Dunki Trailer Out: ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ವರ್ಷದ ಮೊದಲ ಹಿಟ್ ನೀಡಿ, ಇದೀಗ ವರ್ಷದ ಕೊನೆಯ ಹಿಟ್ ನೀಡಲು ಕಾತುರದಿಂದ ಕಾಯುತ್ತಿದ್ದು, ಬಹುನಿರೀಕ್ಷಿತ 'ಡಂಕಿ' ಸಿನಿಮಾದ ಟ್ರೇಲರ್ ಮಂಗಳವಾರ (ಡಿಸೆಂಬರ್ 5) ಎಂದು ಡಂಕಿ ಡ್ರಾಪ್ 4 ಎಂದು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಈ ವರ್ಷದಲ್ಲಿ ಎರಡು ಸೂಪರ್ ಡೂಪರ್ ಹಿಟ್ ಮಾಸ್ ಚಿತ್ರಗಳಾದ ಪಠಾಣ್ ಮತ್ತು ಜವಾನ್ ಸಿನಿಮಾ ನೀಡಿರುವ ನಟ , ಸದ್ಯ ಕ್ಲಾಸ್ ಲುಕ್‌ನಲ್ಲಿ ಜನರ ಮುಂದೆ ಬಂದಿದ್ದಾರೆ. ರಾಜ್ ಕುಮಾರ್ ಹಿರಾನಿ ಜೊತೆಗೆ ನಟ ಶಾರುಖ್ ಖಾನ್ ಮೊದಲ ಬಾರಿಗೆ ಕೈ ಜೋಡಿಸಿದವರು, ಸ್ನೇಹ, ಪ್ರೇಮಗಳ ಭಾವನಾತ್ಮಕ ಪಯಣದಲ್ಲಿ ನಮ್ಮನ್ನು ಜೊತೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ.  


COMMERCIAL BREAK
SCROLL TO CONTINUE READING

ಪಠಾಣ್ ಮತ್ತು ಜವಾನ್ ಯಶಸ್ಸಿನ ನಂತರ, ಶಾರುಖ್ ಫ್ಯಾನ್ಸ್‌ ಡಂಕಿ ಸಿನಿಮಾಗಾಗಿ ಕಾಯುತ್ತಿದ್ದು, ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಟೀಸರ್ ಮತ್ತು ಎರಡು ಹಾಡುಗಳನ್ನು ಬಿಡುಗಡೆ ಮಾಡಿದ ನಂತರ, ಇಂದು ಡಂಕಿ ಟ್ರೇಲರ್‌ನ್ನು ಡ್ರಾಪ್ 4 ಎಂದು ಬಿಡುಗಡೆ ಮಾಡಲಾಗಿದೆ. 'ಡಂಕಿ' ಸಿನಿಮಾದಲ್ಲಿ ಶಾರುಖ್ ಖಾನ್ 'ಹಾರ್ಡಿ' ಎಂದು ಪಾತ್ರದಲ್ಲಿ ನಟಿಸಿದ್ದು, 1995 ರಲ್ಲಿ ಲಾಲ್ಟು ಎಂಬ ಹಳ್ಳಿಯಲ್ಲಿ ರೈಲಿನಿಂದ ಇಳಿಯುವ ದೃಶ್ಯದಿಂದ ಟ್ರೇಲರ್ ಆರಂಭವಾಗುತ್ತದೆ.


ಇದನ್ನೂ ಓದಿ:  ಸಿನಿರಂಗ ಪ್ರವೇಶಿಸಿದ 5 ವರ್ಷಗಳಲ್ಲಿ ಅಗಾಧವಾಗಿ ಬೆಳೆದ ಸೌತ್‌ ಸುಂದರಿ ಈಕೆ... ಆಸ್ತಿ ವಿವರ ಕೇಳಿದ್ರೆ ಶಾಕ್‌ ಆಗ್ತೀರಾ!


ಇಂಗ್ಲಿಷ್ ಕಲಿಯಲು ಕಷ್ಟಪಡುವ ಸುಖಿ (ವಿಕ್ಕಿ ಕೌಶಲ್) ಮತ್ತು ಹಾರ್ಡಿಗಾಘಿ ಯಾರೊಂದಿಗಾದರೂ ಜಗಳಕ್ಕೆ ನಿಲ್ಲುವ ಮನ್ನು (ತಾಪ್ಸೀ ಪನ್ನು), ಪೈಜಾಮಾ ಮಾರಾಟ ಮಾಡುವ ಬುಜ್ಜು ಸೇರಿದಂತೆ ತನ್ನ ಸ್ನೇಹಿತರನ್ನು ಹಾರ್ಡಿ ಪರಿಚಯಿಸುತ್ತಾನೆ. ವಿದೇಶಕ್ಕೆ ಹೋಗುವ ಆಸೆ ಇರುವವರಿಗೆ ಇಂಗ್ಲೀಷ್ ಕಲಿಸುವ ಟೀಚರ್ ಆಗಿ ಬೊಮನ್ ಇರಾನಿ ನಟಿಸಿದ್ದು, ವಿಕ್ಕಿ ಮತ್ತು ಶಾರುಖ್ ಪಾತ್ರಗಳು ಭಾಷೆ ಬರದಿದ್ದರೂ ಕೂಡ ಆಂಗ್ಲರು ಪಂಜಾಬಿನಲ್ಲಿರುವುದು, ದೇಶವನ್ನು ಅಷ್ಟು ವರ್ಷಗವರೆಗೆ ಆಳಿದ್ದನ್ನು ನೆನಪಿಸುತ್ತಾರೆ. ವಿದೇಶಕ್ಕೆ ಹೋಗಲು ಇಂಗ್ಲೀಷ್ ಅಷ್ಟು ಅವಶ್ಯಕವೇ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. 


ವಿದೇಶಕ್ಕೆ ಹೋಗಲು ಹಾರ್ಡಿ ಮತ್ತು ಅವನ ಸ್ನೇಹಿತರು ಗಡಿ ದಾಟುವುದು, ಅನೇಕ ಅಪಾಯಗಳನ್ನು ಎದುರಿಸುವುದು, ಸಾವಿನ ಅಂಚಿಗೆ ಹೋಗಿ ಬರುವ ಸನ್ನಿವೇಶಗಳು ಇದ್ದು, ಇದೆಲ್ಲಾ ಆಗಿ 25 ವರ್ಷಗಳ ನಂತರ ಶಾರುಖ್ ಶಾನ್ ತಾನು ಆರಂಭಿಸಿದ ಯುದ್ಧವನ್ನು ಕೊನೆ ಮಾಡುವ ಮುದುಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಶಾರುಖ್ ಖಾನ್  ಈ ವಯಸ್ಸಾದ ಪಾತ್ರ ಅಟ್ಲಿ ನಿರ್ದೇಶನದ ಜವಾನ್ ಸಿನಿಮಾದಲ್ಲಿನ ವಿಕ್ರಮ್ ರಾಥೋಡ್ ರೀತಿಯಲ್ಲಿ ಕಾಣಿಸುತ್ತದೆ. ಆದರೆ, ಅದು ಖಡಕ್ ಪಾತ್ರ ಇದು ಕೊಂಚ ಸಾಫ್ಟ್ ಪಾತ್ರದಂತಿದೆ. ನೈಜ ಘಟನೆಗಳ ಅನುಭವಗಳಿಂದ ಚಿತ್ರಿಸಲಾಗಿರುವ ಡಂಕಿ ಸಿನಿಮಾ ಪ್ರೀತಿ ಮತ್ತು ಸ್ನೇಹದ ಒಂದು ಸಾಹಸಗಾಥೆಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.