ನವದೆಹಲಿ: ರಜನಿಕಾಂತ್ ಮತ್ತು  ಅಕ್ಷಯ್ ಕುಮಾರ್ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ 2.0 ಇನ್ನು ಬಿಡುಗಡೆಯೇ ಆಗಿಲ್ಲ, ಆದರೆ ಅದು ಈಗಾಗಲೇ 370 ಕೋಟಿ ರೂ ಗಳನ್ನು ಗಳಿಸಿದೆ. 


COMMERCIAL BREAK
SCROLL TO CONTINUE READING

ಸುಮಾರು 500 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರ, ಈಗ ಸೆಟಲೈಟ್ ರೈಟ್ಸ್, ಡಿಜಿಟಲ್ ರೈಟ್ಸ್ ಮತ್ತು ವಿತರಣಾ ಹಕ್ಕುಗಳ ಮೂಲಕ ಬರೋಬ್ಬರಿ 370 ಕೋಟಿ ರೂಗಳನ್ನು ಗಳಿಸಿದೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.



ಈ ಚಿತ್ರವು ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು. ಇದನ್ನು ನಿರ್ಮಾಪಕರು ಉತ್ತರ ಭಾರತದ ಹಿಂದಿ ಬೆಲ್ಟ್ , ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳದಲ್ಲಿ ವಿತರಣಾ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆ ಆದರೆ ತಮಿಳುನಾಡು ಮತ್ತು ವಿದೇಶದ ಹಕ್ಕನ್ನು ಉಳಿಸಿಕೊಂಡಿದ್ದಾರೆ.


ಸೆಟಲೈಟ್ ರೈಟ್ಸ್ : ರೂ. 120 ಕೋಟಿ (ಎಲ್ಲ ಆವೃತ್ತಿಗಳು)


ಡಿಜಿಟಲ್ ರೈಟ್ಸ್: ರೂ. 60 ಕೋಟಿ (ಎಲ್ಲಾ ಆವೃತ್ತಿಗಳು)


ಉತ್ತರ ಬೆಲ್ಟ್ ರೈಟ್ಸ್ : ರೂ. 80 ಕೋಟಿ ರೂ


ಆಂಧ್ರ ಪ್ರದೇಶ / ತೆಲಂಗಾಣ ಹಕ್ಕುಗಳು: ರೂ. 70 ಕೋಟಿ


ಕರ್ನಾಟಕ ಹಕ್ಕುಗಳು: ರೂ. 25 ಕೋಟಿ


ಕೇರಳ ಹಕ್ಕುಗಳು: ರೂ. 15 ಕೋಟ


ಒಟ್ಟು: ರೂ. 370 ಕೋಟಿ


ಬಾಲಿವುಡ್ ಹಂಗಮಾ ವರದಿ ಹೇಳುವಂತೆ ಉಳಿದಿರುವ 130 ಕೋಟಿ ರೂ ಚಿತ್ರದ ಕಥೆ ಚೆನ್ನಾಗಿದ್ದರೆ ಮೊದಲ ವಾರದಲ್ಲೇ ಬರಲಿದೆ ಎಂದು ಅದು ತಿಳಿಸಿದೆ. ಇತ್ತೀಚೆಗೆ, ಯಶ್ ರಾಜ್ ಫಿಲ್ಮ್ಸ್ ಚಿತ್ರ ಥಗ್ಸ್ ಆಫ್ ಹಿಂದೂಸ್ಥಾನ್  ಬಾಕ್ಸ್ ಆಫೀಸ್ ನಲ್ಲಿ ವಿಫಲವಾಯಿತು.