ನವದೆಹಲಿ: ಸದಾ ಒಂದಿಲ್ಲೊಂದು ವಿವಾದದಲ್ಲಿ ಇರುವ ಬಾಲಿವುಡ್ ಕ್ವೀನ್ ರಾಖಿ ಸಾವಂತ್ ಈಗ ಮದುವೆಗೆ ಮುಂದಾಗುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು ,ಈ ವಿಷಯವನ್ನು ಬುಧುವಾರ ಸ್ವತಃ ರಾಖಿ ಸಾವಂತ್ ಈಗ ಇನ್ಸ್ಟಾಗ್ರಾಂನಲ್ಲಿ ಲಗ್ನ ಪತ್ರವನ್ನು ಹಂಚಿಕೊಂಡಿದ್ದಾರೆ.ಅಷ್ಟಕ್ಕೂ ಅವರು ಮದುವೆಯಾಗುತ್ತಿರುವ ವ್ಯಕ್ತಿ ಯಾರು ಗೊತ್ತಾ? 


ಕರಣ್ ಜೋಹರ್ ನಡೆಸಿಕೊಡುವ 'ಇಂಡಿಯಾ ಗಾಟ್ ಟಾಲೆಂಟ್' ನಲ್ಲಿ ಕಾಣಿಸಿಕೊಂಡಿದ್ದ ದೀಪಕ್ ಕಲಾಲ್ ಎನ್ನುವ ವ್ಯಕ್ತಿಯನ್ನು ಈಗ ರಾಖಿ ಸಾವಂತ್ ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಅವರ ಆಮಂತ್ರಣ ಪತ್ರಿಕೆಯಲ್ಲಿ ಎರಡು ಪ್ರೀತಿಯ ಹೃದಯಗಳು ಒಗ್ಗೂಡುತ್ತಿವೆ ಮತ್ತು ಶಾಶ್ವತ ಪ್ರೀತಿಯನ್ನು ಊಳಿಸಿಕೊಳ್ಳುವ ಭರವಸೆ ನೀಡುತ್ತೇವೆ ಎಂದು ಬರೆಯಲಾಗಿದೆ.



ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ದಿನಾಂಕ, ಸ್ಥಳ, ಸಮಯ ಎಲ್ಲವನ್ನು ಪ್ರಸ್ತಾಪಿಸಲಾಗಿದೆ.ಇನ್ನೊಂದೆಡೆಗೆ ದೀಪಕ್ ಕಲಾಲ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು " ರಾಖಿ ಸಾವಂತ್ ನಮ್ಮ ಮದುವೆ ಆಮಂತ್ರಣದ ಕಾರ್ಡ್ ನ್ನು ಆಕೆ ತನ್ನ ಇನ್ಸ್ಟಾಗ್ರಾಂ ನಲ್ಲಿ  ಹಂಚಿಕೊಂಡಿದ್ದು ಆದ್ದರಿಂದ ಆಕೆ ಇನ್ಸ್ಟಾಗ್ರಾಂ ಖಾತೆಗೆ ಭೇಟಿ ನೀಡಿ  ಕಾಮೆಂಟ್ ಮಾಡಿ ಎಂದು ಅವರು ತಿಳಿಸಿದ್ದಾರೆ.


ಇನ್ನೊಂದೆಡೆಗೆ ಈ ಮದುವೆ ಸುದ್ದಿ ವಿಚಾರವಾಗಿ ಮಾಧ್ಯಮಗಳಿಗೆ ತಿಳಿಸಿರುವ ರಾಖಿ ಸಾವಂತ್ " ಹೌದು ನಾವು ಮದುವೆಯಾಗುತ್ತಿವೆ.ಎಲ್ಲರೂ ಸಿನಿಮಾರಂಗದಲ್ಲಿ ಎಲ್ಲರು ಮದುವೆಯಾಗುತ್ತಿದ್ದಾರೆ. ಅದಕ್ಕೆ ನಾನು ಇದು ಮದುವೆಯಾಗಲು ಸೂಕ್ತ ಸಮಯವೆಂದು ಭಾವಿಸಿ ಮದುವೆಯಾಗುತ್ತಿದೇನೆ" ಎಂದು ಅವರು ತಿಳಿಸಿದರು.