Soundarya Death Anniversary: ನಟಿ ಸೌಂದರ್ಯ ಎನ್ನುತ್ತಿದ್ದಂತೆಯೇ ಮೊದಲು ನೆನಪಿಗೆ ಬರುವುದು ಆಕೆಯ ಹೆಸರಿನಲ್ಲೇ ಇದ್ದ ಮಾಸದ ಬ್ಯೂಟಿ. ಅಗಲಿ 19 ವರ್ಷವಾದರೂ ಇಂದಿಗೂ ಎಲ್ಲರ ಮನದಲ್ಲಿ ಅಜಾರಮರವಾಗಿದ್ದಾರೆ. ಕಾರಣ ಆಕೆಯ ಚೊಚ್ಚಲ ನಟನೆ ಹಾಗೂ ತನ್ನ ಸೌಂದರ್ಯದ ಮೂಲಕ ಎಲ್ಲರ ಮನದಲ್ಲಿ ನೆಲೆದಿದ್ದಾಳೆ.


COMMERCIAL BREAK
SCROLL TO CONTINUE READING

ಕನ್ನಡದ ಕುವಾರಿ 18 ಜುಲೈ 1972 ರಂದು ಕೋಲಾರದಲ್ಲಿ ಜನಿಸಿದರು. ಮೊದಲು ಇವರಿಗೆ ಸೌಮ್ಯ ಎಂದು ಹೆಸರಿಡಲಾಯಿತು. ಬಳಿಕ ಆಕೆಯ ಬ್ಯೂಟಿಗೆ ಸೌಂದರ್ಯ ಎಂದು ಬದಲಾಯಿಸಲಾಯಿತಂತೆ!


ಇದನ್ನೂ ಓದಿ: SCAM (1770) ಚಿತ್ರದ ಟೀಸರ್ ರಿಲೀಸ್‌ ಮಾಡಿದ ಹಿರಿಯ ನಟ ದತ್ತಣ್ಣ


ಅಂದಿನ ಬ್ಯೂಟಿ ಕ್ವೀನ್‌  ಹಲವು ಭಾಷೆಗಳ ನಟಿಸಿದ್ದರೂ ಹೆಚ್ಚು ತೆಲುಗು ಚಿತ್ರಗಳನ್ನು ಮಾಡಿ ಪ್ರೇಕಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಟಿ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನಟ ವಿಷ್ಣುವರ್ಧನ್‌ ಸೇರಿದಂತೆ ಕಮಲ್ ಹಾಸನ್ , ರಜನಿಕಾಂತ್ ಅವರಂತಹ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ್ದರು.


ಹಿಂದಿಯ  ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಜೊತೆಯಲ್ಲಿನ  ‘ಸೂರ್ಯವಂಶಂ’ ಚಿತ್ರ ಅವರಿಗೆ ಬಹು ದೊಡ್ಡ ಖ್ಯಾತಿ ತಂದು ಕೊಟ್ಟಿತ್ತು. ಸ್ಯಾಂಡಲ್ ವುಡ್ ನಲ್ಲಿ ರವಿಚಂದ್ರನ್‌ ಜೊತೆಗೆ ಸಿಪಾಯಿ ಸಿನಿಮಾ ಮಾತ್ರವಲ್ಲದೇ, ಬ್ಲಾಕ್‌ ಬಸ್ಟರ್‌ ಅಪ್ತಮಿತ್ರ ಚಿತ್ರದಲ್ಲಿ ಗಂಗಾ ಪಾತ್ರಧಾರಿಯ ಆಕೆಯ ನಟನೆ ಇಂದಿಗೂ ಮೈ ಜುಮ್ಮೆನಿಸುತ್ತೆ. 


ಇದನ್ನೂ ಓದಿ: "ಪುಡ್‌ ಡೆಲಿವರಿ ಬಾಯ್‌ ಜೊತೆ ಅಮಾನವೀಯವಾಗಿ ನಡೆದುಕೊಂಡ ಹೃತಿಕ್ ರೋಷನ್ ಬಾಡಿಗಾರ್ಡ್‌"


ಸಿನಿಮಾ  ಅಷ್ಟೇ ಅಲ್ಲದೇ  2004ರಲ್ಲಿ ರಾಜಕೀಯಕ್ಕೂ ಕಾಲಿಟ್ಟ ಇವರು, ಮತ ಕೇಳಲು  ಏಪ್ರಿಲ್ 17 ರಂದು  ಹೋಗದೆ ಇದ್ದಿದ್ದರೇ ಬಹುಷಃ ಸಿನಿಮಾದ ಮೂಲಕ ಇಂದಿಗೂ ತೆರೆಯ ಮೇಲೆ ಇರುತ್ತಿದ್ದರೆನ್ನಿಸುತ್ತದೆ.  


ಹೌದು,  2004ರಲ್ಲಿ  ಲೋಕಸಭೆ ಚುನಾವಣೆ ವೇಳೆ  ಮತ ಕೇಳುವ ಸಲುವಾಗಿ  ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ವಿಮಾನದಲ್ಲಿ ಹೋಗಬೇಕಿತ್ತು. ಆ ವೇಳೆ ವಿಮಾನವು 100 ಅಡಿ ಎತ್ತರಕ್ಕೆ ಹಾರುತ್ತಿದ್ದಂತೆ  ಪತನ ಗೊಂಡಿದೆ. ಪತನಗೊಂಡ ಪರಿಣಾಮ ಎಲ್ಲರ ಪ್ರೀತಿಗೆ ಪಾತ್ರವಾದ ನಟಿ ನಟಿ ಸೌಂದರ್ಯಳನ್ನು ಕಳೆದುಕೊಳ್ಳಬೇಕಾಯಿತು. ಆಕೆಯ ಆಗಲಿ 19 ವರ್ಷವಾದರೂ ಇಂದಿಗೂ ಕನ್ನಡಿಗರ ಮನದಲ್ಲಿ ಮಾತ್ರವಲ್ಲದೇ ಎಲ್ಲ ಸಿನಿ ಪ್ರಿಯರ ಮನದಲ್ಲಿ ನೆಲೆಸಿದ್ದಾರೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.