ಚಕ್ರವರ್ತಿ ಕಿಚ್ಚ ಸುದೀಪ್‌ಗೆ ವಿಶ್ವಾದ್ಯಂತ ಅಭಿಮಾನಿ ಬಳಗವಿದೆ. ಜಗತ್ತಿನ ಅನೇಕ ಫೇಮಸ್‌ ವ್ಯಕ್ತಿಗಳು, ಕ್ರಿಕೆಟ್‌ ಆಟಗಾರರು, ನಟ-ನಟಿಯರು ಕಿಚ್ಚನನ್ನು ಮೆಚ್ಚಿಕೊಂಡಿದ್ದಾರೆ. ಕ್ರಿಕೆಟ್‌ ಎಂದರೆ ಕಿಚ್ಚ ಸುದೀಪ್‌ಗೆ ಹಾಟ್‌ ಫೇವರೇಟ್‌ ಅನ್ನೋದು ಎಲ್ಲರಿಗೂ ತಿಳಿದ ವಿಚಾರವೆ ಆಗಿದೆ. ಇದೀಗ ಖ್ಯಾತ ಕ್ರಿಕೆಟರ್‌ ಕಡೆಯಿಂದ ಸುದೀಪ್‌ಗೆ ಒಂದು ಸರ್​​ಪ್ರೈಸ್ ಗಿಫ್ಟ್ ಸಿಕ್ಕಿದೆ. ಈ ಉಡುಗೊರೆ ನೀಡಿರುವುದು ಬೇರಾರೂ ಅಲ್ಲ, ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್, ರಾಜಸ್ಥಾನ ರಾಯಲ್ಸ್ ತಂಡವನ್ನು 2022ರ ಐಪಿಎಲ್ ನಲ್ಲಿ ಏಕಾಂಗಿಯಾಗಿ ಫೈನಲ್ ಹಂತಕ್ಕೆ ತಂದ ಆರಂಭಿಕ ಆಟಗಾರ ಜೋಸ್ ಬಟ್ಲರ್. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Priyanka Chopra: 22 ವರ್ಷಗಳ ಹಿಂದೆ ಹಿಂಗಿದ್ರು ನಟಿ ಪ್ರಿಯಾಂಕಾ ಚೋಪ್ರಾ!


ಇಂಗ್ಲೆಂಡ್‌ನ ಪ್ರಸಿದ್ಧ ಆಟಗಾರ ಜೋಸ್ ಬಟ್ಲರ್ ನಟ ಕಿಚ್ಚ ಸುದೀಪ್‌ಗೆ ತಮ್ಮ ಕ್ರಿಕೆಟ್ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸುದೀಪ್‌ ಹಾಗೂ ಅವರ ಕ್ರಿಕೆಟ್‌ ಪ್ರೀತಿಯ ಗೌರವಾರ್ಥ ತಮ್ಮ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. 


ಈ ಬಗ್ಗೆ ವಿಡಿಯೋ ಮಾಡಿರುವ ನಟ ಸುದೀಪ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಮೊದಲಿಗೆ ನಾನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಧನ್ಯವಾದ ಹೇಳಬೇಕು. ರಾಜಸ್ಥಾನ ರಾಯಲ್ಸ್‌ ಹಾಗೂ ನನ್ನ ಗೆಳೆಯ ಕಾರಿಯಪ್ಪ ಅವರಿಂದ ಇದು ಸಾಧ್ಯವಾಗಿದೆ. ಈ ವಿಡಿಯೋ ವಿಶೇಷವಾಗಿ ಜೋಸ್‌ ಬಟ್ಲರ್‌ ಅವರಿಗೆ. ಸರ್, ಖುದ್ದಾಗಿ ಈ ಬ್ಯಾಟ್‌ ಕಳಿಸಿದ್ದಕ್ಕೆ ತುಂಬಾ ಧನ್ಯವಾದ. ಅದ್ಭುತವಾದ ಐಪಿಎಲ್ ಸೀಸನ್‌ ನಿಮ್ಮದಾಗಿತ್ತು. ಅದಕ್ಕೆ ಅಭಿನಂದನೆಗಳು. ನೀವು ಕಳುಹಿಸಿರುವ ಈ ಬ್ಯಾಟ್‌ ಅನ್ನು ನಾನು ಬಹಳ ಜಾಗೂಕತೆಯಿಂದ ಇಟ್ಟುಕೊಳ್ಳುತ್ತೇನೆ" ಎಂದು ಸುದೀಪ್‌ ಹೇಳಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಈ ಬ್ಯಾಟ್‌ ಮೇಲೆ ಬಟ್ಲರ್‌ ಅವರ ಸಹಿ ಇರುವುದು. 


 


ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಕಾವ್ಯಾ ಶಾ-ವರುಣ್‌


ಕಿಚ್ಚನ ಈ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ರಾಜಸ್ಥಾನ್ ರಾಯಲ್ಸ್ ತಂಡವು, ಸುದೀಪ್ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದ ಪೋಟೋವೊಂದನ್ನು ಹಂಚಿಕೊಂಡಿದೆ. ಅಲ್ಲದೇ, ಬಟ್ಲರ್ ತಮಗೆ ಬ್ಯಾಟ್ ನೀಡಿದ ಪ್ರತಿಯಾಗಿ ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ ತಂಡದ ಪರವಾಗಿ ಆಡಿದ್ದ ವೇಳೆ ಸುದೀಪ್‌ ಧರಿಸಿದ್ದ ವಿಕೆಟ್ ಕೀಪಿಂಗ್ ಗ್ಲೌಸ್ ನೀಡುವಂತೆ ರಾಜಸ್ಥಾನ್‌ ರಾಯಲ್ಸ್‌ ತಂಡ ಕೇಳಿಕೊಂಡಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.