Sadhu Kokila: ಕನ್ನಡದ ಸಂಗೀತ ನಿರ್ದೇಶಕ, ಹಾಸ್ಯ ನಟ ಸಾಧು ಕೋಕಿಲ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಅಭಿನಯಿಸಿ, ಜನರನ್ನು ರಂಜಿಸಿದ್ದಾರೆ. ಇದೀಗ ಸಾಧು ಕೋಕಿಲ ಎಂದೇ ಖ್ಯಾತರಾದ ಇವರಿಗೆ ಈ ಹೆಸರು ಬಂದ ಇಂಟರೆಸ್ಟಿಂಗ್‌ ಕಥೆಯನ್ನು ನಾವು ನಿಮಗೆ ಹೇಳಲಿದ್ದೇವೆ. ಈ ವಿಷಯವನ್ನ ಸ್ವತಃ ಸಾಧು ಆಗಾಗ ಹೇಳುತ್ತಿರುತ್ತಾರೆ.


COMMERCIAL BREAK
SCROLL TO CONTINUE READING

ಸಾಧು ಅವರು ಒಬ್ಬ ಸಂಗೀತ ನಿರ್ದೇಶಕರಾಗಿ  ಸಿನಿಮಾರಂಗಕ್ಕೆ ಬಂದರು. 1993 ರಲ್ಲಿ "ಶ್" ಸಿನಿಮಾಗೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದರು. ಆ ಸಿನಿಮಾದಿಂದ ಅವರಿಗೆ ಕೋಕಿಲ ಎಂಬ ಪದ ಸಿಕ್ಕಿದ್ದು. ಹೌದು, ಕೋಕಿಲ ಅಂದರೆ ಸಂಗೀತ. ಹೀಗಾಗಿ ಸಾಧು ಅವರಿಗೆ ಸ್ವತಃ ಉಪೇಂದ್ರ ಅವರೇ ಕೋಕಿಲ ಎಂದು ಕರೆದರಂತೆ. ಬಳಿಕ ಇದು ಸಾಧು ಕೋಕಿಲ ಆಯಿತಂತೆ. ಈ ಹೆಸರಿನ ಮೂಲಕವೇ ಸಾಧು ಕೋಕಿಲ ಖ್ಯಾತಿ ಪಡೆದರು. 


ಇದನ್ನೂ ಓದಿ: ನಟ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ ʼಗಣʼ ಟೀಸರ್ ಔಟ್‌..!‌


ಶ್ ಚಿತ್ರದಲ್ಲಿ ಇನ್ನೂ ಒಂದು ವಿಶೇಷವಿದೆ. ಈ ಸಿನಿಮಾದಲ್ಲಿ ಸಾಧು ಕೋಕಿಲ ಒಂದು ಪುಟ್‌ ರೋಲ್‌ ಮಾಡಿದ್ದಾರೆ. ಈ ಮೂಲಕ ಅವರ ನಟನಾ ವೃತ್ತಿ ಕೂಡ ಶುರುವಾಯಿತು. ಆದರೆ ಸಾಧು ಕೋಕಿಲ ಅನ್ನುವ ಹೆಸರು 2003 ರಲ್ಲಿ ಬದಲಾಯಿತು. 


ಉಪೇಂದ್ರ ನಟನೆಯ ರಕ್ತ ಕಣ್ಣಿರು ಸಿನಿಮಾ ನಿರ್ಮಾಪಕ ಮುನಿರತ್ನ ಅವರು ಮತ್ತೊಮ್ಮೆ ಸಾಧು ಹೆಸರನ್ನು ಬದಲಿಸಿದರಂತೆ. ಸಂಖ್ಯಾಶಾಸ್ತ್ರದ ಪ್ರಕಾರ ಸಾಧು ಕೋಕಿಲ ಅಂತ ಇದ್ರೆ ಸರಿ ಹೊಂದದ ಕಾರಣ, K ಅನ್ನೋದು ಮೊದಲು ಬರಬೇಕು ಎಂದು ಹೇಳಿ ಕೋಕಿಲ ಸಾಧೂ ಎಂದು ಹೆಸರು ಬದಲಿಸಿದರಂತೆ.  


ಇದನ್ನೂ ಓದಿ: ಶೂಟಿಂಗ್ ವೇಳೆ ಶಾರುಖ್‌ಗೆ ಗಂಭೀರ ಗಾಯ, ಶಸ್ತ್ರಚಿಕಿತ್ಸೆಗೆ ಒಳಗಾದ ಕಿಂಗ್‌ ಖಾನ್‌!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.