Dunki: ಶಾರುಖ್‌ ಖಾನ್‌ ಬರೀ ಬಾಲಿವುಡ್‌ ಮಾತ್ರವಲ್ಲ, ಸೌತ್‌ ಸಿನಿರಂಗದಲ್ಲಿಯೂ ಅವರಿಗೆ ಉತ್ತಮ ಫಾಲೋಯಿಂಗ್‌ ಮತ್ತು ಪರಿಚಯವಿದೆ... ಆದರೆ ಕಳೆದ ಕೆಲವು ವರ್ಷಗಳಿಂದ ಶಾರುಖ್ ಖಾನ್ ಅವರ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿರಲಿಲ್ಲ.. ಒಂದು ಕಾಲದಲ್ಲಿ ಕಿಂಗ್ ಖಾನ್ ಆಗಿ ಬಾಲಿವುಡ್ ಬಾಕ್ಸ್ ಆಫೀಸ್ ಅನ್ನು ತನ್ನ ಕಣ್ಣುಗಳಿಂದಲೇ ಆಳುತ್ತಿದ್ದ ಶಾರುಖ್ ಗೆ ಸತತ ಸೋಲುಗಳಿದ್ದವು. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ಬಿಡುಗಡೆಯಾದ ಜವಾನ್ ಮತ್ತು ಅದಕ್ಕೂ ಮೊದಲು ಬಂದ ಪಠಾಣ್ ಸಿನಿಮಾಗಳ ಮೂಲಕ ಶಾರುಖ್‌ ರಿಎಂಟ್ರಿ ಕೊಟ್ಟಿದ್ದಾರೆ.. ಇದೀಗ ಅವರ ಮತ್ತೊಂದು ಚಿತ್ರ ಡಂಕಿ ಸದ್ಯ ಟ್ರೈಲರ್‌ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ..


ಇದನ್ನೂ ಓದಿ-ನಟಿ ರಮ್ಯಾ ಅಪ್ಪ ಅಮ್ಮ ಯಾರು ಗೊತ್ತಾ.. ಇವರ ತಂದೆ ತುಂಬಾನೇ ಫೇಮಸ್!


 ಟ್ರೇಲರ್‌ನಲ್ಲಿ ಒಳ್ಳೆಯ ಭಾವನೆಗಳನ್ನು ತೋರಿಸಲಾಗಿದ್ದು.. ಐವರು ಸ್ನೇಹಿತರು ಹೇಗಾದರೂ ಲಂಡನ್‌ಗೆ ಹೋಗಬೇಕೆಂದು ನಿರ್ಧರಿಸುತ್ತಾರೆ.. ಆದರೆ ಅವರಿಗೆ ಇಂಗ್ಲೀಷ್‌ ಬರುವುದಿಲ್ಲ.. ಹೀಗಾಗಿ ಅವರ ವೀಸಾ ಕ್ಯಾನ್ಸಲ್‌ ಮಾಡಲಾಗುತ್ತದೆ.. ಆದರೆ ಅವರು ನಿಯಮಗಳನ್ನು ಮೀರಿ ಲಂಡನ್‌ಗೆ ಹೋಗುತ್ತಾರಾ? ಇಲ್ಲವಾ? ಒಂದು ವೇಳೆ ಹೋದರೂ ಅಕ್ರಮವಾಗಿ ದೇಶ ದಾಟಿ ಲಂಡನ್ ಗೆ ಹೋಗಿದ್ದು ಹೇಗೆ? ವಿವಿಧ ದೇಶಗಳಿಂದ ಅವರು ಎದುರಿಸಿದ ಸಮಸ್ಯೆಗಳೇನು ಎಂಬುದೇ ಕಥೆಯಾಗಲಿದೆ.. 


ಇದನ್ನೂ ಓದಿ-ಐಶ್ವರ್ಯಾ ರೈ ಜೊತೆ ಅಭಿಷೇಕ್ ಬಚ್ಚನ್ ವಿಚ್ಛೇದನ? ‌


ಎಂದಿನಂತೆ ರಾಜ್ ಕುಮಾರ್ ಹಿರಾನಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಬೊಮನ್ ಇರಾನಿ, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್ ಕುಮಾರ್ ಹಿರಾನಿ ಬ್ಯಾನರ್‌ಗಳ ಅಡಿಯಲ್ಲಿ ರಾಜ್ ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶಾರುಖ್ ಖಾನ್ ಮತ್ತು ರಾಜ್ ಕುಮಾರ್ ಹಿರಾನಿ ಮೊದಲ ಬಾರಿಗೆ ಒಂದಾಗುತ್ತಿರುವ ಕಾರಣ, ನಿರೀಕ್ಷೆಗಳು ಹೆಚ್ಚಿವೆ.


ಸದ್ಯ 'ಡಂಕಿ' ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಪ್ರಭಾಸ್ ಸಲಾರ್ ಸಿನಿಮಾಕ್ಕಿಂತ ಒಂದು ದಿನ ಮುಂಚಿತವಾಗಿ ಶಾರುಖ್ ಅಭಿನಯದ ‘ಡಂಕಿ’ ಸಿನಿಮಾ ಬಿಡುಗಡೆಯಾಗುತ್ತಿರುವುದು ಗಮನಾರ್ಹ. ಶಾರುಖ್ ಈ ಚಿತ್ರದ ಮೂಲಕ ಹ್ಯಾಟ್ರಿಕ್ ಸಾಧಿಸುವ ತವಕದಲ್ಲಿದ್ದು..  'ಡಂಕಿ' ಪ್ರೇಕ್ಷಕರನ್ನು ಹೇಗೆ ಮೆಚ್ಚಿಸುತ್ತದೆ ಎಂಬುದನ್ನು ನೋಡೋಣ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.