ಛೇ.. ದುರಂತ ನಟಿ: 15ನೇ ವಯಸ್ಸಿಗೆ ಚಿತ್ರರಂಗ ಪ್ರವೇಶ, ರಾತ್ರೋರಾತ್ರಿ ಸ್ಟಾರ್, ತನಗಿಂತ ಡಬಲ್ ವಯಸ್ಸಿನ ಹೀರೊ ಜತೆ ಮದುವೆ, ಕೆಲವೇ ದಿನಗಳಲ್ಲಿ ಮುರಿದು ಬಿದ್ದ ಸಂಬಂಧ…
Bollywood Famous Actress: ಇದು ಕಾಲ್ಪನಿಕ ಕತೆ ಎನಿಸಬಹುದು, ಆದರೆ ಸತ್ಯ. ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಬಂದು, ಮೊದಲ ಸಿನಿಮಾದಲ್ಲೇ ಅಪಾರ ಯಶಸ್ಸು ಗಳಸಿ, ಮುದುಕನ ವಯಸ್ಸಿನವನ್ನು ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಸಂಬಂಧ ಹಳಸಿ ಪರಿತಪಿಸಿದ ನಟಿ ಇವರು…
Dimple Kapadia: ಇದು ಕಾಲ್ಪನಿಕ ಕತೆ ಎಣಿಸಬಹುದು, ಆದರೆ ಸತ್ಯ. ಆ ನಟಿ ಚಿತ್ರರಂಗ ಪ್ರವೇಶ ಮಾಡಿದ್ದು 15ನೇ ವಯಸ್ಸಿನಲ್ಲಿ. ಮೊದಲ ಚಿತ್ರವೇ ಭರ್ಜರಿ ಹಿಟ್ ಆಯಿತು. ಆಕೆ ರಾತ್ರೋರಾತ್ರಿ ಸ್ಟಾರ್ ಆಗಿ ಬದಲಾದರು. ಬೆನ್ನಲ್ಲೇ ತನಗಿಂತ ಎರಡು ಪಟ್ಟು ವಯಸ್ಸಾಗಿರುವ ಸ್ಟಾರ್ ಹೀರೋ ಜೊತೆ ಮದುವೆಯಾದರು. ಕೆಲವೇ ವರ್ಷಗಳಲ್ಲಿ ಪ್ರೀತಿಸಿ ಒಂದಾಗಿದ್ದವರ ನಡುವೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತು. ಕಡೆವರೆಗೆಯೂ ಪ್ರತ್ಯೇಕವಾಗಿಯೇ ಉಳಿದರು. ಕೊನೆಗೆ ಗಂಡ ಬರೆದ ವಿಲ್ ನಲ್ಲಿ ಹೆಂಡತಿಗೆ ಬಿಡಿಗಾಸು ಇರಲಿಲ್ಲ…
ಈ ಕತೆ ಕೇಳಿದ ಯಾರಿಗೆ ಆಗಲಿ, ಆಕೆ ದುರಂತ ನಟಿ ಎನಿಸುತ್ತದೆ ಅಲ್ಲವೇ? ಆಕೆ ಬೇರಾರೂ ಅಲ್ಲ. ಒಂದು ಕಾಲದಲ್ಲಿ ಬಿಕನಿ, ಬೋಲ್ಡ್ ನಟನೆ ಮತ್ತು ಹಾಟ್ ಲುಕ್ ನಿಂದ ಬಾಲಿವುಡ್ ಅನ್ನು ಬೆಚ್ಚಿ ಬೀಳಿಸಿದ್ದ ಡಿಂಪಲ್ ಕಪಾಡಿಯಾ. ಇದೇ ಡಿಂಪಲ್ ಕಪಾಡಿಯಾ ಮಾಡಿದ ಮೊದಲ ಸಿನಿಮಾ ಬಾಬಿ ರಾಜ್ ಕಪೂರ್ ಮತ್ತು ರಿಷಿ ಕಪೂರ್ ವೃತ್ತಿ ಜೀವನಕ್ಕೂ ಮಹತ್ವದ ತಿರುವು ನೀಡಿತು.
