ಬೆಂಗಳೂರು: ಇಂದಿಗೂ ಹುಡುಗರು ಹುಡುಗಿಯರನ್ನು ಚುಡಾಯಿಸಬೇಕೆಂದರೆ ಹೇಳುವ ಡೈಲಾಗ್ 'ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ... '!!! ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದಲ್ಲಿ ಜಲೀಲನ ಪಾತ್ರದಲ್ಲಿ ಅಂಬರೀಶ್ ಹೇಳಿದ್ದ ಈ ಡೈಲಾಗ್ ಇಂದಿಗೂ ಸಖತ್ ಫೇಮಸ್ ಆಗಿದೆ.


COMMERCIAL BREAK
SCROLL TO CONTINUE READING

ವಿಷ್ಣುವರ್ಧನ್‌ ಮತ್ತು ಅಂಬರೀಶ್‌ ಇಬ್ಬರಿಗೂ ನಾಗರಹಾವು ಚೊಚ್ಚಲ ಚಿತ್ರ. ಜಲೀಲ್‌ ಪಾತ್ರಕ್ಕೆ ರಜನಿಕಾಂತ್‌ ಆಯ್ಕೆಯಾಗಿದ್ದರಾದರೂ ಕಾರಣಾಂತರಗಳಿಂದ ಅಂಬರೀಶ್‌ ಆ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಮೇರೆ ಸಪ್ನೋಂಕಿ ರಾಣಿ ಕಬ್‌ ಆಯೇಗೀತು ಹಾಡನ್ನು ತನ್ನದೇ ಶೈಲಿಯಲ್ಲಿ ಹೇಳುತ್ತ, 'ಹೇಯ್‌ ಬುಲ್‌ ಬುಲ್‌ ಮಾತಾಡಕಿಲ್ವಾ?' ಎಂದು ಅಂಬರೀಶ್‌ ಹೇಳಿದ್ದ ಈ ಡೈಲಾಗ್ ಇಂದಿಗೂ ಹುಡುಗರ ಬಾಯಲ್ಲಿ ಬರುವ ಕಾಮನ್ ಲೈನ್ಸ್... ಅಂಬರೀಶ್ ತಮ್ಮದೇ ಶೈಲಿನಲ್ಲಿ ಹೇಳೋ ಈ ಡೈಲಾಗ್ ನೀವೂ ಕೇಳಿ...