Lata Mangeshkar ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸಂಗತಿ ನಿಮಗೆ ಗೊತ್ತೇ?
Queen Of Melody: ಹಲವು ವರ್ಷಗಳ ಹಿಂದೆ ಸ್ವರ ಕೋಗಿಲೆ ಲತಾ ಮಂಗೇಶ್ಕರ್ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಬಹುತೇಕರು ಕೇಳರಿಯದ ಕಥೆ ಇಲ್ಲಿದೆ.
ನವದೆಹಲಿ: Nightingle Of Music - ತಮ್ಮ ಸುಮಧುರ ಕಂಠದಿಂದ ಕೋಟ್ಯಂತರ ಜನರನ್ನು ಮಂತ್ರಮುಘ್ದರನ್ನಾಗಿಸಿದ್ದ ಲತಾ ಮಂಗೇಶ್ಕರ್ ಅವರು ಜಗತ್ತಿಗೆ ಶಾಶ್ವತವಾಗಿ ವಿದಾಯ ಹೇಳಿದ್ದಾರೆ (Lata Mangeshkar Died Today). ಅವರು ಬಾಲಿವುಡ್ ಚಿತ್ರಗಳಲ್ಲಿ ಹಾಡಿರುವ ಸಾವಿರಾರು ಹಾಡುಗಳು ಇಂದಿಗೂ ಕೂಡ ಜನರ ಬಾಯಲ್ಲಿವೆ. ಆದರೆ ಇಂದು ನಾವು ನಿಮಗೆ ಲತಾ ಮಂಗೇಶ್ಕರ್ ಅವರಿಗೆ ಸಂಬಂಧಿಸಿದ ಒಂದು ಕಥೆಯನ್ನು ಹೇಳುತ್ತಿದ್ದು ಈ ಕಥೆ ಬಹುತೇಕರಿಗೆ ಗೊತ್ತಿಲ್ಲ. ಈ ಕಥೆಯು ಲತಾ ದೀದಿಯನ್ನು ಹತ್ಯೆಗೈಯಲು ವಿಷ ನೀಡಿ ಪಿತೂರಿ ನಡೆಸಲಾಗಿತ್ತು.
33ನೇ ವಯಸ್ಸಿನಲ್ಲಿ ಹತ್ಯೆಯ ಸಂಚು ನಡೆದಿತ್ತು
ಲತಾ ದೀದಿ (Lata Mangeshkar) ಅವರ ಈ ಹತ್ಯೆಯ ಸಂಚು ಲತಾ ಮಂಗೇಶ್ಕರ್ ಅವರ ಆತ್ಮೀಯ ಸ್ನೇಹಿತೆ ಪದ್ಮಾ ಸಚ್‌ದೇವ್ (Padma Sachdev) ಅವರ 'ಐಸಾ ಕಹಾನ್ ಸೆ ಲಾವು' (Aisa Kahan Se Lavun) ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಪುಸ್ತಕದಲ್ಲಿ ಗಾಯಕಿಯನ್ನು ಆಕೆಯ 33 ನೇ ವಯಸ್ಸಿನಲ್ಲಿ ಹತ್ಯೆಗೈಯಲು ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗಿದೆ.