ಇದನ್ನೂ ಓದಿ- ವಿಜಯಲಕ್ಷ್ಮೀ ದರ್ಶನ್ ಕೇವಲ ಅತ್ತಿಗೆ ಮಾತ್ರ ಅಲ್ಲ... ನಾವೇ ಲಕ್ಕಿ ಎಂದಿದ್ದೇಕೆ ದಿನಕರ್ ತೂಗುದೀಪ...
ಡಿಂಪಲ್ ಕಪಾಡಿಯಾ ನಟನೆಗೆ ಚಿತ್ರರಂಗ ಮನಸೋತಿತ್ತು. ಪಡ್ಡೆ ಹುಡುಗರು ಆಕೆಯದೇ ಚಿಂತೆಯಲ್ಲಿ ಗಡ್ಡಬಿಡತೊಡಗಿದರು. ಇಂಥ ಸಂದರ್ಭದಲ್ಲೇ ತನಗಿಂತ ಎರಡು ಪಟ್ಟು ವಯಸ್ಸಾಗಿದ್ದ ಖ್ಯಾತ ನಟ ರಾಜೇಶ್ ಖನ್ನಾ ಅವರನ್ನು ಪ್ರೀತಿಸಿ ಮದುವೆಯಾದರು. ಬೇಗನೆ ಎರಡು ಮಕ್ಕಳಾದವು. ಅವರೇ ಟ್ವಿಂಕಲ್ ಖನ್ನಾ ಮತ್ತು ರಿಂಕಿ ಖನ್ನಾ. ಮುಂದೆ ನಡೆದ್ದದ್ದೆಲ್ಲ ದುರಂತ. ಪ್ರೀತಿಸಿ ಮದುವೆಯಾಗಿದ್ದರೂ ದಂಪತಿಗಳಲ್ಲಿ ವಿರಸ ಉಂಟಾಗಿ ಕಡೆವರೆಗೂ ಪ್ರತ್ಯೇಕವಾಗಿಯೇ ಉಳಿದರು.
ಇದನ್ನೂ ಓದಿ- ಅಲ್ಲು ಅರ್ಜುನ್ ಜಾತಕದ ಬಗ್ಗೆ ಖ್ಯಾತ ಜ್ಯೋತಿಷಿಯಿಂದ ಸ್ಫೋಟಕ ಭವಿಷ್ಯ.! ಅಭಿಮಾನಿಗಳ ಎದೆಯಲ್ಲಿ ಢವ ಢವ..!
ಕೆಲದಿನಗಳ ಬಳಿಕ ಜೀವನ ನಿರ್ವಹಣೆ ಮತ್ತು ಮಕ್ಕಳ ಪೋಷಣೆಗಾಗಿ ಡಿಂಪಲ್ ಕಪಾಡಿಯಾ ಮತ್ತೆ ಬಣ್ಣ ಹಚ್ಚಿದರು. ಯಶಸ್ಸು ಮತ್ತೆ ಹುಡುಕಿಕೊಂಡು ಬಂತು. ಸಾಗರ್, ರುಡಾಲಿ, ಕ್ರಾಂತಿವೀರ, ದಿಲ್ ಛಹ್ತಾ ಹೈ ಮತ್ತಿತರ ಸಿನಿಮಾಗಳು ಹಿಟ್ ಆದವು. ಹೀಗೆ ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದ ಹೊತ್ತಿನಲ್ಲೇ ಗಂಡ ರಾಜೇಶ್ ಖನ್ನಾ ಅನಾರೋಗ್ಯಕ್ಕೆ ತುತ್ತಾದರು. ಕೆಲ ದಿನಗಳಲ್ಲಿ ಅವರು ಸಾವನ್ನಪ್ಪಿದ್ದರು. ರಾಜೇಶ್ ಖನ್ನಾ ಬರೆದಿದ್ದ ವಿಲ್ ನಲ್ಲಿ ಎಲ್ಲಾ ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿದ್ದರು. ಹೆಂಡತಿಯನ್ನು ಬರಿಗೈಯಲ್ಲಿ ಬಿಟ್ಟು ಹೋದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.