ದಿಪಿಕಾರನ್ನು ಬಿಗಿದಪ್ಪಿ ಗೊಳೋ ಎಂದು ಅತ್ತ ಐಶ್ವರ್ಯಾ ರೈ..!ಇದಕ್ಕೆ ಕಾರಣ ಏನು..?
Aishwarya Rai : ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಡೀ ಬಾಲಿವುಡ್ ಸೇರಿತ್ತು. ಗರ್ಭಿಣಿ ದೀಪಿಕಾ ಪಡುಕೋಣೆ ಅಂಬಾನಿಯವರ ಎಲ್ಲಾ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದರಲ್ಲಿ ದಿಪಿಕಾ ಐಶ್ವರ್ಯಾ ರೈ ಅವರೊಂದಿಗೆ ಇರುವ ವೀಡಿಯೊ ವೈರಲ್ ಆಗುತ್ತಿದೆ
Aishwarya Rai : ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಡೀ ಬಾಲಿವುಡ್ ಸೇರಿತ್ತು. ಗರ್ಭಿಣಿ ದೀಪಿಕಾ ಪಡುಕೋಣೆ ಅಂಬಾನಿಯವರ ಎಲ್ಲಾ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದರಲ್ಲಿ ದಿಪಿಕಾ ಐಶ್ವರ್ಯಾ ರೈ ಅವರೊಂದಿಗೆ ಇರುವ ವೀಡಿಯೊ ವೈರಲ್ ಆಗುತ್ತಿದೆ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ದೀಪಿಕಾ ಪಡುಕೋಣೆ ಮತ್ತು ಐಶ್ವರ್ಯ ರೈ ಪರಸ್ಪರ ಪ್ರೀತಿಯ ಮಳೆಗರೆಯುತ್ತಿದ್ದರು. ಇಬ್ಬರೂ ಒಟ್ಟಿಗೆ ಯಾವುದೇ ಚಿತ್ರ ಮಾಡದಿದ್ದರೂ, ವಾಸ್ತವದಲ್ಲಿ ಅವರ ನಡುವೆ ಉತ್ತಮ ಬಾಂಧವ್ಯವಿದೆ ಎಂಬುದು ಈ ವೀಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ದೀಪಿಕಾ ಪಡುಕೋಣೆಯನ್ನು ನೋಡಿದ ತಕ್ಷಣ ಐಶ್ವರ್ಯಾ ರೈ ತಡೆಯಲಾರದೆ ನಟಿಯನ್ನು ತಬ್ಬಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋದಲ್ಲಿ ಐಶ್ವರ್ಯಾ ರೈ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಆದರೆ ದೀಪಿಕಾಳನ್ನು ನೋಡಿದ ನಂತರ ತುಂಬಾ ಐಶರ್ಯಾ ತುಂಬಾ ಭಾವುಕರಾದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ.
ಇದನ್ನೂ ಓದಿ: ಸೈಟಿಂಸ್ಟ್ ಆಗಬೇಕು ಎಂದು ಕನಸುಕಂಡಿದ್ದ ಕಾಶಿನಾಥ್ ಬಣ್ಣದ ಲೋಕದತ್ತ ವಾಲಿದ್ದು ಏಕೆ ಗೊತ್ತಾ..?
ಈ ನಡುವೆ ಐಶ್ವರ್ಯಾ ರೈ ಬಚ್ಚನ್ ಕುಟುಂಬದಿಂದ ದೂರವಾಗಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ವಾಸ್ತವವಾಗಿ, ನಟಿ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಸಮಾರಂಭಕ್ಕೆ ಬಂದಿದ್ದರು. ಮತ್ತೊಂದೆಡೆ, ಬಚ್ಚನ್ ಕುಟುಂಬ ಪ್ರತ್ಯೇಕವಾಗಿ ಸಮಾರಂಭಕ್ಕೆ ಆಗಮಿಸಿತ್ತು. ಈ ಇಡೀ ಸಮಾರಂಭದಲ್ಲಿ, ಐಶ್ವರ್ಯಾ ಒಮ್ಮೆಯೂ ತನ್ನ ಅತ್ತೆಯೊಂದಿಗೆ ಕಾಣಿಸಿಕೊಂಡಿರಲಿಲ್ಲ. ಇದರಿಂದಾಗಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವೆ ವಿಚ್ಛೇದನದ ಚರ್ಚೆ ತೀವ್ರಗೊಂಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಆದಾಗ್ಯೂ, ಈ ಎಲ್ಲಾ ವದಂತಿಗಳ ನಡುವೆ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಇಬ್ಬರೂ ತಮ್ಮ ಮಗಳು ಆರಾಧ್ಯ ಜೊತೆ ಕಾಣಿಸಿಕೊಂಡಿದ್ದರು. ಈ ಚಿತ್ರ ಹೊರಬಿದ್ದ ಬಳಿಕ ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ. ಕೆಲ ಅಭಿಮಾನಿಗಳು ಇಬ್ಬರ ನಡುವೆ ಏನೋ ಸರಿಯಿಲ್ಲ ಎನ್ನುತ್ತಿದ್ದಾರೆ.