ಆಹಾರ ವಿಷ ಬೆರೆಸಿ ನೀಡಲಾಗಿತ್ತು
ಈ ಘಟನೆ 1963ನೇ ಇಸವಿಯಲ್ಲಿ ನಡೆದಿದೆ. ಘಟನೆಯ ಲತಾ ಮಂಗೇಶ್ಕರ್ ಅವರು ತೀವ್ರ ಅಸ್ವಸ್ಥರಾಗಿದ್ದರು. ವೈದ್ಯರನ್ನು ಕರೆಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಸ್ಲೋ ಪಾಯ್ಸನ್ (Slow Poison) ನೀಡಿರುವುದು ಪತ್ತೆಯಾಗಿತ್ತು. ಈ ಘಟನೆಯು ಲತಾ ಮಂಗೇಶ್ಕರ್ ಅವರನ್ನು ದೈಹಿಕವಾಗಿ ತುಂಬಾ ದುರ್ಬಲಗೊಳಿಸಿತ್ತು ಮತ್ತು ಅವರು ಸುಮಾರು ಮೂರು ತಿಂಗಳ ಕಾಲ ಹಾಸಿಗೆಯಲ್ಲಿಯೇ ಮಲಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ-Lata Mangeshkar: ಗಾಯನ ನಿಲ್ಲಿಸಿದ ಭಾರತ ರತ್ನ ಲತಾ ಮಂಗೇಶ್ಕರ್
ನಂತರ ಆಹಾರ ಪರಿಶೀಲಿಸಿದ ಬಳಿಕ ಸೇವಿಸಲು ಅನುಮತಿ ನೀಡಲಾಗುತ್ತಿತ್ತು
ಈ ಘಟನೆಯ ಬಳಿಕ ಲತಾ ಮಂಗೇಶ್ಕರ್ ಅವರ ಬಾಣಸಿಗ ತನ್ನ ವೇತನವನ್ನು ಪಡೆಯದೇ ಮನೆಯಿಂದ ಕಣ್ಮರೆಯಾಗಿದ್ದ ಎನ್ನಲಾಗಿದೆ. ಘಟನೆಯ ಬಳಿಕ ದಿವಂಗತ ಬಾಲಿವುಡ್ ಗೀತ ರಚನೆಕಾರ ಮಜರೂಹ್ ಸುಲ್ತಾನಪುರಿ ನಿಯಮಿತವಾಗಿ ಲತಾ ದಿದಿ ಅವರ ಮನೆಗೆ ಭೇಟಿ ನೀಡಿ, ಮೊದಲು ಲತಾ ಮಂಗೇಶ್ಕರ್ ಅವರಿಗೆ ನೀಡಲಾಗುವ ಆಹಾರವನ್ನು ತಾವು ಸೇವಿಸಿ ಬಳಿಕವೇ ಲತಾ ಅವರಿಗೆ ಆಹಾರ ಸೇವಿಸಲು ಅನುಮತಿ ನೀಡುತ್ತಿದ್ದರು ಎನ್ನಲಾಗುತ್ತದೆ.
ಇದನ್ನೂ ಓದಿ-ಲತಾ ಮಂಗೇಶ್ಕರ್ ನಿಧನಕ್ಕೆ ಎರಡು ದಿನಗಳ ರಾಷ್ಟ್ರೀಯ ಶೋಕ
36ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡು ಹಾಡಿದ್ದಾರೆ
ಲತಾ ಮಂಗೇಶ್ಕರ್ ಅವರು ಸಾವಿರಾರು ಹಿಂದಿ ಹಾಡುಗಳಿಗೆ ಮತ್ತು 36 ಪ್ರಾದೇಶಿಕ ಚಲನಚಿತ್ರಗಳಲ್ಲಿನ ಹಾಡುಗಳಿಗೆ ತಮ್ಮ ಧ್ವನಿ ನೀಡಿದ್ದಾರೆ. ಸುಮಾರು ಆರು ದಶಕಗಳ ಕಾಲ ಲತಾ ಮಂಗೇಶ್ಕರ್ ಮಧುಬಾಲಾರಿಂದ ಹಿಡಿದು ಪ್ರಿಯಾಂಕಾ ಚೋಪ್ರಾವರೆಗೆ ಲತಾ ದೀದಿ ತಮ್ಮ ಧ್ವನಿ ನೀಡಿದ್ದಾರೆ.
ಇದನ್ನೂ ಓದಿ-Lata Mangeshkar ಜೀವನಕ್ಕೆ ಸಂಬಂಧಿಸಿದ ಕೆಲ ಕೇಳರಿಯದ ಸಂಗತಿಗಳು ಇಲ್ಲಿವೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.