಗದಲ್ಲಿ ಸ್ಥಾನ ಪಡೆದಿದ್ದಾರೆ. ಅಂದು ಸ್ಟಂಟ್ ಆರ್ಟಿಸ್ಟ್ ಕೆಲಸವನ್ನೇ ನಂಬಿಕೊಂಡು, ಕಲಾವಿದನಾಗಬೇಕೆಂಬ ಕನಸು ಕಂಡಿದ್ದರೆ ಇವತ್ತು ಅವರು ಈ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಸೋಲು ಗೆಲುವು ಪ್ರಯತ್ನ ಮುಖ್ಯ ಎನ್ನುವುದು ಸತ್ಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