ಬೆಂಗಳೂರು: ಕನ್ನಡದ ಖ್ಯಾತ ದೂರದರ್ಶನ ನಿರೂಪಕಿ ಮತ್ತು ಮಾಜಿ ರೇಡಿಯೋ ಜಾಕಿ ಅಪರ್ಣಾ ವಸ್ತಾರೆ ಬೆಂಗಳೂರಿನ ಬನಶಂಕರಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿದ್ದು, ಕ್ಯಾನ್ಸರ್ ಕಾಯಿಲೆಯಿಂದಾಗಿ ಅವರು ಮೃತಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- Hathras tragedy: ಹೆಣಗಳ ರಾಶಿ ನೋಡಿ ಪೊಲೀಸ್‌ ಕಾನ್ಸ್‌ಟೇಬಲ್‌ಗೆ ಹೃದಯಾಘಾತ!


ಅವರು 1990 ರ ದಶಕದಲ್ಲಿ ಡಿಡಿ ಚಂದನದಲ್ಲಿ ಪ್ರಸಾರವಾದ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಮುಖ ನಿರೂಪಕಿಯಾಗಿ ಕೆಲಸ ಮಾಡುವ ಮೂಲಕ ಜನಪ್ರಿಯರಾಗಿದ್ದರು.ಕೇವಲ ನಿರೂಪಕಿಯಾಗಿ ಮಾತ್ರವಲ್ಲದೆ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು.1984 ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಚಿತ್ರ ಮಸಣದ ಹೂವು ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು 2015 ಮತ್ತು 2021 ರ ನಡುವೆ, ಅವರು ಕಾಮಿಡಿ ಶೋ, ಮಜಾ ಟಾಕೀಸ್‌ನಲ್ಲಿ ವರಲಕ್ಷ್ಮಿ ಪಾತ್ರವನ್ನು ನಿರ್ವಹಿಸಿದ್ದರು.


ಕಥುವಾದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರ ದಾಳಿ, ಹೊಣೆಹೊತ್ತ ಕಾಶ್ಮೀರ್ ಟೈಗರ್ಸ್


ಅಷ್ಟೇ ಅಲ್ಲದೆ ಅಪರ್ಣಾ ಅವರು ಮೂಡಲ ಮನೆ ಮತ್ತು ಮುಕ್ತ ಕಿರುತೆರೆಯಲ್ಲಿ ಪ್ರಸಾರವಾದ ಧಾರವಾಹಿಯಲ್ಲಿ ನಟಿಸಿದ್ದರು.2013 ರಲ್ಲಿ, ಅವರು ETV ಕನ್ನಡದಲ್ಲಿ ಪ್ರಸಾರವಾದ ಕನ್ನಡ ರಿಯಾಲಿಟಿ ಟೆಲಿವಿಷನ್ ಶೋ ಬಿಗ್ ಬಾಸ್‌ನ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.2011 ರಲ್ಲಿ ಅಪರ್ಣಾ ಅವರು ಬೆಂಗಳೂರು ಮೆಟ್ರೋಗಾಗಿ ಪ್ರಯಾಣಿಕರ-ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಗಾಗಿ ರಿಕಾರ್ಡಿಂಗ್ ಗೆ ಧ್ವನಿಯನ್ನು ನೀಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.