ರಕ್ಷಿತ್ ಶೆಟ್ಟಿ ಫಸ್ಟ್ ಲವ್ ಇವರೇ.. ಅಂದು ಆ ನಗುವಿಗೆ ಮನಸೋತು ಅವಳ ಹಿಂದೆನೇ ಸುತ್ತಾಡಿದ್ದರಂತೆ!
Rakshit Shetty First Love: ನಟ ರಕ್ಷಿತ್ ಶೆಟ್ಟಿ ಫಸ್ಟ್ ಲವ್ ಯಾರೆಂಬ ಕುತೂಹಲ ಅನೇಕರಲ್ಲಿ ಇದೆ.
Rakshit Shetty Love story: ನಟ ರಕ್ಷಿತ್ ಶೆಟ್ಟಿ ಫಸ್ಟ್ ಲವ್ ಯಾರೆಂಬ ಕುತೂಹಲ ಅನೇಕರಲ್ಲಿ ಇದೆ. ರಕ್ಷಿತ್ ಶೆಟ್ಟಿ ಮೊದಲ ಕ್ಷಣ ಅವಳನ್ನು ಕಂಡಾಗ ಆದ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಆಕೆಯ ನಗುವಿಗೆ ಅವರು ಮನಸೋತಿದ್ದರಂತೆ. ಅವಳ ನಗು ಕಂಡು ಇಡೀ ದಿನ ಆಕೆಯ ಹಿಂದೆಯೇ ಸುತ್ತಿದ್ದರಂತೆ.
ಆ ಹುಡುಗಿಯನ್ನು ನೋಡಿ ಫಿದಾ ಆಗಿದ್ದ ಘಟನೆಯನ್ನು ರಕ್ಷಿತ್ ಶೆಟ್ಟಿ ನೆನಪಿಸಿಕೊಂಡಿದ್ದರು. ಅವತ್ತು ಬಸ್ ಹತ್ತಿದ ಆಕೆ ಹಿಂದೆ ತಿರುಗಿ ನನ್ನ ನೋಡಿ ನಕ್ಕಳು. ನನಗೆ ಒಂದು ಅವತ್ತು ಅದೊಂದು ಅದ್ಭುತ ಅನುಭವದಂತೆ ಅನಿಸಿತು. ನನ್ನ ಹೃದಯ ಅರಳಿತು. ಆ ಬಳಿಕ ಅವಳ ಹಿಂದೆನೇ ಸುತ್ತಾಡಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಕೆನ್ನೆಗೆ ಮುತ್ತಿಟ್ಟ ರಣ್‌ಬೀರ್ ಕಪೂರ್.. ‘ಅನಿಮಲ್’ ಸಕ್ಸಸ್ ಪಾರ್ಟಿಯಲ್ಲಿ ನಡೆದಿದ್ದೇನು?
ನಾವು ಟ್ರಿಪ್‌ಗೆ ಹೋದಾಗ ಈ ಘಟನೆ ನಡೆದಿತ್ತು. ನಾನು ಆ ಟ್ರಿಪ್ ಗೆ ಕ್ಯಾಮರಾ ತಗೊಂಡು ಹೋಗಿದ್ದೆ. ನನ್ನ ಕ್ಯಾಮರಾ ತುಂಬಾ ಬರೀ ಅವಳ ಫೋಟೊಗಳೇ ತುಂಬಿದ್ದವು ಎಂದು ರಕ್ಷಿತ್ ಹೇಳಿದ್ದಾರೆ.
ರಕ್ಷಿತ್ ಅವರು 9ನೇ ಕ್ಲಾಸ್‌ನಲ್ಲಿದ್ದಾಗ ತಮ್ಮದೇ ತರಗತಿ ಹುಡುಗಿಯನ್ನು ಕಂಡು ಲವ್ ಆಗಿತ್ತಂತೆ. ಈ ಹುಡುಗಿಯೇ ಅವರ ಫಸ್ಟ್ ಲವ್ ಅಂತೆ ಎಂದು ಹೇಳಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ ಹುಟ್ಟಿ ಬೆಳೆದಿದ್ದಾರೆ. ಉಡುಪಿಯಲ್ಲೇ ಶಾಲಾ ಶಿಕ್ಷಣ ಮುಗಿಸಿ ಬಳಿಕ ಇಂಜಿನಿಯರಿಂಗ್ ಓದಿದ ರಕ್ಷಿತ್ 2 ವರ್ಷ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿದ್ದಾರೆ. ಬಳಿಕ ಸಿನಿರಂಗಕ್ಕೆ ರಕ್ಷಿತ್ ಕಾಲಿಟ್ಟರು.
ಇದನ್ನೂ ಓದಿ: ಯಶ್ ಟಾಕ್ಸಿಕ್ ಸಿನಿಮಾಗೆ ಈ ಸೌತ್ ಬ್ಯೂಟಿಯೇ ಹೀರೋಯಿನ್.. ಕರೀನಾ, ಸಂಯುಕ್ತಾ, ಸಾಯಿ ಪಲ್ಲವಿ ಅಲ್ಲ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.