Actress Chithra: ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು ಸಾಲು ಸಾವುಗಳು ನೋವನ್ನು ತಂದಿವೆ, ಎರಡು ವರ್ಷಗಳ ಹಿಂದೆ ನಟಿ ಚಿತ್ರ ಅವರು ಆತ್ಮಹತ್ಯೆ ಮಾಡಿಕೊಂಡು  ಪ್ರಾಣ ಕಳೆದುಕೊಂಡಿದ್ದರು. ಇದೀಗ ಅವರ ತಂದೆ ಕೂಡ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸಿನಿಮಾ ಇಂಡಸ್ಟ್ರಿ ಬೆಚ್ಚಿಬಿದ್ದಿದೆ. 


COMMERCIAL BREAK
SCROLL TO CONTINUE READING

ಖ್ಯಾತ ದಾರವಾಹಿ ನಟಿ ಚಿತ್ರ ಚಿತ್ರ ಅವರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಟ್ಟಿದ್ದರು.      
ತಮ್ಮ ನಟನೆ ಹಾಗೂ ಸಿಂಪಲ್‌ ವ್ಯಕ್ತಿತ್ವದಿಂದ ತಮಿಳು ನಾಡಿನಲ್ಲಿ ಲಕ್ಷಾಂತರ ಜನರ ಮನ ಕದ್ದಿದ್ದ ನಟಿ ಚಿತ್ರ ದಿಢಿರನೇ ಪ್ರಾಣ ಕಳೆದುಕೊಂಡಿದ್ದರು, ಸುದ್ದಿ ಕೇಳಿ ಇಡೀ ಚಿತ್ರರಂಗ ಅಷ್ಟೆ ಅಲ್ಲದೆ ರಾಜ್ಯದ ಜನ ಬೆಚ್ಚಿ ಬಿದ್ದಿದ್ದರು, ನಟಿಯ ಸಾವಿನ ಸುದ್ದಿಯ ಕೇಳಿ ಇಡೀ ಚಿತ್ರರಂಗವೇ ಕಣ್ಣೀರು ಮಿಡಿದಿದತ್ತು. ರೆಸಾರ್ಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಎರಡು ವರ್ಷಗಳ ಹಿಂದೆ ನಟಿಯ ಮೃತ ದೇಹ ಪತ್ತೆಯಾಗಿತ್ತು. ನಟಿಯ ಭಾವಿ ಪತಿ ನೀಡಿದ ಕಿರುಕುಳದಿಂದ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಇಡೀ ಚಿತ್ರರಂಗದ್ಲಲ್ಲಿ ಚರ್ಚೆಯನ್ನುಂಟು ಮಾಡಿತ್ತು. 


ನಟಿ ಚಿತ್ರ ಅವರ ಸಾವನ್ನು ಇಂದಿಗೂ ಕೂಡ ಮರೆಯಲು ಅಸಾಧ್ಯ, ಎಲ್ಲರಿಗೂ ತುಂಬಾ ಹತ್ತಿರವಾಗಿದ್ದ ನಟಿ ಚಿತ್ರ ಅಷ್ಟು ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತಾರೆ ಎನ್ನುವ ಕಲ್ಪನೆ ಕೂಡ ಯಾರೊಬ್ಬರಿಗೂ ಇರಲಿಲ್ಲ. ಇದೀಗ ಮತ್ತೊಂದು ಬೆಚ್ಚಿ ಬೀಳಿಸುವ ಸುದ್ದಿ ಏನೆಂದರೆ, ನಟಿ ಚಿತ್ರ ಅವರ ತಂದೆ ಆತ್ಮ ಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.


ಹೌದು, ನಟಿ ಚಿತ್ರ ಅವರ ತಂದೆ ಕಾಮರಾಜ್‌ ಅವರು ವೃತ್ತಿಯಲ್ಲಿ ರಿಟೈರ್ಡ್‌ ಪೋಲಿಸ್‌ ಇನ್ಸ್‌ಪೆಕ್ಟರ್‌ ಆಗಿದ್ದರು, 2019 ರಲ್ಲಿ ಕೆಲಸದಿಂದ ನಿವೃತ್ತಿ ಕUಡ ಪಡೆದಿದ್ದರು. ಇತ್ತೀಚೆಗೆ ಎಷ್ಟು ಸಮಯವಾದರೂ ಕೂಡ ಕಾಮರಾಜ್‌ ಅವರು ಹೊರಗೆ ಬರದಿರುವುದನ್ನು ನೋಡಿ ಸಂಬಂಧಿಕರು ಹೋಗಿ ನೋಡಿದಾಗ ಎಲೆಕ್ಟ್ರಿಕ್‌ ಫ್ಯಾನ್‌ಗೆ ನೇಣು ಹಾಕಿಕೊಂಡು ಕಾಮರಾಜ್‌ ಅವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಗಳು ತೀರಿಕೊಂಡು ಎರಡೆ ವರ್ಷದಲ್ಲಿ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವುದು ಎಲ್ಲರಿಗೂ ಶಾಕ್‌ ನೀಡಿದೆ.


ಇನ್ನೂ, ವಿಚಾರ ತಿಳುತ್ತಿದ್ದಂತೆ ಸ್ಥಳಕ್ಕೆ ಪOಲಿಸರು ದೌಡಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಈ ವಿಚಾರ ತಿಳಿದು ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್