Sandalwood News: ನಟಿ ಭಾವನಾ ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾಗಳನ್ನು ಮಾಡಿದ್ದದರೂ ಸಹ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ. ಅಪ್ಪು ಜೊತೆ ಜಾಕಿ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಇವರು ಕನ್ನಡದ ಬಹುತೇಕ ಸ್ಟಾರ್‌ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ನಟಿ ಭಾವನಾ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಅಲ್ಲಿ ತಮಗೆ ಕಾಡುವ ನೆನಪುಗಳ ಕುರಿತು ಮನಬಿಚ್ಚಿ ಮಾತಾನಡಿದ್ದಾರೆ. ಅವರಿಗೆ ಕಾಡುವ ಮರೆಯಾಗದ ನೆನೆಪೆಂದರೇ ಅವರ ತಂದೆ.. ಸಂದರ್ಶನದಲ್ಲಿ ಅವರ ಅಗಲುವಿಕೆಯ ಬಗ್ಗೆಯೇ ನಟಿ ಹೇಳಿಕೊಂಡಿದ್ದಾರೆ. 


ಇದನ್ನೂ ಓದಿ-ದಳಪತಿ ವಿಜಯ್ ನಟನೆಯ "ಲಿಯೋ" ಸಿನಿಮಾ ಕೇರಳದಲ್ಲಿ ಬೈಕಾಟ್...! ಕಾರಣವೇನು?


ಈ ಕುರಿತು ಮಾತನಾಡಿದ ಅವರು "ನನ್ನ ತಂದೆಯ ಸಾವಿನ ನೋವು ಇನ್ನೂ ನ್ನನ್ನಿಂದ ದೂರವಾಗಿಲ್ಲ, ಅಲ್ಲದೇ ಅದು ಹಾಗೆಯೇ ಇರುತ್ತದೆ. ನಾನು ಹೊರಗೆ ಎಷ್ಟೇ ನಗುತ್ತಾ ಇದ್ದರೂ ಒಳಗಿನ ನೋವು ಮಾತ್ರ ಇಂದಿಗೂ ಆರಿಲ್ಲ. ಇಷ್ಟು ವರ್ಷವಾದರೂ ಆ ನೋವಿನಿಂದ ಹೊರಬರಲು ನನ್ನಿಂದಾಗುತ್ತಿಲ್ಲ. ಜೀವನ ತುಂಬಾ ಬದಲಾಗಿದೆ. ಆದರೆ ನನ್ನ ತಂದೆ ನನ್ನ ಜೊತೆ ಇಲ್ಲ ಎನ್ನುವುದು ಪ್ರತಿ ಸಲ ಕಾಡುವ ನೋವು. ಈ ಕಡುವಿಕೆ ಒಮ್ಮೊಮ್ಮೆ ಹೆಚ್ಚು., ಒಮ್ಮೆ ಕಡಿಮೆ. ಆದರೆ ಆ ನೋವು ಇಂದಿಗೂ ಹಾಗೆಯೇ ಇದೆ" ಎಂದಿದ್ದಾರೆ. 


ಭಾವನಾ ಅವರ ತಂದೆ ಬಾಲಚಂದ್ರ ಅವರು 59ವರ್ಷಕ್ಕೆ ಇಹಲೋಕ ತ್ಯಜಿಸಿದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಬಾಲಚಂದ್ರ ಅವರು ಮತ್ತೆ ಮನೆಗೆ ಮರಳಿ ಬರಲೇ ಇಲ್ಲ. ಇನ್ನು ಭಾವನಾ ಪ್ರತಿ ವೇದಿಕೆಯಲ್ಲೂ ತಮ್ಮ ತಂದೆಯನ್ನು ನೆನಪಿಸಿಕೊಳ್ಳುತ್ತಾ...ನಾನು ಈ ಮಟ್ಟಕ್ಕೆ ಬೆಳೆಯಲು ನನ್ನ ತಂದೆಯೇ ಪ್ರಮುಖ ಕಾರಣ ಎಂದು ನೆನಪು ಮಾಡಿಕೊಳ್ಳುತ್ತಾರೆ. 


ಇದನ್ನೂ ಓದಿ-ಬಹುನಿರೀಕ್ಷಿತ ʼನಿರ್ಭಯ 2ʼ ಚಿತ್ರದ ಟೀಸರ್ ರಿಲೀಸ್‌..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.